ಚಂದ್ರಹಾಸ ಚಾರ್ಮಾಡಿಗೆ ರಾಜ್ಯಮಟ್ಟದ ‘ಸುಕೃತ ಕೃಷಿ ಲೇಖನ ಪ್ರಶಸ್ತಿ’

ಚಾರ್ಮಾಡಿ: ಸುಕೃತ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿ ಪ್ರಕಟಿತ ಅತ್ಯುತ್ತಮ ಕೃಷಿ ಲೇಖನಕ್ಕೆ ನೀಡುವ ರಾಜ್ಯಮಟ್ಟದ ‘ಸುಕೃತ ಕೃಷಿ ಲೇಖನ ಪ್ರಶಸ್ತಿ’ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಕಟಗೊಳ್ಳುತ್ತಿರುವ ‘ನಿರಂತರ ಪ್ರಗತಿ’ ಮಾಸಪತ್ರಿಕೆಯ ಸಂಪಾದಕ  ಚಂದ್ರಹಾಸ ಚಾರ್ಮಾಡಿ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ರೂ.10 ಸಾವಿರ ನಗದು ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದ್ದು, ಜನವರಿ 5 ರಂದು ಬಳ್ಳಾರಿಯ ಬಸವಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಕೃಷಿ ಸಚಿವ  ಶಿವಶಂಕರ ರೆಡ್ಡಿ  ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕನ್ನಡ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಇದೀಗ ಹಂಪಿ ವಿಶ್ವವಿದ್ಯಾನಿಲಯದಡಿ ಪಿಹೆಚ್.ಡಿ ಸಂಶೋಧನೆಯನ್ನು ಕೈಗೊಂಡಿರುವ ಚಂದ್ರಹಾಸ ಚಾರ್ಮಾಡಿಯವರು ಹತ್ತು ವರ್ಷಗಳಿಂದ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ.  ಚಾರ್ಮಾಡಿ ಗ್ರಾಮದ ಪರ್ಲಾನಿ ನಿವಾಸಿ ಚನನ ಗೌಡ ಮತ್ತು ಶಾರದ ದಂಪತಿ ಪುತ್ರರಾದ ಇವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಲ್ಪಡುವ ‘ಪ.ಗೋ.ಪ್ರಶಸ್ತಿ-2015’, ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ‘ಅತ್ಯುತ್ತಮ ಬರಹ ಪ್ರಶಸ್ತಿ’ ‘ಸೌರಭ ರತ್ನ ರಾಜ್ಯಪ್ರಶಸ್ತಿ’ಯನ್ನು ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.