ಆರ್‌ಎಫ್‌ಸಿ ಗಾಸ್ ರೆಂಕೆದಗುತ್ತು ದೀಪಾವಳಿಯ ಪ್ರಯುಕ್ತ ಆಟೋಟ ಸ್ಪರ್ಧೆ

Advt_NewsUnder_1
Advt_NewsUnder_1

ಬೆಳ್ತಂಗಡಿ: ಆರ್‌ಎಫ್‌ಸಿ ಗಾಸ್ ರೆಂಕೆದಗುತ್ತು ಫ್ರೆಂಡ್ಸ್ ಸರ್ಕಲ್ ನಡೆಸುವ 4ನೇ ವರ್ಷದ ದೀಪಾವಳಿ ಪ್ರಯುಕ್ತ ಆಟೋಟ ಸ್ಪರ್ಧೆಯು ಕುತ್ಯಾರು ಹೊಸಮನೆ ರೆಂಕೆದಗುತ್ತು ಎಂಬಲ್ಲಿ ಡಿ.9 ರಂದು ಜರುಗಿತು.
ಉದ್ಘಾಟನೆಯನ್ನು ಬೆಳ್ತಂಗಡಿ ವಕೀಲರಾದ ಪ್ರಸಾದ್ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕುಬೇರನ್ ಫೈನಾನ್ಸ್‌ನ ಅರ್ಜುನನ್, ಮುಗುಳಿ ಅಂಗನವಾಡಿ ಶಿಕ್ಷಕಿ ಪದ್ಮಾವತಿ, ವಾಣಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಶಂಕರ್ ರಾವ್, ಆರ್‌ಎಫ್‌ಸಿ ರೆಂಕೆದಗುತ್ತು ಇದರ ಅಧ್ಯಕ್ಷ ಕಿರಣ್ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಗುಳಿ ನಾರಾಯಣ ರಾವ್, ಸುದ್ದಿಬಿಡುಗಡೆ ವರದಿಗಾರ ತುಕಾರಾಮ್.ಬಿ, ರಾಜಕೇಸರಿ ತಾಲೂಕು ಸಂಚಾಲಕ ಪ್ರದೀಪ್ ಶೆಟ್ಟಿ, ಕ್ರೇಜಿ ಬಾಯ್ಸ್ ಅಧ್ಯಕ್ಷ ಅನ್ಸಫ್, ಸತ್ಯಶ್ರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಬಾಬು, ಕೋಟಿ ಚೆನ್ನಯ ಎಂಟರ್ ಪ್ರೈಸಸ್ ಮಾಲಕ ಮನು, ಆರ್‌ಎಫ್‌ಸಿ ಗಾಸ್ ಅಧ್ಯಕ್ಷ ಕಿರಣ್ ಉಪಸ್ಥಿತರಿದ್ದರು. ದೀಕ್ಷಿತ್ ಗಾಣಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಈ ಸಂದರ್ಭದಲ್ಲಿ ಆರ್‌ಎಫ್‌ಸಿ ಗಾಸ್ ವತಿಯಿಂದ ಪಟ್ಟಣ ಪಂಚಾಯತ್ ಸದಸ್ಯರಾದ ಜಯಾನಂದ ಗೌಡ, ಲೋಕೇಶ್, ಶರತ್ ಕುಮಾರ್, ಗೌರಿ, ಜನಾರ್ದನ, ತುಳಸಿ ಕರುಣಾಕರ್, ರಜನಿ ಕುಡ್ವ ಇವರುಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಆರ್‌ಎಫ್‌ಸಿ ಗಾಸ್ ವತಿಯಿಂದ ಪಟ್ಟಣ ಪಂಚಾಯತ್ ಸದಸ್ಯರಾದ ಜಯಾನಂದ ಗೌಡ, ಲೋಕೇಶ್, ಶರತ್ ಕುಮಾರ್, ಗೌರಿ, ಜನಾರ್ದನ, ತುಳಸಿ ಕರುಣಾಕರ್, ರಜನಿ ಕುಡ್ವ ಇವರುಗಳನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.