ಶಾಲಾ ವೇಳೆಗೆ ಪ್ರಾಯೋಗಿಕ ಸರಕಾರಿ ಶಾಲಾ ಬಸ್ಸು ಬಗ್ಗೆ ಚಿಂತನೆ: ಹರೀಶ್ ಪೂಂಜ

ಕೆಎಸ್‌ಆರ್‌ಟಿಸಿ-ಆರ್‌ಟಿಒ: ಜನಸ್ಪಂದನಾ ಸಭೆ

ಬೆಳ್ತಂಗಡಿ: ತಾಲೂಕಿನಲ್ಲಿ ಈ ವರ್ಷ 9 ಸಾವಿರ ವಿದ್ಯಾರ್ಥಿಗಳಿಗೆ ಬಸ್ಸು ಪಾಸು ಜಾರಿಗೊಳಿಸಲಾಗಿದ್ದು ಅವರ ಬೇಡಿಕೆ ಈಡೇರಿಸುವಲ್ಲಿ ಕೆಎಸ್‌ಆರ್‌ಟಿಸಿ ವಿಫಲವಾಗಿದೆ. ಈಗಲೂ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ಪಾಸು ಇದ್ದರೂ ಅನಿವಾರ್ಯವಾಗಿ ಖಾಸಗಿ ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕಾಗಿದ್ದು, ಆ ಹಿನ್ನಲೆಯಲ್ಲಿ ಶಾಲಾ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಪ್ರತ್ಯೇಕ ಶಾಲಾ ಬಸ್ಸು ಪರಿಕಲ್ಪನೆಯನ್ನು ಬೆಳ್ತಂಗಡಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರುವಂತೆ ಸರಕಾರದಿಂದ ವ್ಯವಸ್ಥೆ ಮಾಡುವ ಚಿಂತನೆ ಹೊಂದಿದ್ದೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಕೆಎಸ್‌ಆರ್‌ಟಿಸಿ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಡಿ. 3 ರಂದು ಬೆಳ್ತಂಗಡಿ ಎಸ್‌ಡಿಎಂ ಕಲಾಭವನದಲ್ಲಿ ಕರೆಯಲಾಗಿದ್ದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಜಿ.ಎಸ್ ಹೆಗ್ಡೆ, ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ನಾಗರಾಜ್ ಶಿರಾಲಿ, ಮಂಗಳೂರು ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್ ಉಪಸ್ಥಿತರಿದ್ದರು.
ಉಜಿರೆ ಬಸ್ಸು ನಿಲುಗಡೆ ಬಗ್ಗೆ ತಾ.ಪಂ ಸದಸ್ಯ ಶಶಿಧರ ಎಂ ಕಲ್ಮಂಜ ಪ್ರಶ್ನಿಸಿದರು. ನಿಡಿಗಲ್ ಸರಕಾರಿ ಪ್ರೌಢ ಶಾಲೆಯ ಬಳಿಯೂ ನಿಲುಗಡೆ ಬೇಕು ಎಂದು ಒತ್ತಾಯಿಸಿದರು. ಕೃಷ್ಣಪ್ಪ ಎಂ.ಕೆ ಕನ್ಯಾಡಿ ಮಾತನಾಡಿ, ಮುಂಡಾಜೆ -ಕಕ್ಕಿಂಜೆ- ಚಾರ್ಮಾಡಿ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿರುವ ವೇಗಧೂತ ಬಸ್ಸು
ನಿಲುಗಡೆಗೆ ಆದೇಶ ಇದ್ದರೂ ಪಾಲಿಸಲಾಗುತ್ತಿಲ್ಲ ಎಂದು ದೂರಿದರು. ಮಡಂತ್ಯಾರು-ಮಾಲಾಡಿ ಭಾಗದಲ್ಲಿ ಬಸ್ಸು ನಿಲುಗಡೆ ಇಲ್ಲದ್ದರಿಂದ ಐಟಿಐ ಸಹಿತ ಶಾಲಾ ಕಾಲೇಜು ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ತಾ.ಪಂ ಸದಸ್ಯ ಜೋಯೆಲ್ ಮೆಂಡೋನ್ಸಾ, ಅರವಿಂದ ಜೈನ್ ಗಮನಸೆಳೆದರು. ಕ್ರಮದ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದರು.
ವಿಲ್ಬರ್ಟ್ ಲೋಬೋ ಮಾತನಾಡಿ, ರೂಟ್‌ನಲ್ಲಿ ಮಂಜೂರಾದ ಬಸ್ಸುಗಳಷ್ಟು ರಸ್ತೆಯಲ್ಲಿ ಓಡಾಡುತ್ತಿಲ್ಲ. ಇದರಿಂದ ಜನ ರಸ್ತೆ ಬದಿ ಗಂಟೆಗಟ್ಟಲೆ ಕಾಯುವ ಸ್ಥಿತಿ ಇದೆ ಎಂದು ವಿವರಿಸಿದಾಗ, ಉತ್ತರಿಸಿದ ಅಧಿಕಾರಿಗಳು ಬೆಳಗ್ಗಿನ ಜಾವದಿಂದ 4-5-7 ನಿಮಿಷ ಅಂತರದಲ್ಲಿ ಹೊರಡುವ ಲೋಕಲ್ ಮತ್ತು ಎಕ್ಸ್‌ಪ್ರೆಸ್ ಬಸ್ಸುಗಳ ಪಟ್ಟಿವಾಚಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಈ ವೇಳೆ ಮಾತನಾಡಿದ ಶಾಸಕರು, ಬೆಳಿಗ್ಗೆ 8 ರಿಂದ 9.30 ರವರೆಗೆ ಶಾಲಾ ಮಕ್ಕಳಿಗೆ ಅನುಕೂಲ ವಾಗುವಂತೆ ಕ್ರಮಕೈಗೊಳ್ಳಲು ಸೂಚಿಸಿದರು.
ಹಳೆಯ ಕಾಲದ ಸ್ಟೇಜ್(ನಿಲುಗಡೆ ತಾಣ) ವ್ಯವಸ್ಥೆ ಈಗಲೂ ಇದೆ ಎಂದು ಉಂಡೆಮನೆ ನಾರಾಯಣ ಭಟ್ ಗಮನಕ್ಕೆ ತಂದಾಗ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ಕಳೆದ 30 ವರ್ಷಗಳ ಹಿಂದಿನ ಸ್ಟೇಟ್ ವ್ಯವಸ್ಥೆಯನ್ನು ಪುನರ್ ರಚಿಸುವಂತೆ ಸರಕಾರಕ್ಕೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸರಕಾರದ ಕಡೆಯಿಂದ ಒತ್ತಡ ತರುವ ಕೆಲಸ ತಾನು ಮಾಡುವುದಾಗಿ ಹೇಳಿದರು.
ಉಪ್ಪಿನಂಗಡಿ ಬಾರ್ಯ ಬಾಜಾರು ನೆಲ್ಲಿಪಲಿಕೆ ಈ ಕಡೆಗೆ ೮ ಬಸ್ಸುಗಳ ರೂಟ್ ಇದ್ದರೂ ಎರಡೇ ಬಸ್ಸು ಬರುತ್ತಿರುವುದಾಗಿ ಮಂಜುನಾಥ ಸಾಲ್ಯಾನ್ ದೂರಿದರು. ಈ ಭಾಗದಲ್ಲಿ ಖಾಸಗಿ ಬಸ್ಸುಗಳಿದ್ದರೂ ಶುಕ್ರವಾರ ಮತ್ತು ಮದುವೆ ಟ್ರಿಪ್ ಇದ್ದರೆ ಅವರೂ ಬರುವುದಿಲ್ಲ. ಬಂದರೂ ಸರಕಾರಿ ಬಸ್ಸಿನ ಎದುರಿನಿಂದ ಹೋಗುತ್ತಾರೆ ಎಂದರು.
ಮಡಂತ್ಯಾರು ಉಪ್ಪಿನಂಗಡಿ ಬಸ್ಸು ಸಮಸ್ಯೆ ಬಗ್ಗೆ ತಾ.ಪಂ ಸದಸ್ಯೆ ವಸಂತಿ, ಬಂದಾರು-ಕುಪ್ಪೆಟ್ಟಿ ಬಸ್ಸು ಸಮಸ್ಯೆ ಬಗ್ಗೆ ತಾಪಂ ಸದಸ್ಯೆ ಅಮಿತಾ, ಬೈಪಾಡಿ-ಬಂದಾರು-ಕುಪ್ಪೆಟ್ಟಿ ಬಸ್ಸು ಬಗ್ಗೆ ತಾಪಂ ಸದಸ್ಯ ಲಕ್ಷ್ಮೀನಾರಾಯಣ , ಕಕ್ಕೆಪದವು- ಮಡಂತ್ಯಾರು ಬಸ್ಸು ಬಗ್ಗೆ ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ, ಕಿಲ್ಲೂರು- ಕೊಲ್ಲಿ ರಸ್ತೆ ಬಗ್ಗೆ ತೀಕ್ಷಿತ್, ನಾರಾವಿ ಗುರುವಾಯ ನಕೆರೆ ಬಸ್ಸು ಬೇಡಿಕೆ ಬಗ್ಗೆ ತಾ.ಪಂ ಸದಸ್ಯ ಸುಧೀರ್ ಆರ್ ಸುವರ್ಣ, ಧರ್ಮಸ್ಥಳ- ಸತ್ಯನಪಲ್ಕೆ-ಮುಂಡಾಜೆ ಬಸ್ಸು ಬೇಡಿಕೆ ಬಗ್ಗೆ ಕಲ್ಮಂಜ ಗ್ರಾ.ಪಂ ಉಪಾಧ್ಯಕ್ಷ ದಿನೇಶ್ ಗೌಡ, ಆರ್‌ಟಿಒ ಕಚೇರಿಯಲ್ಲಿ ಬ್ರೋಕರ್‌ಗಳ ಹಾವಳಿ ಬಗ್ಗೆ ಮಾಜಿ ಸೈನಿಕ ಸುರೇಶ್ ಭಟ್, ಮೊದಲಾದವರು ದೂರು -ಅಹವಾಲುಗಳನ್ನು ಮಂಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.