ಬಜಿಲದಲ್ಲಿ ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

Advt_NewsUnder_1
Advt_NewsUnder_1

ಕೊಯ್ಯೂರು: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಹರ್ಷ ಗೆಳೆಯರ ಬಳಗ ಮತ್ತು ಸ್ನೇಹ ಯುವತಿ ಮಂಡಲ ಬಜಿಲ ಇವರ ಆಶ್ರಯದಲ್ಲಿ ಅಕಾಡಮಿ ಮತ್ತು ಸಂಘದ ಬೆಳ್ಳಿಹಬ್ಬದ ಪ್ರಯುಕ್ತ “ಬೋಳ್ತೇರ್ ತಾಲೂಕು ತುಳು ಸಾಹಿತ್ಯ ಸಮ್ಮೇಳನೊ, ಬಜಿಲಡ್ ಬೊಳ್ಳಿಪರ್ಬ” ಉದ್ಘಾಟನಾ ಕಾರ್ಯಕ್ರಮವು ಡಿ. 22ರಂದು  ಬಜಿಲ ಶಾಲಾ ಮೈದಾನದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ನೆರವೇರಿಸಿದರು. ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆನುವಂಶಿಕ  ಆಡಳಿತ ಮೊಕ್ತೇಸರ ಯು.ವಿಜಯ ರಾಘವ ಪಡ್ವೆಟ್ನಾಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ ಆಶಯ ನುಡಿದರು. ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕುವೆಟ್ಟು  ಕ್ಷೇತ್ರದ ಜಿ.ಪಂ ಸದಸ್ಯೆ ಮಮತಾ ಎಂ ಶೆಟ್ಟಿ,  ಕೊಯ್ಯೂರು ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ವಿ.ಎನ್, ಕಳಿಯ ಕ್ಷೇತ್ರದ  ತಾ.ಪಂ ಸದಸ್ಯ ಪ್ರವೀಣ ಗೌಡ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟಾರ್ ಬಿ.ಚಂದ್ರಹಾಸ ರೈ, ಕೊಯ್ಯೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಜೀವಿ ಶೆಟ್ಟಿ, ಬೆಳ್ತಂಗಡಿ ನೋಟರಿ ವಕೀಲ ಸಂತೋಷ್ ಕುಮಾರ್ , ಸಮ್ಮೇಳನ ಸಮಿತಿ ಅಧ್ಯಕ್ಷ ದಾಮೋದರ ಗೌಡ ಬೆರ್ಕೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧಕರಾದ ಗೋಪಾಲ ನಾಯ್ಕ ಮಾಚಾರು( ಜಾನಪದ), ಡಾ.ಯು.ಪಿ ಶಿವಾನಂದ( ಸುದ್ದಿಬಿಡುಗಡೆ ಪತ್ರಿಕೋದ್ಯಮ), ಯಾಕೂಬ್ ಕೊಯ್ಯೂರು( ಗಣಿತ-ವಿಜ್ಞಾನ), ಪ್ರಶಾಂತ್ ದಿಡುಪೆ( ಶಿಕ್ಷಣ), ಅನಂತ ಭಟ್ ಕೊಕ್ಕಡ(ನಾಟಿ ವೈದ್ಯರು), ಬಾಬು ಮುಗೇರ  ಎರ್ನೋಡಿ(ಧಾರ್ಮಿಕ ಸಾಮಾಜಿಕ), ಮೋಂಟ ಗೌಡ ಬೆರ್ಕೆ( ಬೆನ್ನಿ-ಬೇಸಾಯ), ಕೂಸಪ್ಪ ಪೂಜಾರಿ ಬಜಿಲ( ಸ್ಥಳೀಯ ಉದ್ಯಮಿ), ಶ್ರೀಮತಿ ಕುಸುಮ(ಕೃಷಿ), ಶ್ರೀಮತಿ ಗೀತಾ ರಾಮಣ್ಣ ಗೌಡ ( ಮಹಿಳಾ/ರಾಜಕೀಯ ಕ್ಷೇತ್ರ) ಶ್ರೀಮತಿ ಪೂವಕ್ಕ(ದಾನಧರ್ಮ) ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಿತಿಯ ಪ್ರಮುಖರಾದ ಸತ್ಯಶಂಕರ ಮಯ್ಯ ಫಲಸದಕೋಡಿ  ಸತೀಶ್ ಗೌಡ ಡೆಂಬುಗ, ಜಿತೇಂದ್ರ ಬೆರ್ಕೆ, ಕೇಶವ ಗೌಡ ಕೊಂಗುಜೆ, ಮುಹಮ್ಮದ್ ಹಾರೂನ್, ಚಂದಪ್ಪ ಗೌಡ ಬೆರ್ಕೆ, ಲಕ್ಷ್ಮಣ ಗೌಡ ಮೇಗಿನಮನೆ, ತಾರಾನಾಥ ಗೌಡ ಬಜಿಲ, ಪ್ರಜೀತ್ ಗೌಡ ಕನಕಮಜಲು, ಕೂಸಪ್ಪ ಪೂಜಾರಿ ಬಜಿಲ, ರಾಮಣ್ಣ ಗೌಡ ಕುಂಞಿಮೇರ್, ಮೋನಪ್ಪ ಸಾಲಿಯಾನ್ ಬಜಿಲ, ಗೀತಾ ರಾಮಣ್ಣ ಗೌಡ, ಭರತ್ ಡೆಂಬುಗ, ಸವಿತಾ, ಭವ್ಯ ರವಿ ಗೌಡ,  ಚಂದ್ರಶೇಖರ ಬಜಿಲ, ರತ್ನಾವತಿ, ಜಯಶ್ರೀ, ವಾರಿಜಾ, ಪವಿತ್ರಾ ಮತ್ತಿತರರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.