ಉದ್ಯಮಿಯಿಂದ 27ಲಕ್ಷ ರೂ. ದರೋಡೆ ಬೈಕ್ ಸಹಿತ ಆರೋಪಿಗಳಿಬ್ಬರ ಬಂಧನ

ಬೆಳ್ತಂಗಡಿ: ಉದ್ಯಮಿ ಹಾಗೂ ಹಿರಿಯ ನಾಗರಿಕರೊಬ್ಬರನ್ನು ದರೋಡೆಗೈದ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಇಬ್ಬರು ಆರೋಪಿಗಳನ್ನು ಮಂಗಳೂರು ಉಪವಿಭಾಗದ ರೌಡಿ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಪ್ರಾರಂಭದಲ್ಲಿ ಅಪಘಾತ ಎಂದು ಬಿಂಬಿತವಾಗಿದ್ದ ಪ್ರಕರಣ ದರೋಡೆ ಎಂಬುದಾಗಿ ಪೊಲೀಸರು ಸತ್ಯವಿಚಾರ ಹೊರತರುವಲ್ಲಿ ಸಫಲರಾಗಿದ್ದಾರೆ.
ಬಂಧಿತರು ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ನೇಜಿಕಾರ್ ನಿವಾಸಿ ಮುಹಮ್ಮದ್ ಶಾಫಿ (26ವ.) ಮತ್ತು ಇದೇ ಗ್ರಾಮದ ಅಂಬೊಟ್ಟು ನಿವಾಸಿ ಮುಹಮ್ಮದ್ ರಿಯಾಝ್(19ವ.) ಎಂಬವರಾಗಿದ್ದಾರೆ.
ಬಿಜೈ ಶ್ರೀರಾಮ ಭಜನಾ ಮಂದಿರ ರಸ್ತೆ ಮೂಲಕ ಮನೆಗೆ ಹೋಗುತ್ತಿದ್ದ ಉದ್ಯಮಿ ಹಾಗೂ ಹಿರಿಯ ನಾಗರಿಕ ಗಣೇಶ್ ಕಾಮತ್ ಅವರಿಗೆ ಈ ಇಬ್ಬರು ಆರೋಪಿತರು ಹಲ್ಲೆ ನಡೆಸಿ ಅವರ ಕೈಯಲ್ಲಿದ್ದ 27 ಲಕ್ಷ ರೂ. ಚೀಲವನ್ನು ದರೋಡೆಗೈದಿದ್ದರು. ಘಟನೆಯ ಬಗ್ಗೆ ಗಣೇಶ್ ಕಾಮತ್ ಅವರು ಜೀವಭಯಕ್ಕೊಳಗಾಗಿ ಅಪಘಾತ ಪ್ರಕರಣ ಎಂದು ಬಿಂಬಿಸಲು ಪ್ರಯತ್ನಪಟ್ಟಿದ್ದರು. ಆದರೆ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಅವರ ನೇತೃತ್ವದ ಅಪರಾಧ ಪತ್ತೆದಳದ ಪೊಲೀಸರು ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.