HomePage_Banner_
HomePage_Banner_
HomePage_Banner_

ದೇವಾಂಗ ಸಮಾಜ ಉಜಿರೆ ಪಶ್ಚಿಮ ಘಟಕ ಉದ್ಘಾಟನೆ

Advt_NewsUnder_1

ಉಜಿರೆ: ದೇವಾಂಗ ಸಮಾಜ ಉಜಿರೆ ವಲಯದ ಮಾರ್ಗದರ್ಶನದಲ್ಲಿ ನೂತನ ಉಜಿರೆ ಪಶ್ಚಿಮ ಘಟಕ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಅಯ್ಕೆ ಕಾರ್ಯಕ್ರಮವು ಉಜಿರೆ ವಲಯಾಧ್ಯಕ್ಷ ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ವಿನಾಯಕನಗರದ ಶ್ರೀಸಿದ್ಧಿವಿನಾಯಕ ಭಜನಾ ಮಂದಿರದ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ವಲಯದ ಗೌರವಾಧ್ಯಕ್ಷ ಸಂಜೀವ ಬಿ ಉದ್ಘಾಟಿಸಿದರು. ಪ್ರಾಸ್ತವಿಕವಾಗಿ ಭಾಷಣ ಮಾಡಿದ ಕೊಯ್ಯೂರು ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ, ಮೇಲು-ಕೀಳು ಎಂಬ ಭಾವನೆ ಇಲ್ಲದೆ ದೇವಾಂಗ ಸಮಾಜವನ್ನು ಉತ್ತುಂಗಕ್ಕೆ ಏರಿಸೋಣ ಎಂದರು. ನೂತನ ಉಜಿರೆ ಘಟಕ(ಪಶ್ಚಿಮ)ದ ಅಧ್ಯಕ್ಷರಾಗಿ ರಾಜಪ್ಪ ನೇಕಾರ, ಉಪಾಧ್ಯಕ್ಷರಾಗಿ ಶಶಿಕಲಾ ವಸಂತ, ಕಾರ್ಯದರ್ಶಿಯಾಗಿ ಹರಿಪ್ರಸಾದ್, ಜೊತೆಕಾರ್ಯದರ್ಶಿಯಾಗಿ ಯತೀಶ, ಕೋಶಾಧಿಕಾರಿಯಾಗಿ ಆಶೋಕ,ಗೌರವ ಸಲಹೆಗಾರರಾಗಿ ಸೋಮನಾಥ ನೇಕಾರ, ವಿಶ್ವನಾಥ, ಸಂಜೀವ ಕೊಯ್ಯೂರು ಅವರನ್ನು ಅಯ್ಕೆಮಾಡಲಾಯಿತು.
ವೇದಿಕೆಯಲ್ಲಿ ವಲಯದ ಗೌರವ ಸಲಹೆಗಾರ ಎಂ. ಡಿ. ಭಾಸ್ಕರ, ವಲಯ ಉಪಾಧ್ಯಕ್ಷ ರಾಜಗೋಪಾಲ ಮುಂಡಾಜೆ, ಕೃಷ್ಣಪ್ಪ ಬಿ, ಎಂ ಲೋಕಯ್ಯ ನೇಕಾರ, ವಲಯ ಕಾರ್ಯದರ್ಶಿ ರವಿಚಂದ್ರ ಮುಂಡಾಜೆ, ಜೊತೆಕಾರ್ಯದರ್ಶಿ ಪ್ರಮೋದ, ಸಂಘಟನಾ ಕಾರ್ಯದರ್ಶಿ ರೋಹಿತಾಕ್ಷ, ಕೋಶಾಧಿಕಾರಿ ವಸಂತ ಕಾಶಿಬೆಟ್ಟು ಉಪಸ್ಥಿತರಿದ್ದರು.
ಹರಿಣಾಕ್ಷಿ, ರಮ್ಯಾ ಪ್ರಾರ್ಥಿಸಿ, ವಿಶ್ವನಾಥ ಸ್ವಾಗತಿಸಿದರು. ರವಿಚಂದ್ರ ನೆಯ್ಯಾಲು ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.