ಪಟ್ರಮೆ ಅಂಚೆ ವಿತರಕ ಲಿಂಗಪ್ಪ ಆತ್ಮಹತ್ಯೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪಟ್ರಮೆ: ಪಟ್ರಮೆ ಅಂಚೆ ಕಚೇರಿಯಲ್ಲಿ 36 ವರ್ಷಗಳಿಂದ ಪೋಸ್ಟ್‌ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ಸುದ್ಧಿ ಪತ್ರಿಕೆಯ ಪಟ್ರಮೆ ಏಜೆಂಟ್ ಪೊಣ್ಣೆತ್ತಿಮಾರು ಲಿಂಗಪ್ಪ ಮಲೆಕುಡಿಯ(54.ವ) ಅವರು ಡಿ.12 ರಂದು ಅಂಚೆಕಚೇರಿಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಲಿಂಗಪ್ಪ ಅವರು ಇಲ್ಲಿ ಪೋಸ್ಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈ ಅಂಚೆಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಹುದ್ದೆ ಖಾಲಿಯಾದ ನಂತರ ಅವರ ಕಾರ್ಯವನ್ನು ಮಾಡುತ್ತಿದ್ದರು. ಇತ್ತಿಚೇಗೆ ಅಂಚೆ ಬಟವಾಡೆ ಹಾಗೂ ಕಚೇರಿಯಲ್ಲಿ ಕೆಲವೊಂದು ನ್ಯೂನ್ಯತೆಯ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಮೂರು ದಿನಗಳಿಂದ ತನಿಖೆ ನಡೆಸುತ್ತಿದ್ದರು.
ಈ ನಡುವೆ ಡಿ. 12 ರಂದು ಬೆಳಗ್ಗೆ 7.30 ಕ್ಕೆ ಅಂಚೆಕಚೇರಿಗೆ ಬಂದಿದ್ದ ಅವರು ಕಛೇರಿಯಲ್ಲಿ ವಿಷವನ್ನು ಸೇರಿಸಿ ಕುಸಿದು ಬಿದ್ದಿದ್ದು, ತನಿಖೆಗಾಗಿ ಬಂದ ಅಧಿಕಾರಿಗಳು ಹಾಗೂ ಸ್ಥಳೀಯರು ಕೂಡಲೇ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗದೆ ಅವರು ಮೃತಪಟ್ಟರೆನ್ನಲಾಗಿದೆ.
ಇವರು ಕಳೆದ 25 ವರ್ಷಗಳಿಂದ ಸುದ್ದಿ ಪತ್ರಿಕೆಯ ವಿತರಕರಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ಪತ್ನಿ ಶುಭವತಿ, 2 ಗಂಡು,2 ಹೆಣ್ಣು ಮಕ್ಕಳು, ಬಂಧು, ವರ್ಗದವರನ್ನು ಅಗಲಿದ್ದಾರೆ. ಮೃತರ ಸಹೋದರ ಯುವರಾಜ ರವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.