ಜಯಂತಿಗಳಿಗೆ – ಸಾವುಗಳಿಗೆ ಸರಕಾರಿ ರಜೆ ಘೋಷಿಸಬೇಕೆ ?: ಅಭಿಪ್ರಾಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಜಯಂತಿ, ಸಾವುಗಳಿಗೆ ರಜೆ ಕೊಡಲು ಹೋದರೆ ಎಲ್ಲಾ ದಿನಗಳೂ ರಜೆಯಾಗಬಹುದು: ಭಾರತ ದೇಶದಲ್ಲಿ ಕೆಲಸ ಕಾರ್‍ಯಗಳಿಂದ ರಜೆಯೇ ಹೆಚ್ಚು ಎಂಬುವುದು ಸತ್ಯವಾದ ಮಾತು. ಕೂಲಿ ಆಳುಗಳು ದಿನಕ್ಕೆ 8 ಗಂಟೆ ಕೆಲಸ ಮಾಡುತ್ತಾರೆ. ಸರ್ಕಾರಿ ನೌಕರರು 8 ಗಂಟೆ ಕೆಲಸ ಮಾಡುತ್ತಾರೆ. ವಾರದಲ್ಲಿ 2 ನೇ ಶನಿವಾರ ಮತ್ತು 4ನೇ ಶನಿವಾರ ಬ್ಯಾಂಕ್ ರಜೆ, ತಿಂಗಳ 2ನೇ ಶನಿವಾರ ಕಚೇರಿ ರಜೆ, ಅನೇಕ ಜಯಂತಿಗಳ ರಜೆ, ಹಬ್ಬಗಳು ಇದ್ದಲ್ಲಿ ರಜೆ, ವರ್ಷದ 150 ದಿನ ಮಾತ್ರ ಕೆಲಸ ಮಾಡುವ ಸ್ಥಿತಿಯಾಗಿದೆ. ಅಂದರೆ ವರ್ಷದಲ್ಲಿ 1200 ಗಂಟೆ ಮಾತ್ರ ಕೆಲಸ ಮಾಡುವಂತಾಗಿದೆ. ಹೀಗೆ ಮಾಡಿದ್ದಲ್ಲಿ ದೇಶದ ಅಭಿವೃಧ್ದಿ ಸಾಧ್ಯವಿಲ್ಲ . ಜಯಂತಿಗಳಿಂದ ಜನರು ಅಂಗಡಿಯವರು, ವರ್ತಕರು, ಸಣ್ಣ ಸಣ್ಣ ಸಹಕಾರಿ ಬ್ಯಾಂಕ್‌ಗಳವರ, ರೋಸಿ ಹೋಗಿದ್ದಾರೆ. ಹಾಗಾಗಿ ಇನ್ನು ಮುಂದಕ್ಕೆ ಜಯಂತಿಗಳಿಗೆ ಹಾಗೂ ಗಣ್ಯರ ಸಾವುಗಳಿಗೆ ರಜೆ ಕೊಡಬಾರದು. ಗಣ್ಯರ ಹಾಗೂ ಧಾರ್ಮಿಕ ಪುರುಷರ ಜಯಂತಿ ಹಾಗೂ ಪುಣ್ಯ ದಿನಗಳನ್ನು ಸರಕಾರಿ ಕಾರ್‍ಯಕ್ರಮವಾಗಿ ಆಚರಿಸುವುದು ಉತ್ತಮ ಬೆಳವಣಿಗೆ ಆಗಿರುತ್ತದೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ರಜೆ ಕುರಿತಂತೆ ವಿರೋಧಭಾವ ವ್ಯಕ್ತ ಪಡಿಸಿದ್ದನ್ನು ಸ್ಮರಿಸಬಹುದು. ಈ ಹಿಂದೆ ಈಗಿನಷ್ಟು ರಜೆ ಇರಲಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಜಯಂತಿ/ಪುಣ್ಯ ತಿಥಿಗಳಿಗೆ ರಜೆ ಕೊಡುವುದನ್ನು ಬೆಳೆಸಿದಲ್ಲಿ ವರ್ಷದ ಎಲ್ಲಾ ದಿನಗಳು ರಜೆಯಾಗಬಲ್ಲುದು. ಆದ್ದರಿಂದ ಪುಣ್ಯತಿಥಿಗಳಿಗೆ/ಸಾವುಗಳಿಗೆ ರಜೆ ಬೇಡವೇ ಬೇಡ. -ರಾಮಣ್ಣ ಪೂಜಾರಿ ಕೊಯ್ಯೂರು ದಸ್ತಾವೇಜು ಬರಹಗಾರರು


ಜಯಂತಿಗಳು ಆದರ್ಶ ಆಚರಣೆಯೊಂದಿಗೆ ನಡೆಯಲಿ  : ಭಾರತವು ವೈವಿಧ್ಯತೆಯಿಂದ ಕೂಡಿರುವ ದೇಶವಾಗಿದೆ. ಎಲ್ಲಾ ರೀತಿಯ ಧರ್ಮ, ಜಾತಿ, ಆಚರಣೆ ಇದ್ದರೂ ವಿವಿಧತೆಯಲ್ಲಿ ಏಕತೆ ಇದೆ. ಇದು ಹೆಮ್ಮೆಯ ವಿಚಾರ.ಆದರೆ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರಜೆ ಅಪಾರವಾಗಿದೆ. ಮಹಾತ್ಮರ ಜಯಂತಿ ಆಚರಣೆಗಳಿಗೆ ರಜೆ ನೀಡುವ ಬದಲು ಅವರ ಆದರ್ಶಗಳನ್ನು ಜನತೆಗೆ ತಿಳಿಸುವ ಕಾರ್ಯವಾಗಬೇಕಾಗಿದೆ. ಭಾರತ ಸ್ವಾತಂತ್ರ್ಯ ಹೊಂದ ಬೇಕಾದರೆ ಅದಕ್ಕಾಗಿ ಹೋರಾಡಿದ ಮಹಾತ್ಮರು ಹಲವಾರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾತ್ಮರ ಬಲಿದಾನವನ್ನು ಸ್ಮರಿಸಿಕೊಳ್ಳಲು ಇರುವ ದಿನವೇ ಈ ಜಯಂತಿಗಳು. ಅದಕ್ಕಾಗಿ ರಜೆ ಕೊಡುವುದು ಬಿಟ್ಟು ಅವರ ಆದರ್ಶಗಳನ್ನು ಆಚರಿಸುವಂತೆ ಆಗಬೇಕು. ಇಂದಿನ ಜನತೆಗೆ ಜಯಂತಿಯ ಮಹತ್ವ ತಿಳಿಸುವುದು ಮಹತ್ವದ ಕಾರ್ಯ.
ರಜೆ ಕೊಡುವುದು ತಪ್ಪಲ್ಲ. ಆದರೆ ರಜೆಯಿಂದ ರಾಜ್ಯಕ್ಕೆ ದೇಶಕ್ಕೆ ಎಷ್ಟೊಂದು ನಷ್ಟವನ್ನು ತರಿಸುತ್ತವೆ ಎಂಬುದನ್ನು ಗಮನಿಸಬೇಕಾಗಿದೆ. ಹೀಗೆ ಭಾರತ ಅಭಿವೃದ್ಧಿ ಹೊಂದಲು ಖಂಡಿತ ಸಾಧ್ಯವಿಲ್ಲ. ಆದ್ದರಿಂದ ಜಯಂತಿಗಳಿಗೆ ರಜೆ ಸಾರುವುದು ಬಿಟ್ಟು ಅವರ ಆದರ್ಶ ಆಚರಣೆಯೊಂದಿಗೆ ಕೆಲಸ ಮಾಡಿದರೆ ಅವರಿಗೆ ಕೊಡುವ ನಿಜವಾದ ಗೌರವವಾಗಿದೆ. ಭಾರತವು ಅಭಿವೃದ್ಧಿ ಹೊಂದಲು ಎಲ್ಲವು ಸುಧಾರಣೆ ಆಗಬೇಕಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ಪ್ರಜೆಯು ತನ್ನದೆ ಆದ ಕಾರ್ಯ ಮಾಡಬೇಕಾಗಿದೆ. ರಜೆ ಮಜಾ ಮಾಡದೆ ಅದನ್ನು ಉತ್ತಮ ಕಾರ್ಯಕ್ಕೆ ಬಳಸಬೇಕಾಗಿರುವುದು ಬಹಳ ಮುಖ್ಯ. ಆದರ್ಶಗಳನ್ನು ಆಚರಣೆಯೊಂದಿಗೆ ಜಯಂತಿಗಳು ನಡೆಯಲಿ ಎಂಬುದು ಆಶಯ.
-ಮೋಹನ ಕಾನರ್ಪ ಎಸ್.ಡಿ.ಎಂ.ಕಾಲೇಜು ಉಜಿರೆ.


ರಜೆಯ ಬದಲು ನಿಧನರಾದವರ ಆದರ್ಶಗಳನ್ನು ಪಾಲಿಸೋಣ :  ಇತ್ತೀಚೆಗೆ ನಿಧನರಾದ ಸಚಿವ ಶ್ರೀ ಅನಂತಕುಮಾರ್ ಇವರ ನಿಧನಕ್ಕೆ ರಾಜ್ಯ ಸರಕಾರ ಸರಕಾರಿ ರಜೆ ಘೊಷಣೆ ಮಾಡಿದ ನಂತರ ಈ ರೀತಿ ರಜೆ ಘೋಷಣೆ ಮಾಡಿದಾಗ ಜನರಿಗೆ ಆಗುವ ತೊಂದರೆಗಳ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಇದು ಚರ್ಚೆಯ ವಿಷಯವಾಗಿದೆ.ಏಕಾಏಕಿ ರಜೆ ಘೋಷಣೆ ಮಾಡಿದ್ದರಿಂದಾಗಿ ಜನರು ನಿಗದಿಪಡಿಸಿದ ಕೆಲಸ ಕಾರ್ಯಗಳು ವಿಫಲಗೊಳ್ಳುತ್ತವೆ.ಮೊದಲೇ ಸರಕಾರಿ ಕಚೇರಿಗಳು ಸಾಕಷ್ಟು ಸಿಬಂಧಿಗಳಿಲ್ಲದೆ ಜನರ ಕೆಲಸಗಳನ್ನು ಮಾಡಲು ಸೋತಿವೆ. ಜಾತಿಗೊಂದು ಎಂಬಂತೆ ಜಯಂತಿಗಳು, ಆಚರಣೆಗಳು ಮತ್ತು ಅವುಗಳಿಗೆ ರಜೆಗಳು ಎಂದರೆ ಜನರು ಕಟ್ಟಿದ ತೆರಿಗೆಯ ಹಣವನ್ನು ಪೋಲು ಮಾಡಿದಂತೆಯೇ.ನಮ್ಮ ಭಾರತದಲ್ಲಿ ಇದ್ದಷ್ಟು ರಜೆಗಳು ಬೇರೆ ಯಾವ ದೇಶದಲ್ಲಿಯೂ ಊಹಿಸಲು ಸಾಧ್ಯವಿಲ್ಲ. ಹೆಚ್ಚಿನ ರಜೆಗಳು ರಾಜಕೀಯ ಕಾರಣಗಳಿಂದ ಘೋಷಣೆ ಮಾಡುವುದಾಗಿರುತ್ತವೆ.
ಯಾವುದೇ ಗಣ್ಯ ವ್ಯಕ್ತಿಗಳು ನಿಧನರಾದಾಗ ಅನಗತ್ಯ ರಜೆಗಳನ್ನು ನೀಡುವ ಬದಲು ಅವರ ಆತ್ಮಕ್ಕೆ ಶಾಂತಿಕೋರಿ ಮೌನ ಪ್ರಾರ್ಥನೆ ಸಲ್ಲಿಸಿ ಅವರ ಆದರ್ಶ,ಮೌಲ್ಯಗಳನ್ನು ನೆನಪು ಮಾಡಿ ಆ ದಿನದ ಕೆಲಸಗಳನ್ನು ಶ್ರಧ್ದೆಯಿಂದ ಮಾಡಿದಾಗ ಖಂಡಿತಾ ಅವರಿಗೆ ನಾವು ನೀಡುವ ನಿಜವಾದ ಗೌರವವಾಗಬಹುದು.ಆಳುವ ಪಕ್ಷದ ಸರಕಾರ ರಜೆ ಘೋಷಣೆ ಮಾಡಿದಾಗ ಪ್ರತೀಯೊಂದು ವಿಷಯವನ್ನು ವಿರೋಧಿಸುವ ವಿಪಕ್ಷಗಳು ಕೂಡಾ ಮೌನ ವಹಿಸಿ ಒಪ್ಪಿಕೊಳ್ಳುವುದನ್ನು ಕಾಣಬಹುದು.ಈ ಬಗ್ಗೆ ಮತದಾರರು ಎಚೆತ್ತುಕೊಂಡು ಅನಗತ್ಯ ರಜೆ ಘೋಷಣೆ ಮಾಡದಂತೆ ತಮ್ಮ ತಮ್ಮ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಸಿದರೆ ಖಂಡಿತಾ ಒಳ್ಳೆಯದಾಗಬಹುದು.
-ವಲೇರಿಯನ್ ರೊಡ್ರಿಗಸ್, ಉಜಿರೆ 


ಜಯಂತಿಗಳಿಗೆ ಸಾವುಗಳಿಗೆ ರಜೆ ಪ್ರಯೋಜನ ಇಲ್ಲ
ಸುದ್ದಿಯಲ್ಲಿ ತಿಳಿಸಿದಾಗೆ ಹೆಚ್ಚು ಕೆಲಸ ಮಾಡುವ ಮೂಲಕ ಜಯಂತಿ,ಸಾವುಗಳನ್ನು ಅರ್ಥಪೂರ್ಣವಾಗಿ ಆಚರಿಸಿ ದೇಶದ ಅಥವಾ ಸಮಾಜದ ಅಭಿವೃಧ್ಧಿಗೋಸ್ಕರ ದುಡಿದವರ ನೆನಪಿಗಾಗಿ ರಜೆ ಮಾಡುವ ಬದಲು ಆಚರಣೆಯೊಂದಿಗೆ ಒಂದೇರಡು ಗಂಟೆ ಜಾಸ್ತಿಯೆ ಕೆಲಸ ಮಾಡುವಂತಾದರೆ ಅದನ್ನು ನಿಜವಾಗಿಯು ಅವರ ಆದರ್ಶಗಳಿಗೆ ಸಲ್ಲುವ ಗೌರವ. – ಕೇಶವ ಗೌಡ ನ್ಯಾಯವಾದಿ, ಅಧ್ಯಕ್ಷರು ಎ.ಪಿ.ಎಂ.ಸಿ.ಬೆಳ್ತಂಗಡಿ


ಜಯಂತಿ ಆಚರಣೆಗೆ ರಜೆ ಅಗತ್ಯವಿಲ್ಲ: ಸರಕಾರದ ವತಿಯಿಂದ ದಾರ್ಶನಿಕರು, ರಾಷ್ಟ್ರಭಕ್ತರು, ಸ್ವಾತಂತ್ರ್ಯ ಹೋರಾಟಗಾರರ ಜಯಂತಿಯನ್ನು ಆಚರಿಸುವ ದಿನ ಸರಕಾರಿ ರಜೆಯನ್ನು ಕೊಡುವ ಅಗತ್ಯವಿಲ್ಲ.
ಈ ಬಗ್ಗೆ ಸುದ್ದಿ ಸಂಪಾದಕರು ಬರೆದ ಸಂಪಾಕೀಯ ಸಕಾಲಿಕವಾಗಿದೆ. ಸರಕಾರಿ ರಜೆಯನ್ನು ನೀಡಿದಾಗ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಯಾವುದೇ ಸರಕಾರಿ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸುವುದಿಲ್ಲ. ಅವರು ರಜೆಯಲ್ಲಿರುತ್ತಾರೆ. ಸೀಮಿತ ಜನರು ಭಾಗವಹಿಸುತ್ತಾರೆ. ಅದಕ್ಕಾಗಿ ರಜೆ ನೀಡದೆ ಇಂತಹ ಆಚರಣೆಗಳು ನಡೆದಾಗ ಎಲ್ಲರೂ ಭಾಗವಹಿಸುತ್ತಾರೆ.
-ಗೋಪಿನಾಥ ನಾಯಕ್ ತಾ.ಪಂ ಸದಸ್ಯ ಬೆಳ್ತಂಗಡಿ


ಜಯಂತಿ ಸಾವುಗಳಿಗೆ ರಜೆ ಘೋಷಿಸುವುದಕ್ಕೆ ಕಡಿವಾಣ ಇರಲಿ : ಭಾರತದಲ್ಲಿ ಇರುವಂತೆ ಇನ್ನಾವುದೇ ದೇಶದಲ್ಲಿ ಜಯಂತಿ ಸಾವುಗಳಿಗೆ ರಜೆ ಇರುವುದಿಲ್ಲ. ವರ್ಷ ಕಳೆದಂತೆ ಸರಕಾರ ಬದಲಾದಂತೆ ಜಯಂತಿ ಸಾವುಗಳ ರಜೆ ಏರುವುದನ್ನು ನಾವು ಕಾಣುತ್ತೇವೆ ಇಂತಹ ಸರಕಾರಿ ರಜೆಗಳು ಜನಸಾಮಾನ್ಯರಿಗೆ ಹಾಗೂ ದೇಶದ ಅಭಿವೃಧ್ಧಿಗೆ ತುಂಬಾ ಕಷ್ಟ ನಷ್ಟ ಉಂಟು ಮಾಡುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ನಷ್ಟವನ್ನೂ ಮಾಡುತ್ತಿದೆ.ಇದನ್ನು ಸರಕಾರ ಮನಗಂಡು ಜಯಂತಿಗಳ ಆಚರಣೆಯನ್ನು ಮಾಡಿ ಸತ್ತಾಗ ಅವರ ಆದರ್ಶಗಳನ್ನು ಗುಣಗಾನಮಾಡಿ ವ್ಯಕ್ತಿ ಹಾಗೂ ಮಹಾನ್ ಸಾಧಕರ ವಿಚಾರದಲ್ಲಿ ರಜೆ ನೀಡದೇ ಅವರ ಆದರ್ಶಗಳನ್ನು ಜನತೆಗೆ ತಿಳಿಸುವ ಕಾರ್ಯಕ್ರಮ ಸಂಘಟಿಸಿ ಅವರಿಗೆ ಗೌರವ ಸಲ್ಲಿಸುವಂತಾಗಲಿ.
ಹೆಚ್.ಮಹಮ್ಮದ್ ವೇಣೂರು 


ರಜೆ ಸಜೆಯಾಗದಿರಲಿ: ರಜೆ ಎಂಬುವುದು ಸಜೆಯಾಗದೆ ಅದು ನಮ್ಮ ಜೀವನಕ್ಕೊಂದು ದೀವಿಗೆಯಾಗಬೇಕು. ಅಂದರೆ ರಜೆ ಎಂಬುದರ ಬದಲು 1 ಗಂಟೆ ನಾವು ಮಾಡುವ ಕಾಯಕವನ್ನು ವಿಸ್ತರಿಸಿದರೆ ಅದು ಉತ್ತಮ ಅಂಶವಾಗುತ್ತದೆ ಎಂಬುದೇ ನನ್ನ ಆಶಯ –ಧರಣೇಂದ್ರ ಕುಮಾರ್ ಜೈನ್ ,ವಲಯಾಧ್ಯಕ್ಷರು ಲಯನ್ಸ್ ಕ್ಲಬ್ ಬೆಳ್ತಂಗಡಿ. 


ಅನಗತ್ಯ ರಜೆಗಳಿಗೆ ಕಡಿವಾಣ ಹಾಕಿ ಬೆಳ್ತಂಗಡಿ: ನಾಯಕರ ಜಯಂತಿಗಳಿಗೆ ಮತ್ತು ನಿಧನಕ್ಕೆ ಸಾರ್ವಜನಿಕ ರಜೆ ಘೋಷಣೆ ಸಲ್ಲದು. ಆ ರೀತಿಯ ರಜೆಗಳಿಂದ ಮಕ್ಕಳ ಶಿಕ್ಷಣ ಅಲ್ಲದೆ ಸರಕಾರಿ ಕಚೇರಿಗಳ ಕಾರ್ಯವೈಖರಿ ಏರುಪೇರು ಆಗುವುದು. ರಜೆ ಘೋಷಣೆ ಬದಲು ಆಗಲಿದ ನಾಯಕರ ಸಾಧನೆಗಳನ್ನು ತಿಳಿಸಿ, ನುಡಿನಮನ ಸಲ್ಲಿಸುವುದು ಒಲಿತು. ಯಾವುದೇ ಕಾರಣಕ್ಕೂ ರಜೆ ನೀಡಬಾರದು. ಅನಗತ್ಯ ರಜೆಗಳಿಗೆ ಕಡಿವಾಣ ಹಾಕಬೇಕಾಗಿದೆ. – ಜಯಂತ್ ಕೆ. ಬಿ. ಸುದೇಕಾರ್ ಕುವೆಟ್ಟು


ಗಣ್ಯರ ಸಾವಿಗೆ ರಜೆಗಿಂತ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಿಸಿ ಕೆಲಸ ಮುಂದುವರಿಸಬಹುದು: ರಾಜಕೀಯ ಗಣ್ಯರುಗಳು ನಿಧನರಾದಾಗ ರಜೆ ಕೊಟ್ಟು ಸಾಮಾನ್ಯ ಜನರಿಗೆ ತೊಂದರೆ ಕೊಡುವುದಕ್ಕಿಂತ ಅವರ ಗೌರವಾರ್ಥವಾಗಿ ಎಲ್ಲಾ ಪೇಟೆ ಪಟ್ಟಣಗಳಲ್ಲಿ ವಾಹನ ಕಛೇರಿ ವ್ಯವಹಾರಗಳೆಲ್ಲಾ ೨ ನಿಮಿಷ ಸ್ಥಗಿತಗೊಳಿಸಿ ನಿಧನದ ಸಂತಾಪ ಸೂಚಕ ಆಚರಣೆ ನಡೆಸುವುದು ಉತ್ತಮ.
ಆದರೆ ಶಾಲಾ ಕಾಲೇಜು ಬ್ಯಾಂಕು ಆಫೀಸುಗಳಿಗೆ ರಜೆ ನೀಡುವುದು ಸರಿಯಾದ ಕ್ರಮವಲ್ಲ. ಅಲ್ಲದೆ ಗಣ್ಯರು ನಿಧನರಾದಾಗ ನಮ್ಮ ಮತಗಳನ್ನೇ ಪಡೆದು ಪ್ರಧಾನಿ, ಮಂತ್ರಿ ಹಾಗೂ ಚಲನಚಿತ್ರ ನಟರು ಇತರ ಅವಕಾಶಗಳನ್ನು ಪಡೆದುಕೊಂಡವರಿಗೆ ಸರಕಾರಿ ಜಾಗದಲ್ಲಿ ಗೋರಿಗಳನ್ನು ನಿರ್ಮಿಸುವುದೂ ಕೂಡ ಅಸಂಬದ್ಧ ಕ್ರಮವಾಗಿದೆ. ಅವರ ಸ್ಮಾರಕಗಳಿಗಾಗಿ ಹೀಗೆ ಬೆಲೆಬಾಳುವ ಸರಕಾರಿ ಜಾಗಗಳನ್ನು ಮೀಸಲಿಡುತ್ತಾ ಹೋದರೆ ಮುಂದೊಂದು ದಿನ ದೇಶದ ಅರ್ಧ ಭಾಗವೇ ಘೋರಿಗಳಾಗುವ ಆತಂಕವಿದೆ. ಸಾಯುವುದು ಹುಟ್ಟುವುದು ಪ್ರತಿಯೊಬ್ಬರ ವೈಯುಕ್ತಿಕ ವಿಚಾರವಾಗಿದ್ದು, ಅವರವರ ಜಾಗದಲ್ಲೇ ಗೋರಿ ನಿರ್ಮಿಸಿ ಸ್ವಾಭಿಮಾನ ಮೆರೆಯುವ ಬದಲು ತಾವು ಬದುಕಿದ್ದಾಗ ಬಂಗ್ಲೆ, ಸರಕಾರಿ ಸೌಲಭ್ಯ, ಲಕ್ಷುರಿ ಜೀವನ ನಡೆಸುವವರು ಸತ್ತಾಗ ಪರಾವಲಂಬಿಗಳಾಗಿ ಸರಕಾರದ ಜಾಗದಲ್ಲಿ ಗೋರಿ ನಿರ್ಮಿಸಲು ಸರಕಾರದಿಂದ ಸವಲತ್ತು ಪಡೆಯಲು ಮುಂದಾಗಿರುವುದು ಅಚ್ಚರಿ ತರುತ್ತದೆ.
– ಟಿ.ಕೆ ವಿಠಲ್ ರೈ ನಿಸರ್ಗ ಧರ್ಮಸ್ಥಳ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.