ಮಡಂತ್ಯಾರು: ಪೊಂಪೈ ಆರ್ಕೇಡ್ ಉದ್ಘಾಟನಾ ಸಮಾರಂಭ

ಮಡಂತ್ಯಾರು: ಮಡಂತ್ಯಾರು ಪೇಟೆಯಲ್ಲಿ ದಿ| ಜೆರಾಲ್ಡ್ ರೊಡ್ರಿಗಸ್ ರವರ ಪುತ್ರ ಜೀಸನ್ ರೊಡ್ರಿಗಸ್ ರವರ ಮಾಲಕತ್ವದಲ್ಲಿ ನಿರ್ಮಾಣಗೊಂಡ ಸುಸಜ್ಜಿತವಾದ ಅಂಗಡಿಕೋಣೆಗಳುಳ್ಳ ಪೊಂಪೈ ಆರ್ಕೇಡ್ ಇದರ ಉದ್ಘಾಟನಾ ಸಮಾರಂಭವು ಡಿ.22 ರಂದು ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರುಗಳಾದ ರೆ| ಫಾ| ಬಾಸಿಲ್ ವಾಸ್ ನೆರವೇರಿಸಿ, ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಮಡಂತ್ಯಾರು ಆಶಾದೀಪ ಸುಪೀರಿಯರ್ ರೆ| ಪಾ| ಜೋರ್ಜ್ ಸಾಂತುಮಾಯರ್, ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ.ಕೆ, ಮಾಲಾಡಿ ಗ್ರಾ.ಪಂ ಅಧ್ಯಕ್ಷ ಎಸ್.ಬೇಬಿ ಸುವರ್ಣ, ಜಮೀಯತುಲ್ ಫಲಾಹ ನಿಕಟಪೂರ್ವ ಜಿಲ್ಲಾಧ್ಯಕ್ಷ ಹಾಜೀ ಅಬ್ದುಲ್ ಲತೀಫ್ ಸಾಹೇಬ್, ಮಂಗಳೂರು ಬಿಜೈ ಕರ್ನಾಟಕ ಬ್ಯಾಂಕ್ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಲೀನಾ ಮೊಂತೇರೋ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಊರಿನ ಪ್ರಮುಖರಾದ ಫ್ರಾನ್ಸಿಸ್, ಪದ್ಮನಾಭ ಸಾಲಿಯಾನ್ ಉದ್ಯಮಿ ರತ್ನಾಕರ ಶೆಟ್ಟಿ, ಅಬ್ದುಲ್ ರಹಿಮಾನ್ ಪಡ್ಪು ಮತ್ತಿತರ ಗಣ್ಯರು ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.