ಮೇಲಂತಬೆಟ್ಟು : ಗುತ್ತಿನಬೈಲು ಅಂಗನವಾಡಿ ಕೇಂದ್ರ ಉದ್ಘಾಟನೆ

ಮೇಲಂತಬೆಟ್ಟು: ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳ್ತಂಗಡಿ, ಗ್ರಾ.ಪಂ ಮೇಲಂತಬೆಟ್ಟು ಇದರ ಸಹಯೋಗದಲ್ಲಿ ಸವಣಾಲು ಗ್ರಾಮದ ಗುತ್ತಿನಬೈಲು ಅಂಗನವಾಡಿ ಕೇಂದದ್ರ ಉದ್ಘಾಟನಾ ಕಾರ್ಯಕ್ರಮವು ಡಿ.5 ರಂದು ಅಂಗನವಾಡಿ ವಠಾರದಲ್ಲಿ ಜರುಗಿತು.
ಶಾಸಕ ಹರೀಶ್ ಪೂಂಜ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ, ಶುಭ ಹಾರೈಸಿದರು. ಮೇಲಂತಬೆಟ್ಟು ಗ್ರಾ.ಪಂ ಅಧ್ಯಕ್ಷೆ ನಳಿನಿ ಸಂಜೀವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿರ್ಲಾಲು ಕ್ಷೇತ್ರದ ತಾ.ಪಂ ಅಧ್ಯಕ್ಷೆ ಜಯಶೀಲಾ ಕುಶಾಲಪ್ಪ ಗೌಡ, ಮಂಗಳೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಉಪಸ್ಥಿತರಿದ್ದರು.
ಮೇಲಂತಬೆಟ್ಟು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಹಾದೇವ ಗಡೇಕಾರ, ಗ್ರಾ.ಪಂ ಉಪಾಧ್ಯಕ್ಷ ಶಿವರಾಮ ಗೌಡ, ಗ್ರಾ.ಪಂ ಸದಸ್ಯರು, ಗ್ರಾ.ಪಂ ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.