ಬಿಎಸ್‌ಪಿಯಿಂದ ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನ

ಬೆಳ್ತಂಗಡಿ: ಅಂಬೇಡ್ಕರ್ ಚಿಂತನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂಬುದಾಗಿ ಬಿಎಸ್‌ಪಿ ಮಂಗಳೂರು ಡಿವಿಷನ್ ಉಸ್ತುವಾರಿ ರಘು ಧರ್ಮಸೇನ ಹೇಳಿದರು.
ದ.ಕ. ಜಿಲ್ಲಾ ಬಹುಜನ ಸಮಾಜ ಪಾರ್ಟಿ ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಡಾ. ಅಂಬೇಡ್ಕರ್ ಅವರ “ಮಹಾ ಪರಿನಿರ್ವಾಣ” ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಬಿಎಸ್‌ಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರಾಜಕೀಯ ಅಧಿಕಾರವನ್ನು ಮಾಸ್ಟರ್ ಕೀ ತರಹ ಬಳಸಿಕೊಂಡು ನಮ್ಮ ಆರ್ಥಿಕ ಸಾಮಾಜಿಕ ವಿಮೋಚನೆಯನ್ನು ಮಾಡಿಕೊಳ್ಳಬಹುದು ಎಂಬ ಅಂಬೇಡ್ಕರ್ ಅವರ ತತ್ವವನ್ನು ಆಧಾರಿಸಿ ಬಿಎಸ್‌ಪಿ ಕೆಲಸ ಮಾಡುತ್ತಿದ್ದು ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಮತ್ತು ಅದರಲ್ಲಿಯೂ ಬೆಳ್ತಂಗಡಿಯಲ್ಲಿ ಪಕ್ಷವನ್ನು ಬಹಳ ಗಂಭೀರವಾಗಿ ಪುನರ್ ಸಂಘಟಿಸಲಾಗುವುದು. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ತುಂಬಾ ಗಂಭೀರವಾಗಿ ಕೆಲಸ ಮಾಡಿ ಮಾಯವತಿಯವರನ್ನು ದೇಶದ ಪ್ರಧಾನಿಯಾಗಿ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಬಿಎಸ್‌ಪಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಸಾಲ್ಯಾನ್ ಸಾಣೂರು ಶುಭ ಕೋರಿದರು. ಕಾರ್ಯಕ್ರಮದಲ್ಲಿ ಪಕ್ಷದ ಬೆಳ್ತಂಗಡಿ ನಗರ ಉಸ್ತುವಾರಿ ಸುಂದರ್ ಮುಗುಳಿ ಮಾತನಾಡಿದರು. ಪಕ್ಷದ ಧರ್ಮಸ್ಥಳ ಜಿ.ಪಂ. ಕ್ಷೇತ್ರ ಸಮಿತಿಯ ಉಸ್ತುವಾರಿ ಶರತ್ ಧರ್ಮಸ್ಥಳ, ಬೆಳ್ತಂಗಡಿ ವಿಧಾನ ಸಭಾ ಸಮಿತಿಯ ಖಜಾಂಚಿ ಶ್ರಿನೀವಾಸ್ ಉಪಸ್ಥಿತರಿದ್ದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಗರ್ಡಾಡಿ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.