ಗುರುವಾಯನಕೆರೆಯ ಪಣೆಜಾಲು ಅಮರಜಾಲು ನಿವಾಸಿ ಕೊರಗಪ್ಪ ಶೆಟ್ಟಿ (85.ವ) ರವರು ಗುರುವಾಯನಕೆರೆ ಕುಲಾಲ್ ಮಂದಿರದ ಸಮೀಪ ಡಿ.5ರಂದು ನಡೆದ ಅಪಘಾತದಲ್ಲಿ ಮೃತರಾಗಿದ್ದಾರೆ. ಪಾದಚಾರಿಯಾಗಿ ಗುರುವಾಯನಕೆರೆಯಿಂದ ಮನೆಗೆ ವಾಪಾಸ್ ಬರುವಾಗ ಖಾಸಗಿ ಬಸ್ಸು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಮೃತರು ಪತ್ನಿ ಕಮಲ ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ