ಶಾಂತಿವನ: ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಗೆ ಚಾಲನೆ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ : ಎಸ್.ಡಿ.ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ ಶಾಂತಿವನದಲ್ಲಿ ಚಿಕಿತ್ಸೆ ಪಡೆಯಲಿಚ್ಛಿ ಸುವವರಿಗೆ ಅನುಕೂಲವಾಗಲು ರೂಪಿತವಾದ ಆನ್‌ಲೈನ್ ಬುಕಿಂಗ್ ವ್ಯವಸ್ಥೆಗೆ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು  ಚಾಲನೆ ನೀಡಿದರು.
ಆನ್‌ಲೈನ್ ಬುಕಿಂಗ್ ವ್ಯವಸ್ಥೆಗೆ ಸಂಬಂಧಿತ ತಾಂತ್ರಿಕ ನಿರ್ವಹಣೆಯ ಜವಾಬ್ದಾರಿಯನ್ನು ಧರ್ಮಸ್ಥಳದ ಶ್ರೇಯಸ್ ಕುಮಾರ್, ನಿಶ್ಚಲ್ ಡಿ ಅವರ ಮಾರ್ಗದರ್ಶನದಲ್ಲಿ ವೈರ್‌ಕ್ಯಾಂಪ್ ಎಂಬ ಸಂಸ್ಥೆ ನಿರ್ವಹಿಸಿದೆ. ಈ ಮೂಲಕ ಎಸ್.ಡಿ.ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯಲು ಇಚ್ಛಿಸುವವರಿಗೆ ಆರೋಗ್ಯ ಸಂಬಂಧಿತ ವಿವರವನ್ನು ನೀಡಿ ಚಿಕಿತ್ಸೆಯ ದಿನಾಂಕ ಮತ್ತು ಲಭ್ಯತೆಯ ವಿವರಗಳನ್ನು ದೃಢ ಪಡಿಸಿ ಕೊಳ್ಳಬಹುದಾಗಿದೆ. ಆರಂಭಿಕ ಒಂದು ತಿಂಗಳು ಆನ್‌ಲೈನ್ ಬುಕಿಂಗ್ ಪ್ರಕ್ರಿಯೆಯು ಪ್ರಾಯೋಗಿಕವಾಗಿ ನಿರ್ವಹಿಸಲ್ಪಡಲಿದೆ. ಆನ್‌ಲೈನ್ ಬುಕಿಂಗ್ ವ್ಯವಸ್ಥೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಮಾತೃಶ್ರೀ ಹೇಮಾವತಿ ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪೂರಣ್ ವರ್ಮಾ, ಸೀತಾರಾಮ್ ತೋಳ್ಪಡಿತ್ತಾಯ, ಡಾ. ಪ್ರಶಾಂತ್ ಉಪಸ್ಥಿತರಿದ್ದರು.

ಹತ್ತು ದಿನಗಳಿಂದ ಆರು ತಿಂಗಳವರೆಗಿನ ಅವಧಿಯ ಚಿಕಿತ್ಸೆಗಾಗಿ ಬುಕಿಂಗ್ ಮಾಡುವ ಅವಕಾಶವಿದೆ. ಚಿಕಿತ್ಸಾಲಯದ ವೆಬೈಸೈಟ್‌ಗೆ (www.naturecure.org.in) ಭೇಟಿ ನೀಡಿ ಚಿಕಿತ್ಸೆ ಪಡೆಯಲಿಚ್ಛಿಸುವ ದಿನಾಂಕ ನಮೂದಿಸಿ ಲಭ್ಯ ಕೊಠಡಿಗಳ ವಿವರಗಳನ್ನು ಪಡೆಯಬಹುದು.
ತದನಂತರ ಚಿಕಿತ್ಸೆ ಪಡೆಯಲಿರುವ ವ್ಯಕ್ತಿಯ ಆರೋಗ್ಯ ಸಂಬಂಧಿತ ಹಿಂದಿನ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಸಂಬಂಧಿಸಿದ ತಜ್ಞವೈದ್ಯರು ಈ ದಾಖಲೆಗಳನ್ನು ಪರಿಶೀಲಿಸಿ ಚಿಕಿತ್ಸೆಯ ಸಮ್ಮತಿ ಸೂಚಿಸುತ್ತಾರೆ. ಇದರ ದೃಢೀಕೃತ ಪ್ರತಿಯನ್ನು ಚಿಕಿತ್ಸೆ ಆರಂಭವಾಗುವ ದಿನದಂದು ಸಲ್ಲಿಸಬೇಕಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.