ಓಡಿಲ್ನಾಳ : ರೋವರ್ಸ್- ರೇಂಜರ್ಸ್ ಸಮಾಗಮ, ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ ಹಾಗೂ ಕಬ್ಸ್-ಬುಲ್ಸ್ ಉತ್ಸವ

ಓಡಿಲ್ನಾಳ: ಸಾರ್ವಜನಿಕ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಡಂತ್ಯಾರು, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಓಡಿಲ್ನಾಳ ಇವುಗಳ ಜಂಟಿ ಆಶ್ರಯದಲ್ಲಿ ರೋವರ್ಸ್ – ರೇಂಜರ್ಸ್ ಸಮಾಗಮಾ, ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ ಹಾಗೂ ಕಬ್ಸ್ – ಬುಲ್ಸ್ಉತ್ಸವ 2018 – 2019 ಧ್ವಜಾರೋಹಣ ಕಾರ್ಯಕ್ರವು ಓಡಿಲ್ನಾಳ ಶಾಲಾ ವಠಾರದಲ್ಲಿ  ಡಿ.7 ರಂದು ಜರುಗಿತು.

ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ ಗೈಡ್ಸ್ ಸ್ಥಳೀಯ ಸಂಸ್ಥೆ  ಮಡಂತ್ಯಾರು ಕಾರ್ಯದರ್ಶಿ ಎಂ.ಶಾಂತಾರಾಮ ಪ್ರಭು,  ಕೋಶಾಧಿಕಾರಿ ಸುಜಾತಾ, ಸಹಕಾರ್ಯದರ್ಶಿ ಧರಣೇಂದ್ರ ಕೆ, ಶಾಲಾ ಮುಖ್ಯೋಪಾಧ್ಯಾಯ ಹಾಗೂ ರ್‍ಯಾಲಿ ನಿರ್ದೇಶಕ  ದತ್ತಾತ್ರೇಯ ಗೊಲ್ಲ, ಶಾಲಾ ಎಸ್.ಡಿ.ಎಂ.ಸಿ ಸಮಿತಿ  ಅಧ್ಯಕ್ಷ ರುದೇಶ್ ಕುಮಾರ್, ವಾರ್ಡ್ ಸಮಿತಿ ಅಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರುಣ್ ಸುಮಿತ್ ಡಿ’ಸೋಜಾ ಉಪಸ್ಥಿತರಿದ್ದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯಕಾರಿಣಿ ಸಮಿತಿಯ ಪದಾಧಿಕಾರಿಗಳು, ರೋವರ್ಸ್ ಸ್ಕೌಟ್ ಲೀಡರ್ಸ್ ರೇಂಜರ್ಸ್ ಲೀಡರ್ಸ್ ಸ್ಕೌಟರ್ಸ್ ಗೈಡರ್ಸ್ ಕಬ್ ಮಾಸ್ಟರ್ಸ್ ಮತ್ತು ಫ್ಲೋಕ್ ಲೀಡರ್ಸ್ ಸದಸ್ಯರು, ಶಿಕ್ಷಕ ವೃಂದ,ವಿದ್ಯಾರ್ಥಿಗಳು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.