ಸೆಲ್ಕೊ ಫೌಂಡೇಶನ್ ವತಿಯಿಂದ ಪಿಲಿಚಂಡಿಕಲ್ಲು ಶಾಲೆಗೆ ಎಲ್‌ಇಡಿ ಟಿ.ವಿ ಕೊಡುಗೆ

ಪಿಲಿಚಂಡಿಕಲ್ಲು : ಸ.ಹಿ.ಪ್ರಾ.ಶಾಲೆ ಪಿಲಿಚಂಡಿಕಲ್ಲು ಇಲಿಗೆ ಸೆಲ್ಕೊ ಫೌಂಡೇಶನ್ ವತಿಯಿಂದ ಕೊಡುಗೆಯಾಗಿ ನೀಡಿದ ಎಲ್‌ಇಡಿ ಟಿ.ವಿಯನ್ನು ಉದ್ಯಮಿ ಅಬ್ದುಲ್ ರೆಹಮಾನ್ ಡಿ.14 ರಂದು ಉದ್ಘಾಟಿಸಿದರು.
ನಂತರ ನಡೆದ ಸಭಾಕಾರ್ಯಕ್ರಮವನ್ನು ಕೃಷಿಕ ಪ್ರವೀಣ್ ಕುಮಾರ್ ಪಾಡ್ಯಾರು ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಹಕೀಂ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ, ತಾ.ಪಂ ಸದಸ್ಯ ಗೋಪಿನಾಥ ನಾಯಕ್, ಕುವೆಟ್ಟು ಗಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ಅಂಗನವಾಡಿ ಕಾರ್‍ಯಕರ್ತೆ ಮೋಹಿನಿ, ಸಾಧಿಕ್ ಸಾಹೇಬ್, ಕೆ.ಎಸ್.ಆರ್.ಟಿ.ಸಿ ನಿವೃತ್ತ ಅಧಿಕಾರಿ ರಾಜೇಶ್ ಸಿ.ಆರ್.ಪಿ, ಗುರುವಾಯನಕೆರೆ ಕ್ಲಸ್ಟರ್ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುಮಿತ್ರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಸುದೀರ್ಘ 16 ವರ್ಷ ಸೇವೆ ಸಲ್ಲಿಸಿ, ನಾಳ ಶಾಲೆಗೆ ಮುಂಬಡ್ತಿ ಹೊಂದಿ ವರ್ಗಾವಣೆಗೊಂಡಿರುವ ಶಿಕ್ಷಕ ಪಿಲಿಪ್ ರೊನಾಲ್ಡ್ ಡಿಮೆಲ್ಲೊ ಹಾಗೂ 6 ವರ್ಷಗಳ ಕಾಲ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜಿ.ಪಂ ಸದಸ್ಯೆ ಮಮತಾ ಎಂ. ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಫೆಲ್ಸಿ ರೊಡ್ರಿಗಸ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಕುಸುಮ ಕೆ. ಹಾಗೂ ಲಕ್ಷ್ಮೀ ಆಚಾರ್‍ತಿ ಸನ್ಮಾನಿತರನ್ನು ಪರಿಚಯಸಿದರು. ಶಿಕ್ಷಕಿ ಸಿಸಿಲಿಯಾ ಲತಾ ಪಾಸ್ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಹೇಮಲತಾ ನಿರೂಪಿಸಿ, ಅತಿಥಿ ಶಿಕ್ಷಕ ಅರವಿಂದ ನಟರಾಜನ್ ವಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಅಡುಗೆ ಸಿಬ್ಬಂದಿ, ಅಧ್ಯಾಪಕರು, ಮಕ್ಕಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.