ಪದ್ಮುಂಜ ಕಾಲೇಜು ವಾರ್ಷಿಕೋತ್ಸವ

Advt_NewsUnder_1
Advt_NewsUnder_1

ಪದ್ಮುಂಜ ಇಲ್ಲಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೊತ್ಸವ ಕಾರ್ಯಕ್ರಮವು ಸಮಿತಿಯ ಉಪಾಧ್ಯಕ್ಷ ಪುರಂದರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಡಿ.22ರಂದು ಜರುಗಿತು.

ಸಮಿತಿ ಸದಸ್ಯೆ ಶಾರದಾ ಆರ್ ರೈ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,  ದೀಪದಿಂದ ದೀಪ ಬೆಳಗಿಸುವುದರಿಂದ ಸಮಾಜಕ್ಕೆ ಬೆಳಕನ್ನು ಹರಿಸುತ್ತದೆ. ಅದೇ ರೀತಿ ಪ್ರೀತಿಯಿಂದ ಪ್ರೀತಿಯನ್ನು ಹರಿಸಿ ಸಮಾಜಕ್ಕೆ ಶಾಂತಿ ಸಾಮರಸ್ಯವನ್ನುಂಟುಮಾಡೋಣ ಎಂದರು. ಡಾ| ಎಂ.ಎಂ ರವಿಯವರು ಸಂಪನ್ಮೂಲ ವ್ಯಕ್ತಿಯಾಗಿ ಮುಖ್ಯ ಪ್ರಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಕಣಿಯೂರು ಗ್ರಾ.ಪಂ ಅಧ್ಯಕ್ಷ ಸುನಿಲ್ ಸಾಲಿಯಾನ್, ಉದ್ಯಮಿ ಕೃಷ್ಣ ಶೆಟ್ಟಿ, ಸಮಿತಿ ಸದಸ್ಯ ದಾಮೋದರ ಉಪಸ್ಥಿತರಿದ್ದರು.

ಪ್ರಾಂಶುಪಾಲ  ದಾಮೋದರ  ವರದಿ ವಾಚಿಸಿದರು.  ಜ್ಯೋತಿ ಹಾಗು ಖೈರುನ್ನಿಶಾ  ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಭ್ರಮಲಾಂಭಿಕ ಸ್ವಾಗತಿಸಿ, ಶಂಕರಿ  ಕಾರ್ಯಕ್ರಮ ನಿರೂಪಿಸಿ, ಬಾಲಕೃಷ್ಣ  ಧನ್ಯವಾದವಿತ್ತರು.

                                                                                                                                                                  ವರದಿ ಕಾಸಿಂ ಪದ್ಮುಂಜ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.