HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ತಾಲೂಕು ಪಂಚಾಯತ್ ಸೋಲಾರ್ ಉದ್ಘಾಟನೆ

ಬೆಳ್ತಂಗಡಿ: ಭಾರತ ಸರಕಾರದ ಸಮಗ್ರ ಇಂಧನ ಅಭಿವೃದ್ಧಿ ಯೋಜನೆಯಡಿ ಬೆಳ್ತಂಗಡಿ ತಾ.ಪಂ ಸಾಮರ್ಥ್ಯ ಸೌಧ ಕಟ್ಟಡದಲ್ಲಿ ಪೂರ್ಣ ಪ್ರಮಾಣದ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಲಾಗಿದೆ. 17 ಲಕ್ಷ ರೂ. ಅನುದಾನದಲ್ಲಿ ರೂಪಿಸಲಾದ ಈ ಸೋಲಾರ್ ವ್ಯವಸ್ಥೆಯನ್ನು ಡಿ. 15 ರಂದು ಶಾಸಕ ಹರೀಶ್ ಪೂಂಜ ದೀಪಬೆಳಗಿ ಉದ್ಘಾಟಿಸಿದರು.

ಈ ಸಂದರ್ಭ ಜಿ.ಪಂ ಸದಸ್ಯೆ ಮಮತಾ ಎಂ ಶೆಟ್ಟಿ, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿಯನ್, ಸದಸ್ಯರಾದ ಗೋಪಿನಾಥ ನಾಯಕ್, ವಿಜಯ ಗೌಡ ವೇಣೂರು, ವಸಂತಿ, ಕೇಶವತಿ, ವಿನುಷಾ ಪ್ರಕಾಶ್, ಪುಂಡಲೀಕ ಯಾನೆ ಕೃಷ್ಣಯ್ಯ ಆಚಾರ್ಯ, ಓಬಯ್ಯ, ಕೊರಗಪ್ಪ ಗೌಡ ಚಾರ್ಮಾಡಿ, ಜೋಯೆಲ್ ಮೆಂಡೋನ್ಸಾ, ಸುಧೀರ್ ಆರ್ ಸುವರ್ಣ, ಅಮಿತಾ, ತಾ.ಪಂ ವಿಭಾಗದ ಗಣೇಶ್ ಸುವರ್ಣ, ಜಯಾನಂದ, ಅಶೋಕ್ ಕುಮಾರ್, ಶೇಖರ, ಶ್ರೀಧರ ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.