HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬಂಗಾಡಿ: ನೂತನ ಕೊಠಡಿ ಉದ್ಘಾಟನೆ ಮತ್ತು ಪ್ರತಿಭಾ ಸಿಂಚನ

ಬಂಗಾಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗಾಡಿ ಇದರ ನೂತನ ಕೊಠಡಿ ಉದ್ಘಾಟನೆ ಹಾಗೂ ಪ್ರತಿಭಾ ಸಿಂಚನ ಕಾರ್ಯಕ್ರಮ ಡಿ.15 ರಂದು ನೆರವೇರಿತು. ಶಾಸಕ ಹರೀಶ್ ಪೂಂಜ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗತ್ತಿದ್ದು, ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಅಧಿಕವಿದೆ. ಆ ನಿಟ್ಟಿನಲ್ಲಿ ಈ ಶಾಲೆಯ ಸಾದನೆ ಶ್ಲಾಘನೀಯ ಎಂದರು.
ನೆಲಕ್ಕೆ ಅಳವಡಿಸಿದ ಇಂಟರ್‌ಲಾಕ್ ಉದ್ಘಾಟನೆಯನ್ನು ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ್ ಗೌಡ ನೆರವೇರಿಸಿದರು. ಅಧ್ಯಕ್ಷತೆಯನ್ನು ಇಂದಬೆಟ್ಟು ಗ್ರಾ.ಪಂ ಅಧ್ಯಕ್ಷೆ ನೇತ್ರಾವತಿ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ ಉಪಾಧ್ಯಕ್ಷೆ ವೇದಾವತಿ ಗ್ರಾ.ಪಂ ಸದಸ್ಯರುಗಳಾದ ಪ್ರೇಮ, ವಿಶಾಲಾಕ್ಷಿ, ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಶ್ವರಿ, ಶಿಕ್ಷಣ ಸಂಯೋಜಕ ಶುಭಾಷ್ ಜಾಧವ್, ಭುಜಬಲಿ ಧರ್ಮಸ್ಥಳ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿದ್ಯಾದರ್ ಜೈನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭುಜಬಲಿ ಧರ್ಮಸ್ಥಳ, ವಸಂತಿ ಕುಮಾರ್, ದಿನೇಶ, ಬಾಬು, ಆನಂದ ಎಂ.ಕೆ ನಡ, ಪಿ.ಡಿ ಆಂಟನಿ, ರೇಕಮ್ಮ ಸಂಜೀವ ಗೌಡ, ಮಕರಂದ, ಎಸ್.ಪೂವನಿಯವರನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಅಮಿತಾನಂದ ಹೆಗ್ಡೆ ಸ್ವಾಗತಿಸಿ, ರಮಾನಂದ ಬಿ. ವಂದಿಸಿ, ದೇವನಾರಿ ಶಾಲೆಯ ಮುಖ್ಯ ಶಿಕ್ಷಕ ಕಿಶೋರ್ ನಿರೂಪಿಸಿದರು.
ವರದಿ: ಬಿ.ರತ್ನಾಕರ್ ನಾವೂರು

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.