ಕಳಿಯ: ಯುವಶಕ್ತಿ ಕ್ರೀಡಾ ಸಂಘದ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳಿಯ: ಇಲ್ಲಿಯ ಬೊಳ್ಳುಕಲ್ಲು ಯುವ ಶಕ್ತಿ ಕ್ರೀಡಾ ಸಂಘ ಬೊಳ್ಳುಕಲ್ಲು ಊರಿನ ಮಹಿಳೆಯರ ಹಾಗೂ ಪುರುಷರ ಅಟೋಟ ಸ್ಪರ್ಧೆಯು ಡಿ.23 ರಂದು ನಡೆಯಿತು. ರವಿರಾಜ ಅಜ್ರಿ ದೇರ್ಜಾಲು ದೀಪ ಬೆಳಗಿಸುವ ಮೂಲಕ ಅಟೋಟ ಸ್ಪರ್ಧೆಗೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ರೀಡಾ ಸಂಘದ ಅಧ್ಯಕ್ಷ ಶ್ರೀನಿವಾಸ ಬೇರ್ಕೆತೋಡಿ ವಹಿಸಿದ್ದರು.
ಕಳಿಯ ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಗ್ರಾ.ಪಂ ಸದಸ್ಯರಾದ ಮೋಹಿನಿ ಪರಮೇಶ್ವರ ಗೌಡ, ಪುಷ್ಪ, ಪ್ರಗತಿಪರ ಕೃಷಿಕ ಪೆರ್ನು ಗೌಡ ಕಲ್ಕುರ್ಣಿ, ದುರ್ಗಾ ಭಜನಾ ಮಂಡಳಿ ಗೌರವಾಧ್ಯಕ್ಷ ಸೇಸಪ್ಪ ಗೌಡ ಕಂಗಿನಡೆ, ಅಧ್ಯಕ್ಷ ವಿನೋದ್ ಗೌಡ ಹೀರ್ಯ, ಎಸ್‌ಡಿಎಂಸಿ ಅಧ್ಯಕ್ಷೆ ಅನಿತಾ ದಯಾನಂದ ಹಾಗೂ ದಯಾನಂದ ಗೌಡ ಕಲ್ಕುರ್ಣಿ ವೇದಿಕೆಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಳಿಯ ಗ್ರಾ.ಪಂ ಸದಸ್ಯ ಪ್ರದೀಪ್ ಕುಮಾರ್ ವಹಿಸಿದ್ದರು. ತಾ.ಪಂ. ಸದಸ್ಯ ಪ್ರವೀಣ್ ಗೌಡ, ಬೆಳಾಲು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ದಾಮೋದರ ಗೌಡ ಸುರುಳಿ, ಕಳಿಯ ಗ್ರಾ.ಪಂ ಸದಸ್ಯರಾದ ತುಕಾರಾಂ ಪೂಜಾರಿ ಎಂ., ಕೆ. ಎಂ.ಅಬ್ದುಲ್ ಕರೀಂ, ನಿವೃತ್ತ ಸೈನಿಕ ದಿನೇಶ್ ಗೌಡ ಕಲಾಯಿತೋಟ್ಟು, ಪ್ರಸ್ತುತ ಇಂಡಿಯನ್ ಅರ್ಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೇಬಿ ಗೌಡ ಪೆರಾಜೆ ಮತ್ತು ವಿಕ್ರಂ ಜೆ.ವಂಜಾರೆ, ಬೆಳ್ತಂಗಡಿ ಉದ್ಯಮಿ ಬಾನು ಪ್ರಸನ್ನ, ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ .ಎನ್.ಗೌಡ, ಯಶೋಧರ ಶೆಟ್ಟಿ ಕೊರಂಜ, ಎ.ಕೆ.ಅಹಮ್ಮದ್ ಎರುಕಡಪ್ಪು, ನಿವೃತ್ತ ಅಂಚೆವಿತರಕ ಸಂಜೀವ ಗೌಡ ಹೀರ್ಯ, ಕು| ರಕ್ಷಿತಾ ಡಿ. ವೇದಿPಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಟೋಟ ಸ್ಪರ್ಧೆ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕುಳಾಯಿ, ಕಳಿಯ iಶಾ ಕಾರ್ಯಕರ್ತೆ ಸುಭಾಷಿಣಿ ಕೆ., ಕಳೀಯ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ರೇವತಿ ಸಂಜೀವ ಗೌಡ ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಹಾಗೂ ಊರಿನ ಕೀಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಗದೀಶ್ ಗೌಡ ಹೀರ್ಯ, ಸ್ವಾಗತಿಸಿ, ಡಾಕಯ್ಯ ಗೌಡ ಹೀರ್ಯ, ಕಾರ್ಯಕ್ರಮ ನಿರೂಪಿಸಿ, ದಿನೇಶ್ ಗೌಡ ಕಲ್ಕುರ್ಣಿ ಧನ್ಯವಾದವಿತ್ತರು.

ಸನ್ಮಾನ: ಈ ಸಂದರ್ಭದಲ್ಲಿ ನಿವೃತ್ತ ಅಂಚೆ ಪತ್ರಿಕೆ ವಿತರಕ ಸಂಜೀವ ಗೌಡ ಹಾಗೂ ಬಡ ಕುಟುಂಬದ ಕ್ರೀಡಾ ಪ್ರತಿಭಾವಂತ ವಿದ್ಯಾರ್ಥಿನಿ ರಕ್ಷಿತಾ ಇವರನ್ನು ಸನ್ಮಾನಿಸಲಾಯಿತು. ಬೆಳ್ತಂಗಡಿ ಸುವರ್ಣ ಕಾಂಪ್ಲೆಕ್ಸ್ ಉದ್ಯಮಿ ಭಾನು ಪ್ರಸನ್ನ ವೈಯುಕ್ತಿಕವಾಗಿ ವಿದ್ಯಾರ್ಥಿನಿಗೆ ೨೦೦೦ ನಗದು ನೀಡಿದರು.
ವರದಿ. ಕೆ.ಎನ್.ಗೌಡ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.