ಡಿ. 22: ಬಜಿಲದಲ್ಲಿ ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನ

Advt_NewsUnder_1
Advt_NewsUnder_1

ಕೊಯ್ಯೂರು: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಹರ್ಷ ಗೆಳೆಯರ ಬಳಗ ಮತ್ತು ಸ್ನೇಹ ಯುವತಿ ಮಂಡಲ ಬಜಿಲ ಇವರ ಆಶ್ರಯದಲ್ಲಿ ಅಕಾಡಮಿ ಮತ್ತು ಸಂಘದ ಬೆಳ್ಳಿಹಬ್ಬದ ಪ್ರಯುಕ್ತ “ಬೋಳ್ತೇರ್ ತಾಲೂಕು ತುಳು ಸಾಹಿತ್ಯ ಸಮ್ಮೇಳನೊ, ಬಜಿಲಡ್ ಬೊಳ್ಳಿಪರ್ಬ” ಡಿ. 22 ರಂದು ಬಜಿಲ ಶಾಲಾ ಮೈದಾನದಲ್ಲಿ ವೈಶಿಷ್ಟ್ಯಪೂರ್ಣ ತುಳು ಜಾತ್ರೆಯಾಗಿ ಮೂಡಿಬರಲಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ದಾಮೋದರ ಗೌಡ ಬೆರ್ಕೆ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ತುಳುನಾಡಿನ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ, ಸೋಜಿದ ಅಂಗಡಿ, ಹೈದರಾಲಿ ಇವರ ಅಪರೂಪದ ವಸ್ತುಗಳ ಸಂಗ್ರಹಾಲಯ, ಅಡಿಕೆ ರಾಶಿ, ಬೈಹುಲ್ಲು ರಾಶಿ, ತೆಂಗಿನಕಾಯಿ ರಾಶಿ, ನಾಟಿ ಕೋಳಿಗಳ ವಿವಿಧ ತಳಿಗಳ ಪ್ರದರ್ಶನ, ಕಂಬಳ ಕೋಣಗಳ ಪ್ರದರ್ಶನ ಇತ್ಯಾಧಿ ವಿಶೇಷತೆಗಳು ಈ ಸಮ್ಮೇಳನದ ಭಾಗವಾಗಿದೆ. ಸಮ್ಮೇಳನದ ಜೊತೆಗೆ ಈ ಪ್ರದೇಶದ ಅಭಿವೃದ್ಧಿಯತ್ತ ಜನಪ್ರತಿನಿಧಿಗಳ ಗಮನಸೆಳೆಯುವುದು, ಊರಿನ ಸರ್ವ ಜಾತಿ ಸಮುದಾಯದ ಅಭಿವೃದ್ಧಿಯ ಚಿಂತನೆ, ತುಳು ಭಾಷೆ ಸಂಸ್ಕೃತಿಯ ಸಂರಕ್ಷಣೆ, ಗೀತಾ ಸಾಹಿತ್ಯ ಸಂಭ್ರಮ, ತುಳು ಜಾಗೃತಿ ಮೆರವಣಿಗೆ, ಕವಿಕೂಟ, ವಿಚಾರ ವಿಮರ್ಷೆ, ಚಾವಡಿ ಚರ್ಚೆ, ಸಾಧಕರಿಗೆ ಸನ್ಮಾನ ಇತ್ಯಾಧಿ ಕಾರ್ಯಗಳನ್ನು ಜೋಡಿಸಲಾಗಿದೆ ಎಂದು ಅವರು ವಿವರ ನೀಡಿದರು.
ಗೋಷ್ಟಿಯಲ್ಲಿ ಸಮಿತಿಯ ಪ್ರಮುಖರಾದ ಕೇಶವ ಗೌಡ ಕೊಂಗುಜೆ, ಮುಹಮ್ಮದ್ ಹಾರೂನ್, ಚಂದಪ್ಪ ಗೌಡ ಬೆರ್ಕೆ, ಲಕ್ಷ್ಮಣ ಗೌಡ ಮೇಗಿನಮನೆ, ತಾರಾನಾಥ ಬಜಿಲ, ಪ್ರಜೀತ್ ಗೌಡ ಕನಕಮಜಲು, ಕೂಸಪ್ಪ ಪೂಜಾರಿ ಬಜಿಲ, ರಾಮಣ್ಣ ಗೌಡ ಕುಂಞಿಮೇರ್, ಮೋನಪ್ಪ ಸಾಲಿಯಾನ್ ಬಜಿಲ, ಗೀತಾ ರಾಮಣ್ಣ ಗೌಡ, ಭರತ್ ಡೆಂಬುಗ, ಸವಿತಾ, ಚಂದ್ರಶೇಖರ ಬಜಿಲ, ರತ್ನಾವತಿ, ಜಯಶ್ರೀ, ವಾರಿಜಾ, ಪವಿತ್ರಾ ಹಾಗೂ ಇತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.