ವಾಣಿ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಮತ್ತು ವಸ್ತುಪ್ರದರ್ಶನ

ಬೆಳ್ತಂಗಡಿ : ಇಲ್ಲಿಯ ವಾಣಿ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಬೆಳ್ತಂಗಡಿ ವಕೀಲರಾದ ಶಶಿಕಿರಣ್ ಜೈನ್  ಉದ್ಘಾಟಿಸಿ, ವಿದ್ಯಾರ್ಥಿಗಳು ವಿಜ್ಞಾನದ ಜೊತೆಗೆ ಸಾಮಾಜಿಕ ಜೀವನ ಮೌಲ್ಯಗಳನ್ನು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಸಂಸ್ಕಾರಯುತವಾದ ಪ್ರಜೆಯಾಗಲು ಸಾಧ್ಯ ಎಂದು ಹೇಳಿದರು.
ಅಧಕ್ಷತೆ ವಹಿಸಿ ಮಾತನಾಡಿದ ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ  ಜಿ.ಸೋಮೇ ಗೌಡ, ವಿದ್ಯಾರ್ಥಿಗಳ ವಿಜ್ಞಾನ ಭವಿಷ್ಯ ಉತ್ತಮವಾಗಲಿ ಎಂದು ಶುಭ ಹಾರೈಸಿದರು.   ಮುಖ್ಯ ಅತಿಥಿಗಳಾಗಿ ವಾಣಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮೋಹನ್ ಗೌಡ, ವಕೀಲ  ಶ್ರೀನಿವಾಸ ಗೌಡ ಬೆಳಾಲು,  ದಿನೇಶ್ ದೇಲಂಪಾಡಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ, ವಿಜ್ಞಾನದ ಸಂಘದ ಸಂಯೋಜಕರಾದ ವಿದ್ಯಾ ಶ್ರೀನಿವಾಸ ಗೌಡ, ವಿಜ್ಞಾನ ಸಂಘದ ಅಧ್ಯಕ್ಷೆ ಡಿ.ಎಮ್ ದೀಕ್ಷಾ ಉಪಸ್ಥಿತರಿದ್ದರು.  5 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು 310 ಮಾದರಿಯನ್ನು ಪ್ರದರ್ಶಿಸಿದರು.
ಸಹಶಿಕ್ಷಕಿ ರೇಷ್ಮಾ ಸ್ವಾಗತಿಸಿ, ವಿದ್ಯಾರ್ಥಿಗಳಾದ ಜೋಸ್ಲಿನ್ ಹಾಗೂ ಗ್ರೀಷ್ಮಾ ವಿ.ಎಮ್.ನಿರೂಪಿಸಿ, ಸಹ ಶಿಕ್ಷಕಿ ಶಾಂತಿ ಕಾಮತ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.