ಡಿ. 23: ಕುತ್ಲೂರು ಗ್ರಾಮದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಜಿಲ್ಲಾಡಳಿತ, ಪೊಲೀಸ್ ಮತ್ತು ಇಲಾಖಾಧಿಕಾರಿಗಳ ಸಮ್ಮುಖ ಜನರ ಸಮಸ್ಯೆ ಆಲಿಕೆಗೆ ವೇದಿಕೆ

ನಾರಾವಿ: ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆಯವರ ಆಶಯದಂತೆ ಬೆಳ್ತಂಗಡಿ ತಾ| ಪತ್ರಕರ್ತರ ಸಂಘದ ನೇತೃತ್ವದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಎಂಬಂತೆ ಹಿಂದುಳಿದ ಪ್ರದೇಶದ ಅಭಿವೃದ್ಧಿಗಾಗಿ ಆಡಳಿತದ ಕಣ್ಣುತೆರೆಸಬಹುದಾದ ರೀತಿಯಲ್ಲಿ “ಪತ್ರಕರ್ತರ ಗ್ರಾಮ ವಾಸ್ತವ್ಯ” ವಿಶೇಷ ಕಾರ್ಯಕ್ರಮ ಡಿ. 23 ರಂದು ಆಯೋಜಿಸಲಾಗಿದ್ದು ಈ ಬಗ್ಗೆ ನಾರಾವಿ ಗ್ರಾ.ಪಂ ವ್ಯಾಪ್ತಿಯ ಕುತ್ಲೂರು ಸರಕಾರಿ ಶಾಲೆಯಲ್ಲಿ ಡಿ. 10 ರಂದು ಸ್ಥಳೀಯರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ತೀರಾ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ದೂರದ ಒಳನಾಡು ಪ್ರದೇಶವಾದ ಕುತ್ಲೂರು ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸದ್ರಿ ಗ್ರಾಮವನ್ನು ಸಮಗ್ರ ಅಭಿವೃದ್ಧಿಯಾಗುವಂತೆ ಕೈಗೊಳ್ಳುವಲ್ಲಿ ಸರಕಾರ, ಜನಪ್ರತಿನಿಧಿಗಳ ಗಮನಸೆಳೆಯಲು ಈ ಗ್ರಾಮವನ್ನು ಮೊದಲ ಆಯ್ಕೆ ಮಾಡಿಕೊಳ್ಳಲಾಗಿದ್ದು, ಅಲ್ಲಿನ ಸಮಸ್ಯೆಗಳ ಬಗ್ಗೆ ಅವಲೋಕನ ನಡೆಸಲು ಮತ್ತು ಕಾರ್ಯಕ್ರಮದ ರೂಪುರೇಷೆ ತಯಾರಿಸಲು ಈ ಸಭೆ ಏರ್ಪಡಿಸಲಾಗಿತ್ತು. ಡಿ. 23 ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ಆರೋಗ್ಯ ಶಿಬಿರ, ವಿವಿಧ ಇಲಾಖೆಗಳ ಸಮಸ್ಯೆಗಳ ಬಗ್ಗೆ ದ್ವಿಪ್ರತಿ ಅರ್ಜಿಗಳನ್ನು ಸಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನೇರ ಸಂವಾದಕ್ಕೆ ಅವಕಾಶ ಏರ್ಪಡಿಸಲಾಗುವುದು. ಈ ಬಗ್ಗೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ವಿವರ ನೀಡಿ, ಜಿಲ್ಲಾಡಳಿತ ಸಹಿತ ಪೊಲೀಸ್, ಅರಣ್ಯ ಇಲಾಖೆ ವನ್ಯಜೀವಿ ವಿಭಾಗ, ಎಎನ್‌ಎಫ್ ಕಾರ್ಕಳ ಇಲಾಖೆ ಕೂಡ ಭಾಗಿಯಾಗುವ ಈ ಕಾರ್ಯಕ್ರಮದ ಪೂರ್ಣ ಚಿತ್ರಣ ತೆರೆದಿಟ್ಟರು. ಉಪಸ್ಥಿತರಿದ್ದ ನಾರಾವಿ ಗ್ರಾ.ಪಂ ಅಧ್ಯಕ್ಷ ರವೀಂದ್ರ ಪೂಜಾರಿ ಸಹಕಾರದ ಭರವಸೆ ನೀಡಿದರು. ಕುತ್ಲೂರು ಕ್ಷೇತ್ರವನ್ನು ಪ್ರತಿನಿಧಿ ಸುತ್ತಿರುವ ಗ್ರಾ.ಪಂ ಉಪಾಧ್ಯಕ್ಷೆ ಯಶೋಧಾ, ಸದಸ್ಯೆ ಪ್ರಮೀಳಾ ರಾಮಚಂದ್ರ ಭಟ್, ಗಿರಿಜಾ ಇವರು ಕರಪತ್ರದ ಮೂಲಕ ಪ್ರಚಾರ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಭರವಸೆ ನೀಡಿದರು. ನಾರಾವಿ ಸಹಕಾರಿ ಸಂಘದ ಅಧ್ಯಕ್ಷ ಜೀವಂಧರ ಕುಮಾರ್ ಮಾತನಾಡಿ, ಪತ್ರಕರ್ತರೇ ಮುತುವರ್ಜಿ ವಹಿಸಿ ನಡೆಸುತ್ತಿರುವ ಈ ಕಾರ್ಯಕ್ಕೆ ಶಕ್ತಿ ಬರಲಿದ್ದು ಇದರಿಂದ ಕುತ್ಲೂರು ಗ್ರಾಮಕ್ಕೆ ಪ್ರಯೋಜನ ಲಭಿಸಿ ಇದು ದೇಶಕ್ಕೇ ಮಾದರಿಯಾಗಲಿದೆ ಎಂದರು.
ಸಮಾಲೋಚನೆಯ ಸಂದರ್ಭ ಗ್ರಾ.ಪಂ ಸದಸ್ಯ ಅನಿಲ್, ಅಭಿವೃದ್ಧಿ ಅಧಿಕಾರಿ ರವಿ ಎಸ್.ಎಮ್, ಕಾರ್ಯದರ್ಶಿ ನಿರ್ಮಲ್ ಕುಮಾರ್, ಕುತ್ಲೂರು ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಪ್ಪ ನಾಯ್ಕ, ಗ್ರಾಮಕರಣಿಕ ನಾರಾಯಣ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಬಳೆಂಜ, ವೇಣೂರು ಪೊಲೀಸ್ ಠಾಣೆ ಸಿಬ್ಬಂದಿ ಕೃಷ್ಣ, ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಪುಷ್ಪರಾಜ್, ಹರೀಶ್ ಮೋಟುಕಾನ, ಇಬ್ರಾಹಿಂ ಅಡ್ಕಸ್ಥಳ, ಆತ್ಮಭೂಷಣ್, ಬೆಳ್ತಂಗಡಿ ಸಂಘದ ಪದಾಧಿಕಾರಿಗಳಾದ ದೇವಿ ಪ್ರಸಾದ್, ಹೃಷಿಕೇಶ್ ಮೊದಲಾದವರು ಉಪಸ್ಥಿತರಿದ್ದರು. ಬೆಳ್ತಂಗಡಿ ಪತ್ರಕರ್ತರ ಸಂಘದ ಕಾರ್ಯದರ್ಶಿ ಶಿಬಿ ಧರ್ಮಸ್ಥಳ ಸ್ವಾಗತಿಸಿ, ಸದಸ್ಯ ಅಶ್ರಫ್ ಆಲಿಕುಂಞಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.