ಶಿಶಿಲ ನಿಧಿ ಶೋಧ ಪ್ರಕರಣ: ಮೂವರು ಶಂಕಿತರಿಗೆ ಕಲಂ 41 ಎ ಪ್ರಕಾರ ನೋಟೀಸು

Advt_NewsUnder_1
Advt_NewsUnder_1
Advt_NewsUnder_1

ಶಿಶಿಲ: ಧರ್ಮಸ್ಥಳ ಠಾಣಾ ವ್ಯಾಪ್ತಿಯ ಶಿಶಿಲ ಗ್ರಾಮದ ಕೋಟೆಬಾಗಿಲು ಎಂಬಲ್ಲಿ ಪಾಳುಬಿದ್ದ ಬಸದಿಯ ಬಳಿ ನಿಧಿಗಾಗಿ ಶೋಧ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಮೂವರು ಶಂಕಿತರ ವಿರುದ್ಧ ಐಪಿಸಿ ಕಲಂ 41 ಎ ಯಂತೆ ನೋಟೀಸು ನೀಡಲಾಗಿದೆ ಎಂದು ಧರ್ಮಸ್ಥಳ ಎಸ್‌ಐ ಅವಿನಾಶ್ ಸುದ್ದಿ ಗೆ ತಿಳಿಸಿದ್ದಾರೆ.
ಪ್ರಕರಣದಲ್ಲಿ ಈ ಮೂವರರಲ್ಲದೆ ಇನ್ನೂ ನಾಲ್ವರು ಭಾಗಿಯಾಗಿರುವ ಬಗ್ಗೆ ಪೊಲೀಸ್ ಇಲಾಖೆಗೆ ಖಚಿತಗೊಂಡಿದ್ದು, ಆ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಪ್ರಕ್ರೀಯೆಯ ಭಾಗವಾಗಿ ಈ ಮೂವರಿಗೆ ನೋಟೀಸು ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯನ್ನು ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರೂ ದೃಢಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.