ಪದ್ಮುಂಜ: ಇಲ್ಲಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪ್ಪಿನಂಗಡಿ ಪೋಲೀಸ್ ಠಾಣಾಧಿಕಾರಿಗಳಿಂದ ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮ ಕಾಲೇಜಿನ ಪ್ರಾಂಶುಪಾಲ ದಾಮೋದರ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಉಪ್ಪಿನಂಗಡಿ ಠಾಣಾಧಿಕಾರಿ ನಂದ ಕುಮಾರ್ ಎಂ.ಎಂ ರವರು ಅಪರಾಧ ಅಂದರೇನು? ಅಪರಾಧಿಗಳ ಬಗ್ಗೆ ಯಾವ ರೀತಿ ಜಾಗ್ರತರಾಗಿರಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಕಣಿಯೂರು ಬೀಟ್ ಪೋಲಿಸ್ ಶ್ರೀಧರ್ ಎಸ್, ಕಾಸಿಂ ಪದ್ಮುಂಜ ಉಪಸ್ಥಿತರಿದ್ದರು. ವಾಣಿಜ್ಯ ಉಪನ್ಯಾಸಕಿ ರೇಷ್ಮ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಶಂಕರಿ ಕಾರ್ಯಕ್ರಮ ನಿರೂಪಿಸಿ, ಸಮಾಜ ಶಾಸ್ತ್ರ ಉಪನ್ಯಾಸಕಿ ಖೈರುನ್ನಿಸ ಧನ್ಯವಾದ ಸಲ್ಲಿಸಿದರು.