ಜೇಸಿಐ ಬೆಳ್ತಂಗಡಿ ಮಂಜುಶ್ರೀಯ 2019ನೇ ಸಾಲಿನ ಪದಗ್ರಹಣ ಸಮಾರಂಭ

Advt_NewsUnder_1
Advt_NewsUnder_1

ಬೆಳ್ತಂಗಡಿ: ಪ್ರತಿಷ್ಠಿತ ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ 2019 ನೇ ಅಧ್ಯಕ್ಷ ಪ್ರಶಾಂತ್ ಲಾಯಿಲ ಮತ್ತು ತಂಡದ ಪದಗ್ರಹಣ ಸಮಾರಂಭವು ಡಿ.21 ರಂದು ಜೇಸಿ ಭವನ ಬೆಳ್ತಂಗಡಿಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಗಿ ಲಯನ್ಸ್ ವಲಯಾಧ್ಯಕ್ಷ ಧರಣೇಂದ್ರ ಕುಮಾರ್ ಜೈನ್, ವಲಯ 15ರ ವಲಯಾಧ್ಯಕ್ಷ ಅಶೋಕ್ ಚುಂತಾರ್, ವಲಯ ಉಪಾಧ್ಯಕ್ಷ ರೋಯನ್ ಭಾಗವಹಿಸಿ 2019 ನೇ ಸಾಲಿನ ತಂಡಕ್ಕೆ ಶುಭ ಕೊರಿದರು.
ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿಯವರು ನೂತನ ಅಧ್ಯಕ್ಷ ಪ್ರಶಾಂತ್ ಲಾಯಿಲ ಕಾವಟೆಯವರಿಗೆ ಹಾಗೂ ಕಾರ್ಯದರ್ಶಿ ವಿಶಾಲ್ ಅಗಸ್ಟಿನ್ ರವರು ನೂತನ ಕಾರ್ಯದರ್ಶಿ ಗಣೇಶ್ ಶಿರ್ಲಾಲುರವರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜೇಸಿಐ ಬೆಳ್ತಂಗಡಿ ಪೂರ್ವಾಧ್ಯಕ್ಷ, ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಕೇಶವ ಪಿ. ಬೆಳಾಲು, ನಗರ ಪಂಚಾಯತ್ ಸದಸ್ಯ ಜಗದೀಶ್.ಡಿ ವಲಯಾಧಿಕಾರಿಯಾಗಿ ಆಯ್ಕೆಯಾದ ಚಿದಾನಂದ ಇಡ್ಯ, ನಿಕಟಪೂರ್ವಾಧ್ಯಕ್ಷ ಸಂತೋಷ್.ಪಿ ಕೋಟ್ಯಾನ್ ಇವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜೂನಿಯರ್ ಜೇಸಿ ಅಧ್ಯಕ್ಷ ಸುಹಾಸ್ ಶೆಟ್ಟಿ, ನೂತನ ಅಧ್ಯಕ್ಷ ವಿನಾಯಕ, ಜೆಸಿರೆಟ್ ಅಧ್ಯಕ್ಷೆ ಆಶಾ ಪ್ರಶಾಂತ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.