HomePage_Banner_
HomePage_Banner_
HomePage_Banner_

ನಾಮದೇವ ರಾವ್ ಮುಂಡಾಜೆ ಯವರಿಗೆ ಅಟಲ್‌ಜೀ ಪ್ರಶಸ್ತಿ

ಮುಂಡಾಜೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇವರ ವತಿಯಿಂದ ಇತ್ತೀಚೆಗೆ ಪುಂಜಾಲಕಟ್ಟೆಯಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಮತ್ತು ಅಟಲ್ ಜಿ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮುಂಡಾಜೆ ಯಂಗ್ ಚಾಲೆಂಜರ್ಸ್ಸ್ ಕ್ರೀಡಾ ಸಂಘದ ಸಂಸ್ಥಾಪಕ ಲ|ನಾಮದೇವ ರಾವ್ ಅವರಿಗೆ ಅಟಲ್ ಜಿ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಗಿದೆ.
ಕ್ರೀಡಾ ಸಂಘಟನೆ ಮತ್ತು ಯುವ ಸಬಲೀಕರಣ ಕ್ಷೇತ್ರದಲ್ಲಿ ಸುದೀರ್ಘ ವರ್ಷಗಳಿಂದ ತನ್ನನ್ನು ತೊಡಗಿಸಿಕೊಂಡಿರುವ ಅವರ ಸೇವೆಯನ್ನು ಗುರುತಿಸಿ ಈ ಪುರಸ್ಕಾರಕ್ಕೆ ಅವರನ್ನು ಆಯ್ಕೆ ಮಾಡಲಾಗಿತ್ತು. ಪದವೀಧರರಾಗಿರುವ ಅವರು ಈಗಾಗಲೇ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಹಕಾರಿ ಕ್ಷೇಥ್ರಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ್ದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಕಡೆಗಳಲ್ಲಿ ಪುರಸ್ಕಾರಗಳಿಗೆ ಭಾಜನರಾದವರಾಗಿದ್ದಾರೆ. ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ, ಜಿ.ಪಂ ಸದಸ್ಯರೂ ಆಗಿರುವ ಎಂ ತುಂಗಪ್ಪ ಬಂಗೇರ ಅವರೂ ಸೇರಿದಂತೆ ಸಮಾರಂಭದಲ್ಲಿದ್ದ ಆಡ್ಯಗಣ್ಯ ಮಹನೀಯರು ಈ ಪುರಸ್ಕಾರದ ವೇಳೆ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.