ಓಡಿಲ್ನಾಳ: ಗೌಡರ ಯಾನೆ ಒಕ್ಕಲಿಗರ ಕ್ರೀಡೋತ್ಸವ

ಓಡಿಲ್ನಾಳ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಓಡಿಲ್ನಾಳ ಗ್ರಾಮ ಸಮಿತಿ ಹಾಗೂ ಯುವ ವೇದಿಕೆ ಇದರ ವತಿಯಿಂದ ಗ್ರಾಮದ ಸ್ವಜಾತಿ ಬಾಂಧವರಿಗೆ ಕ್ರೀಡೋತ್ಸವ ಕಾರ್ಯಕ್ರಮವು ಡಿ.9 ರಂದು ನೇಮಣ್ಣ ಗೌಡ ಕರ್ನಂತ್ತೋಡಿ ಇವರ ಮನೆಯಲ್ಲಿ ನಡೆಯಿತು. ಗೌರವಾಧ್ಯಕ್ಷ ಚೆನ್ನಪ್ಪ ಗೌಡ ಕರ್ನಂತ್ತೋಡಿ ದೀಪ ಬೆಳಗಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.
ಓಡಿಲ್ನಾಳ ಗ್ರಾಮ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಶಿವಪ್ಪ ಗೌಡ ಉಳತ್ತೋಡಿ ಸಭಾ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಮೇದಿನಿ ಡಿ ಗೌಡ ಮತ್ತು ತಾಲೂಕು ಯುವ ವೇದಿಕೆ ಕಾರ್ಯದರ್ಶಿ ವಿನಯಚಂದ್ರ ಗೌಡ ಹಾಗೂ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ತಿರುಮಲೇಶ ಗೌಡ ವಾರ್ಷಿಕ ವರದಿ ವಾಚಿಸಿದರು. ನಂತರ ವಿವಿಧ ಅಟೋಟ ಸ್ಪರ್ಧೆ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಶಿವಪ್ಪ ಗೌಡ ಉಳತ್ತೋಡಿ ವಹಿಸಿದ್ದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯರಾಗಿ ಜಯಾನಂದ ಗೌಡ ಟಿ. ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಅಥಿತಿಗಳಾಗಿ ಬೆಳ್ತಂಗಡಿ ತಾಲೂಕು ಸಮಿತಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಸೋಮೇ ಗೌಡ, ಪುಂಜಾಲಕಟ್ಟೆ ಕಾಲೇಜು ಉಪನ್ಯಾಸಕ ಆನಂದ ಡಿ ಗೌಡ, ಬೆಳ್ತಂಗಡಿ ಪ.ಪಂ ಸದಸ್ಯ ಜಯಾನಂದ ಗೌಡ ಟಿ, ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯ ಲಕ್ಷ್ಮಣ ಗೌಡ ಕೇದಗೆ, ಯುವ ವೇದಿಕೆ ಅಧ್ಯಕ್ಷ ರಾಘವೇಂದ್ರ ಗೌಡ ಕರ್ನಂತ್ತೋಡಿ, ನೇಮಣ್ಣ ಗೌಡ ಕರ್ನಂತ್ತೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುರಂದರ ಕೆ ಗೌಡ ಕರ್ನಂತ್ತೋಡಿ, ಎಸ್‌ಡಿ ಎಂ ಕಾಲೇಜು ಉಪನ್ಯಾಸಕ ಪುರಂದರ ಗೌಡ ಸಂಬೋಳ್ಯ, ವಾಣಿ ಕಾಲೇಜು ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ವರದಿ: ಕೆ.ಎನ್.ಗೌಡ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.