ಬೆಳ್ತಂಗಡಿ: ಜೆಡಿಎಸ್ ಕಾರ್ಯಕರ್ತರ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಜೆಡಿಎಸ್ ಪಕ್ಷ ರೈತರ ಪರ ನೈಜ ಕಾಳಜಿ ಹೊಂದಿರುವ ಪಕ್ಷ. ಈ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ಅನೇಕ ಯೋಜನೆಗಳು ಜನರ ಬಳಿ ನೇರವಾಗಿ ಬಂದು ತಲುಪಿದೆ. ಆದ್ದರಿಂದ ಜೆಡಿಎಸ್ ಎಂದರೆ ಆರ್ಥಿಕ ಸಾಮಾಜಿಕ ಬದಲಾವಣೆಯ ಸಂಕೇತ ಎಂದು ಜೆಡಿಎಸ್ ರಾಜ್ಯ ಕಾರ್ಯರಿಣಿ ಸದಸ್ಯರೂ ಆಗಿರುವ ಜಿ.ಪಂ ಮಾಜಿ ಸದಸ್ಯ ತುಂಗಪ್ಪ ಗೌಡ ಅಭಿಪ್ರಾಯಪಟ್ಟರು.
ಬೆಳ್ತಂಗಡಿ ಸುವರ್ಣ ಆರ್ಕೆಡ್‌ನಲ್ಲಿ ಡಿ. ೮ ರಂದು ನಡೆದ ಪಕ್ಷದ ಕಾರ್ಯಕರ್ತರ ಸಂಪರ್ಕ ಮತ್ತು ಅಧಿಕಾರ ಹಂಚಿಕೆ ಸಭೆಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪಕ್ಷದ ತಾ| ಅಧ್ಯಕ್ಷ ಪ್ರವೀಣ್ಚಂದ್ರ ಜೈನ್ ಮಾತನಾಡಿ, ಪಕ್ಷದ ಚುಣಾವಣೆಗಳಲ್ಲಿ ನಿಸ್ವಾರ್ಥವಾಗಿ ದುಡಿಯುವವರನ್ನು ಪಕ್ಷ ಕಾಲ ಕಾಲಕ್ಕೆ ಗುರುತಿಸಿ ಅವರಿಗೆ ಪಕ್ಷದಲ್ಲಿ ಸ್ಥಾನಮಾನಗಳನ್ನು ನೀಡುವ ಕೆಲಸ ಮಾಡಿಕೊಂಡು ಬಂದಿದೆ ಎಂದರು.
ರಾಜ್ಯ ಉಪಾಧ್ಯಕ್ಷ ಎಂ.ಬಿ ಸದಾಶಿವ ಕೇಂದ್ರ ಸರಕಾರದ ವೈಫಲ್ಯಗಳ ಬಗ್ಗೆ ಸಭೆಗೆ ತಿಳಿಸಿ, ತಾಲೂಕಿನಲ್ಲಿ ಜೆಡಿಎಸ್ ಉಳಿವಿಗಾಗಿ ಶ್ರಮಿಸುತ್ತಿರುವ ಇಲ್ಲಿನ ನಾಯಕರು ಮತ್ತು ಕಾರ್ಯಕರ್ತರು ಅಭಿನಂದನೆಗೆ ಅರ್ಹರು ಎಂದರು.
ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ, ಸುಳ್ಯದ ಮುಖಂಡ ಮಹೇಶ್, ತಾ| ಮಹಿಳಾ ಘಟಕದ ಅಧ್ಯಕ್ಷೆ ಸಿಂದೂದೇವಿ, ಎಪಿಎಂಸಿ ಸದಸ್ಯೆ ಚಂಚಲಾ ಕುಂದರ್, ಹಿಂದುಳಿದವರ್ಗಗಳ ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಪೆರಿಂಜೆ, ಯುವ ಜನತಾದಳ ಅಧ್ಯಕ್ಷ ಸೂರಜ್ ವಳಂಬ್ರ, ಸಂಘಟನಾ ಕಾರ್ಯದರ್ಶಿಗಳಾದ ಎಚ್.ಎನ್ ನಾಗರಾಜ್ ಮತ್ತು ಪ್ರಕಾರ್ಶ ಹೆಬ್ಬಾರ್, ಪ್ರ. ಕಾರ್ಯದರ್ಶಿ ರಾಮ ಆಚಾರಿ ಮುಂಡಾಜೆ ಉಪಸ್ಥಿತರಿದ್ದರು. ಜಿಲ್ಲಾ ಯುವ ಘಟಕದ ಸಂ| ಕಾರ್ಯದರ್ಶಿ ಕಿಶೋರ್ ಅರಸಿನಮಕ್ಕಿ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.