HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಧರ್ಮಸ್ಥಳದಲ್ಲಿ ರಾಜ್ಯಮಟ್ಟದ ವೈವಿಧ್ಯಮಯ ವಸ್ತುಪ್ರದರ್ಶನ ಉದ್ಘಾಟನೆ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಡಿ. 2 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ಈ ಸಂದರ್ಭ ಮಂಗಳೂರಿನ ಶೋಭಾಕರ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ನಿವೃತ್ತ ಪ್ರಾಂಶುಪಾಲ ಎ.ರಾಜೇಂದ್ರ ಶೆಟ್ಟಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೋ. ಎಸ್ ಪ್ರಭಾಕರ್, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಲ| ಎಂ.ಜಿ ಶೆಟ್ಟಿ, ಲ| ರಾಮಕೃಷ್ಣ ಗೌಡ, ಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಸ್ತುಪ್ರದರ್ಶನ ಮಂಟಪದಲ್ಲಿ ನಡೆದ ಕಾರ್ಯಕ್ರಮಗಳ ಉದ್ಘಾಟನೆಯನ್ನು ಪ್ರೋ. ಎಸ್ ಪ್ರಭಾಕರ್, ಭಾರತೀಯ ಜೀವ ವಿಮಾ ನಿಗಮದ ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿ ಯೋಗೇಂದ್ರ, ಅಭಿವೃದ್ಧಿ ಅಧಿಕಾರಿಗಳಾದ ಎಂ.ವಿ ಶೆಟ್ಟಿ, ಜಯದೇವ್, ಉದಯಶಂಕರ್ ಮೊದಲಾದವರು ದೀಪಬೆಳಗುವಲ್ಲಿ ಜೊತೆಯಾದರು. ಸುನಿಲ್ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.