ಉಜಿರೆ: ಐ ಎನ್ ಡಿ ಒ- ಯು ಎಸ್ ಸೈನ್ಸ್ ಅಂಡ್ ಟೆಕ್ನಾಲಜಿ ಫಾರಂ ಡಿಪಾರ್ಟ್ ಮೆಂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ, ಗವರ್ನಮೆಂಟ್ ಆಫ್ ಇಂಡಿಯ ಮತ್ತು ಇಂಟೆಲ್ನವರು ಆಯೋಜಿಸುವ ಇನಿಷಿಯೇಟಿವ್ ಫಾರ್ ರಿಸರ್ಚ್ ಅಂಡ್ ಇನೋವೇಷನ್ ಇನ್ ಸ್ಟೆಮ್ ನಲ್ಲಿ ಉಜಿರೆಯ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಕು| ಮೂರ್ಜೆ ಸುನೀತಾ.ವಿ ಪ್ರಭು ದೆಹಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿದ್ದಾರೆ. 2019 ರಲ್ಲಿ ಯು ಎಸ್ ಎ ಯ ಫೀನಿಕ್ಸ್ನಲ್ಲಿ ನಡೆಯಲಿರುವ ಇಂಟೆಲ್ ಇಂಟರ್ ನ್ಯಾಷನಲ್ ಸೈನ್ಸ್ ಎಂಜಿನಿಯರಿಂಗ್ ಫೇರ್ನಲ್ಲಿ ನಮ್ಮ ರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ. ಇವರು ಮೂರ್ಜೆ ವಿವೇಕಾನಂದ ಪ್ರಭು ಮತ್ತು ಶಾಂತಲಾ. ವಿ.ಪ್ರಭು ದಂಪತಿ ಪುತ್ರಿ.