ಅಳದಂಗಡಿ ಮಹಾಗಣಪತಿ ದೇವಸ್ಥಾನದಲ್ಲಿ ಸಮಾಲೋಚನಾ ಸಭೆ

ಅಳದಂಗಡಿ: ಅಳದಂಗಡಿ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ ಅಜಿಲರವರ ಮಾರ್ಗದರ್ಶನದಲ್ಲಿ ಡಿ.12 ರಂದು ವ್ಯವಸ್ಥಾಪನ ಸಮಿತಿ ಮತ್ತು ಊರವರ ಸಮಾಲೋಚನ ಸಭೆಯು ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೊದ್ದಾರಕ್ಕೆ ಇರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಿರುವ ಬಗ್ಗೆ ಹಾಗೂ ಬೇಕಾಗುವ ಜಾಗದ ಅವಶ್ಯಕತೆಯ ಬಗ್ಗೆಯೂ ಇದ್ದ ಆತಂಕ ಸಮಸ್ಯೆಗಳನ್ನು ಬಗೆಹರಿಸಿ, ಎಲ್ಲರ ಒಪ್ಪಿಗೆಯಂತೆ ಜೀರ್ಣೋದ್ಧಾರ ಮಾಡುವ ಬಗ್ಗೆ ತೀರ್ಮಾನಕ್ಕೆ ಬರಲಾಯಿತು.
ಈ ಸಂದರ್ಭ ನೂತನ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಡಾ|ಶಶಿಧರ ಡೊಂಗ್ರೆ ಸೇನೆರೆ ಬೈಲು, ಕಾರ್ಯದರ್ಶಿಯಾಗಿ ಪಿ.ಹೆಚ್ ನಿತ್ಯಾನಂದ ಶೆಟ್ಟಿ, ಹಾಗೂ ಇತರ ಪದಾಧಿಕಾರಿಗಳು   ಆಯ್ಕೆಯಾದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರ್, ಅರ್ಚಕರಾದ ಸೋಮನಾಥ ಮಯ್ಯ, ಹಿರಿಯರಾದ ರವಿರಾಜ ಹೆಗ್ಡೆ ನಾವರಗುತ್ತು, ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ  ರಾಮಚಂದ್ರ ರಾವ್ ಕಾಪಿನಡ್ಕ, ಹೇಮಂತ್ ರಾವ್ ಯರ್ಡೂರು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.