ಎಸ್.ಡಿ.ಎಂ ಭೌತಶಾಸ್ತ್ರ ವಿಭಾಗದಲ್ಲಿ ವಿಶೇಷ ಅತಿಥಿ ಉಪನ್ಯಾಸ

ಉಜಿರೆ: ವೀಕ್ಷಣಾಲಯಗಳ ಅಭಿವೃದ್ಧಿಯಿಂದಾಗಿ ವಿಶ್ವದ ರಚನೆಯನ್ನು ತಿಳಿಯಲು ಸಾಧ್ಯವಾಗಿದೆ” ಎಂದು ರಾಮನ್ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ|ಉದಯ್ ಶಂಕರ್ ತಿಳಿಸಿದರು. ಶ್ರೀ.ಧ.ಮ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸ್ಪೆಕ್ಟ್ರಾ ವಿದ್ಯಾರ್ಥಿ ಸಂಘದಿಂದ ಆಯೋಜಿಸಲಾದ ಅತಿಥಿ ಉಪನ್ಯಾಸದಲ್ಲಿ ಮಾತನಾಡಿ, ವಿಶ್ವದ ಉಗಮದ ಬಗೆಗಿನ ಮಾನವನ ತಿಳುವಳಿಕೆ ಹಾಗೂ ವಿಶ್ವವನ್ನು ವೀಕ್ಷಿಸುವ ಉಪಕರಣಗಳಲ್ಲಾದ ಅಭಿವೃದ್ಧಿಯನ್ನು ವಿವರಿಸಿದರು. ಭಾರತ ಸೇರಿದಂತೆ ವಿಶ್ವದಲ್ಲಿನ ಪ್ರಮುಖ ಆಕಾಶ ವೀಕ್ಷಣಾಲಯಗಳ ಪರಿಚಯ ಮಾಡಿಕೊಟ್ಟ ಅವರು ಅವುಗಳ ವೈಶಿಷ್ಟ್ಯ ವನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ ಎನ್ ಕೇಶವ ಅಧ್ಯಕ್ಷತೆ ವಹಿಸಿದ್ದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಸತೀಶ್ಚಂದ್ರ ಹಾಗೂ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಸೂರಜ್ ಸ್ವಾಗತಿಸಿ, ವಿಶ್ವಜಿತ್ ವಂದಿಸಿದರು. ಕು. ಶ್ರೀದೇವಿ ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.