ಉಜಿರೆ: ಗೀತಾ ಜಯಂತಿ ಕಾರ್ಯಕ್ರಮ

ಉಜಿರೆ:  ಎಲ್ಲರ ಕರ್ತವ್ಯಗಳನ್ನು ತಿಳಿಸುವ ಗ್ರಂಥವೇ ಭಗವದ್ಗೀತೆ. ಧನಾತ್ಮಕ ಯೋಚನೆಗೆ ಮಾರ್ಗದರ್ಶವನ್ನು ಇದು ಮಾಡಿಸುತ್ತದೆ. ಮನಸ್ಸಿನ ಭಾವನೆಗಳಿಗೆ ಹೊಸ ಸ್ಪರ್ಶನೀಡುವ ಸಂದೇಶವನ್ನು ಈ ಗೀತೆ ನೀಡಿದೆ. ಸ್ಥಿತಪ್ರಜ್ಞತೆಯ ಗುಣಗಳನ್ನು ಇದರಿಂದ ತಿಳಿಯಲು ಸಾಧ್ಯ. ವಿದ್ಯಾರ್ಥಿಗಳು ಗೀತಾ ತತ್ವಗಳ ಮೂಲಕ ತಮ್ಮ ಕರ್ತವ್ಯ ಹಾಗೂ ತತ್ಪರತೆ ಬಗ್ಗೆ ಅರಿಯಲು ಪ್ರಯತ್ನಿಸಬೇಕು ಎಂದು ಉಜಿರೆಯ ಎಸ್.ಡಿ.ಎಮ್ ಪದವಿ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ.ಶಶಿಶೇಖರ ಕಾಕತ್ಕರ್ ಹೇಳಿದರು.
 ಇವರು ಉಜಿರೆಯ ಎಸ್.ಡಿ.ಎಮ್ ಪ.ಪೂ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಆಯೋಜಿಸಿದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ದಿನೇಶ್ ಚೌಟ ಅವರು ಮಾತನಾಡಿ, ಗೀತಾ ಸಂದೇಶವನ್ನು ಹಾಗೂ ಅದರ ಪ್ರಸ್ತುತತೆ ಅರಿತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ  ಡಾ. ಪ್ರಸನ್ನಕುಮಾರ್ ಐತಾಳ್ ಉಪಸ್ಥಿತರಿದ್ದರು. ವಿಘ್ನೇಶ್ ಶೆಣೈ ಗೌರವಿಸಿ, ಸಂಶ್ರಿತಾ ಜೈನ್ ಸ್ವಾಗತಿಸಿದರು.  ಇಂಚರಾ ಜಿ.ಜಿ ನಿರೂಪಿಸಿ , ಸಂಸ್ಕೃತ ಸಂಘದ ಅಧ್ಯಕ್ಷ ಶ್ರೇಯಸ್ ಪಾಳಂದೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.