‘ಜಶನ್’ ಸೈಬರ್ ಸೆಂಟರ್ ಶುಭಾರಂಭ

ಬೆಳ್ತಂಗಡಿ : ಇಲ್ಲಿನ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯ ಸುದ್ದಿ ಬಿಡುಗಡೆ ಕಚೇರಿ ಬಳಿ ನೂತನವಾಗಿ ಪ್ರಾರಂಭಗೊಂಡ ಜಶನ್ ಸೈಬರ್ ಇದರ ಉದ್ಘಾಟನೆಯು ಡಿ. 12 ರಂದು ನಡೆಯಿತು.
ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಸಂಸ್ಥೆಯನ್ನು ದೀಪಬೆಳಗಿಸುವುದರೊಂದಿಗೆ ನೆರವೇರಿಸಿ ಮಾತನಾಡಿ, ಸಂಸ್ಥೆಗೆ ಬರುವ ಗ್ರಾಹಕರಿಗೆ ಉತ್ತಮ ನಗುಮೊಗದ ಸೇವೆ ನೀಡುವುದರೊಂದಿಗೆ ಅವರನ್ನು ಉಪಚರಿಸಿದರೆ ಸಂಸ್ಥೆಯೂ ಬೆಳೆಯುವುದರೊಂದಿಗೆ ನಾವು ಬೆಳೆಯುತ್ತೇವೆ ಎನ್ನುತ್ತಾ ಸಂಸ್ಥೆಯೂ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಲಕರ ಮಾತಪಿತರಾದ ಶ್ರೀಮತಿ ಬಿ.ಜೆ ಹರಿಣಾಕ್ಷಿ ಮತ್ತು ಜಗನ್ನಾಥ ಬಂಗೇರ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ, ಮಾಜಿ ಅಧ್ಯಕ್ಷರುಗಳಾದ ಪೀತಾಂಬರ ಹೇರಾಜೆ, ಭಗೀರಥ ಜಿ, ಉದ್ಯಮಿ ಜೇಮ್ಸ್ ಡಿಸೋಜಾ, ಮೊಬೈಲ್ ಪ್ಯಾಲೇಸ್ ಮಾಲಕ ಉಮೇಶ್ ಚಿದಾನಂದ ಇಡ್ಯಾ, ರೋಶನ್ ಬಿ.ಜೆ, ಜ್ಯೋತಿ ಬಿ.ಜೆ, ಉಮೇಶ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು. ಬಂದಂತಹ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕ ಪ್ರಶಾಂತ್ ಬಿ.ಜೆ ಸ್ವಾಗತಿಸಿ ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.