HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕಾರು-ಟ್ಯಾಂಕರ್ ಅಪಘಾತ: ಪೆರಾಡಿ ಬಂಡಸಾಲೆಗುತ್ತಿನ ಮುಂಬೈ ಉದ್ಯಮಿ ದಂಪತಿ ಸಾವು

ಅಪಘಾತದಲ್ಲಿ ಮೃತಪಟ್ಟ ಅನಿಲ್ ಟಿ. ಶೆಟ್ಟಿ ಮತ್ತು ಕುಶಲ ಎ ಶೆಟ್ಟಿ ದಂಪತಿ
ಅಪಘಾತಕ್ಕೀಡಾದ ಬ್ರೀಝಾ ಕಾರು

 

ಪೆರಾಡಿ ಭಂಡಸಾಲೆ

ಪೆರಾಡಿ: ಧಾರವಾಡದ ಸಮೀಪ ಡಿ. 26 ರಂದು ಬೆಳಗ್ಗೆ ನಡೆದ ಬ್ರೀಝಾ ಕಾರು ಮತ್ತು ಟ್ಯಾಂಕರ್ ನಡುವೆ ನಡೆದ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಪೆರಾಡಿ ಭಂಡಸಾಲೆ ಗುತ್ತು ಮೂಲದ, ಮುಂಬೈಯಲ್ಲಿ ಉದ್ಯಮಿಯಾಗಿರುವ ದಂಪತಿ ಧಾರುಣವಾಗಿ ಮೃತಪಟ್ಟಿದ್ದಾರೆ.
ಮೃತರು ಅನಿಲ್ ಟಿ. ಶೆಟ್ಟಿ (65ವ.) ಮತ್ತು ಅವರ ಪತ್ನಿ ಕುಶಲ ಎ ಶೆಟ್ಟಿ (55ವ.) ಎಂಬವರಾಗಿದ್ದಾರೆ. ಜೊತೆ ಪ್ರಯಾಣಿಸುತ್ತಿದ್ದ ದಂಪತಿ ಪುತ್ರ ಶೈಲೇಂದ್ರ (35ವ.) ಅವರಿಗೆ ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪತ್ನಿ ಒಂದು ವಾರದ ಹಿಂದೆಯೇ ವಿವಾಹ ನಿಮಿತ್ತ ಮುಂಬೈಯಿಂದ ಪೆರಾಡಿಗೆ ಆಗಮಿಸಿದ್ದರು.
ಮೃತ ಅನಿಲ್ ಪಿ. ಶೆಟ್ಟಿಯವರು ಮರೋಡಿಯ ಭಂಡಸಾಲೆ ನಿವಾಸಿ ಸಂಜೀವ ಶೆಟ್ಟಿಯವರ ಸಹೋದರಿಯ ಪುತ್ರ (ಅಳಿಯ)ನಾಗಿರುತ್ತಾರೆ. ಸಂಜೀವ ಶೆಟ್ಟಿಯವರ ಪುತ್ರ ಸುಜಿತ್ ಅವರ ವಿವಾಹವು ಡಿ. 28 ರಂದು ಮೂಡಬಿದಿರೆಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು ಆ ಹಿನ್ನೆಲೆಯಲ್ಲಿ ಡಿ. 27 ರಂದು ಮನೆಯಲ್ಲಿ ನಡೆಯಬೇಕಿದ್ದ ಮದರಂಗಿ ಶಾಸ್ತ್ರಕ್ಕಾಗಿ ದಂಪತಿ ಮುಂಬೈಯಿಂದ ಬೆಳ್ತಂಗಡಿಗೆ ಪ್ರಯಾಣಿಸುತ್ತಿದ್ದರು. ತಾವಂದು ಕೊಂಡಂತೆ ಆಗುತ್ತಿದ್ದರೆ ಪೂರ್ವಾಹ್ನ 11 ಗಂಟೆಗೆ ತಲುಪಬೇಕಿತ್ತು.
ಮುಂಬೈ ಹೊಟೇಲ್ ಉದ್ಯಮಿ:
ಅನಿಲ್ ಟಿ. ಶೆಟ್ಟಿ ಅವರು ಮುಂಬೈ ಕುರ್ಲಾದಲ್ಲಿ ಹೊಟೇಲ್ ಉದ್ಯಮಿಯಾಗಿದ್ದಾರೆ. ಜೊತೆಗೆ ಫೈನಾನ್ಸ್ ಮತ್ತು ಇಲೆಕ್ಟ್ರಾನಿಕ್ಸ್ ಶೋರೂಮ್ ಹೊಂದಿದ್ದರು. ಭಂಡಸಾಲೆ ಮನೆಯ ಹಿರಿಯರಾಗಿದ್ದ ವೆಂಕಪ್ಪ ಶೆಟ್ಟಿ ಅವರ ಮೊಮ್ಮಗನಾಗಿರುವ ಅವರು ಕಳೆದ 30 ವರ್ಷಗಳಿಂದಲೂ ದೈವದೇವರ ಕಾರ್ಯಕ್ರಮಗಳಿಗಾಗಿ ಪ್ರತೀವರ್ಷ ಊರಿಗೆ ಬಂದು ಹೋಗುತ್ತಿದ್ದರು.
ಪ್ರತೀ ಫೆಬ್ರವರಿ ತಿಂಗಳಲ್ಲಿ ಕಟೀಲು ಮೇಳದ ಸೇವಾಟ ನಡೆಸಿಕೊಂಡು ಬರುತ್ತಿದ್ದರು. ಊರಿಗೆ ಬಂದಾಗ ವಿವಿಧ ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವು ಹಾಗೂ ಅನೇಕ ಮಂದಿ ಅರ್ಹರಿಗೆ ನೆರವು ನೀಡುವ ಮೂಲಕ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದರು. ಶಾಲೆಗಳ ಅಭಿವೃದ್ಧಿ, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಆರ್ಥಿಕವಾಗಿ ಸಹಕಾರ ನೀಡುತ್ತಾ ಬರುತ್ತಿದ್ದರು.
ಅಪಘಾತ ಸುದ್ದಿ ತಿಳಿಯುತ್ತಿ ದ್ದಂತೆ ಮೃತರ ಸಂಬಂಧಿಯೂ ಆಗಿರುವ ಪೆರಾಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಸಂಜೀವ ಶೆಟ್ಟಿ, ದೇವರಾಜ್ ಶೆಟ್ಟಿ ಮೊದಲಾದವರು ಘಟನಾ ಸ್ಥಳಕ್ಕೆ ತೆರಳಿದ್ದಾರೆ.
ಮದುವೆ ರದ್ದು
ಅಳಿಯನ ಸಾವಿನ ಘಟನೆಯಿಂದ ಮದುವೆ ಸಂಭ್ರಮದಲ್ಲಿದ್ದ ಪೆರಾಡಿ ಮನೆಯಲ್ಲಿ ಶೋಕಾಚರಣೆ ಮನೆಮಾಡಿದೆ. ಬುಧವಾರ ಮೆಹಂದಿ ಕಾರ್ಯಕ್ರಮ ನಿಗಧಿಯಾಗಿ ಹಲವು ಮಂದಿ ಸಂಬಂಧಿಕರು ಮನೆಯಲ್ಲಿ ಸಂಭ್ರಮ ಆಚರಿಸುತ್ತಿದ್ದರು. ಆದರೆ ವಿಧಿಯಾಟದ ಘಟನೆಗೆ ಮನೆಯಲ್ಲಿ ನೀರವ ಮೌನ ಮನೆ ಮಾಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.