ಡಿ. 26: ಅಂತಾರಾಷ್ಟ್ರೀಯ ವಾಗ್ಮಿ ಎಂ.ಎಂ ನೌಷಾದ್ ಬಾಖವಿ ಕಕ್ಕಿಂಜೆಗೆ

ಬೆಳ್ತಂಗಡಿ: ದಾರುಸ್ಸಲಾಂ ಎಜುಕೇಶನ್ ಸೆಂಟರ್ ಬೆಳ್ತಂಗಡಿ ಇದರ ವತಿಯಿಂದ ಕಕ್ಕಿಂಜೆಯ ಚಿಬಿದ್ರೆಯಲ್ಲಿ ಡಿ. 26 ರಂದು ಮಗ್ರಿಬ್ ನಮಾಝ್ ಬಳಿಕ ನಡೆಯುವ ಏಕದಿನ ಮತ ಪ್ರವಚನಕ್ಕಾಗಿ ಅಂತಾರಾಷ್ಟ್ರೀಯ ಭಾಷಣಗಾರ ಎ.ಎಂ ನೌಷಾದ್ ಬಾಖವಿ ಆಗಮಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಐ.ಕೆ ಮೂಸಾದಾರಿಮಿ ಕಕ್ಕಿಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಿಬಿದ್ರೆ ಶಂಶುಲ್ ಉಲಮಾ ನಗರದ ಅತ್ತಿಪಟ್ಟ ಉಸ್ತಾದ್ ವೇದಿಕೆಯಲ್ಲಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾರುಸ್ಸಲಾಂ ಬೆಳ್ತಂಗಡ ಇದರ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ವಹಿಸಲಿದ್ದಾರೆ.
ಸಯ್ಯಿದ್ ಅಲಿ ತಂಙಳ್ ಕುಂಬೋಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಅತಾವುಲ್ಲಾ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಕರ್ನಾಟಕ ಸರಕಾರದ ಸಚಿವರುಗಳಾದ ಝಮೀರ್ ಅಹಮ್ಮದ್ ಮತ್ತು ಯು.ಟಿ ಖಾದರ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಬಿ.ಎಂ ಫಾರೂಕ್, ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಮುಖ್ಯ ಸಚೇತಕ ವಸಂತ ಬಂಗೇರ, ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಕಣಚೂರ್ ಮೋನು ಹಾಜಿ, ಯು.ಟಿ ಇಫ್ತಿಕಾರ್ ಮೊದಲಾದ ಗಣ್ಯರು, ತಾಲೂಕಿನ ಮತ್ತು ಜಿಲ್ಲೆಯ ಅನೇಕ ಮಂದಿ ವಿದ್ವಾಂಸರುಗಳು, ಸಾಮಾಜಿಕ ಧಾರ್ಮಿಕ ರಾಜಕೀಯ ಕ್ಷೇತ್ರದ ಗಣ್ಯರುಗಳು ಭಾಗಿಯಾಗಲಿದ್ದಾರೆ ಎಂದರು.
ಗೋಷ್ಟಿಯಲ್ಲಿ ಖಿಲ್‌ರ್ ಜುಮ್ಮಾ ಮಸ್ಜಿದ್ ಖತೀಬ್ ಅಕ್ರಂ ಅಲಿ ತಂಙಳ್, ಸ್ವಾಗತ ಸಮಿತಿ ಕನ್ವೀನರ್ ಯು.ಕೆ ಮೋನು, ದಾರುಸ್ಸಲಾಂ ಕೋಶಾಧಿಕಾರಿ ರಝಾಕ್ ಕನ್ನಡಕಟ್ಟೆ, ಶರೀಫ್ ಕಕ್ಕಿಂಜೆ ಮತ್ತು ಇಲ್ಯಸ್ ಅಹ್ಮದ್ ಕಕ್ಕಿಂಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.