ಧರ್ಮಸ್ಥಳ : ಸರ್ವಧರ್ಮ ಸಮ್ಮೇಳನದ 86ನೇ ಅಧಿವೇಶನ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ : ನಾವು ಯಾವಾಗಲೂ ಪರಿಶುದ್ಧ ಮನಸ್ಸಿನಿಂದ ದಾನ ಮಾಡಬೇಕು. ಜೀವನದಲ್ಲಿ ದೇವರ ಅನುಗ್ರಹದಿಂದ ನಾವು ಸಂಪಾದಿಸಿದ ಸಂಪತ್ತನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಇತರರಿಗೆ ದಾನ ಮಾಡಿದಾಗ ಜೀವನದಲ್ಲಿ ಮೋಕ್ಷವನ್ನು ಪಡೆಯಲು ಸಾಧ್ಯ ಎಂದು ದ್ವಾರಕ ಸೂರ್ಯಪೀಠ ಗುಜರಾತ್‌ನ ಪೂಜ್ಯ ಜಗದ್ಗುರು ಸೂರ್ಯಾಚಾರ್ಯ ಶ್ರೀ ಕೃಷ್ಣ ದೇವ ನಂದಗಿರಿ ಮಹಾರಾಜ್ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದ ಅಂಗವಾಗಿ ಡಿ.5 ರಂದು ನಡೆದ ಸರ್ವಧರ್ಮ ಸಮ್ಮೇಳನದ 86 ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯರಾಗಿ ನಾವು ಪ್ರೀತಿ ವಿಶ್ವಾಸದಿಂದ ಇತರರ ಸೇವೆ ಮಾಡಬೇಕು. ಮಾತಾ ಪಿತರನ್ನು ಗೌರವಿಸುವುದು, ಭೂಮಾತೆಯ ಸೇವೆ, ಗೋಮಾತೆಯ ಸೇವೆ ನಮ್ಮ ನಿತ್ಯ ಬದುಕಾಗಬೇಕು. ಈ ರೀತಿಯ
ಪಂಚತತ್ವಗಳನ್ನು ಪಾಲಿಸಿದಾಗ ಸ್ವರ್ಗ ಸುಖವನ್ನು ಅನುಭವಿಸಬಹುದು. ದಾನ ಪರಂಪರೆ, ಸ್ವಚ್ಛತಾ ಅಭಿಯಾನ ಹೆಗ್ಗಡೆಯವರ ಹೃದಯ ವೈಶಾಲ್ಯತೆಗೆ ಅಭಿನಂದನೆ ಸಲ್ಲಿಸಿ, ಧರ್ಮಸ್ಥಳ ತನಗೆ ಸ್ವರ್ಗದ ಅನುಭವ ನೀಡಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ, ಆಧ್ಯಾತ್ಮ ಮಾರ್ಗದರ್ಶಕ ಬೆಂಗಳೂರಿನ ಎಂ.ಮಮ್ತಾಜ್ ಅಲಿ ಅವರು ವಹಿಸಿ ಜೈನಧರ್ಮದ ಅನೇಕಾಂತವಾದದಿಂದ ಎಲ್ಲಾ ಸಮಸ್ಯೆಗಳಿಗೆ ಸುಲಭದಲ್ಲಿ ಪರಿಹಾರವನ್ನು ಪಡೆಯಬಹುದು. ಮನಸ್ಸು ವಿಕಸಿತವಾದಾಗ ವಿನಯ, ಸೌಜನ್ಯ ಮೂಡಿಬರುತ್ತದೆ ಎಂದರು.
ಧರ್ಮೋಪನ್ಯಾಸ: ಧರ್ಮಸಭೆಯಲ್ಲಿ ಮಂಗಳೂರಿನ ಮಾಜಿ ಶಾಸಕ ಜೆ. ಆರ್ ಲೋಬೋ ರವರು, ಧರ್ಮಗಳಲ್ಲಿ ಸಮನ್ವಯತೆ ಎಂಬ ವಿಷಯದಲ್ಲಿ ಹಾಗೂ ಕನ್ನಡ ಕಬೀರರು ಸೂಫಿ ಸಂತ ಮಹಾಲಿಂಗ ಪುರದ ಪದ್ಮಶ್ರೀ ಇಬ್ರಾಹಿಂ ಸುತಾರ ಸೂಫಿ ಸಿದ್ಧಾಂತ ಹಾಗೂ ಭಾವೈಕ್ಯತೆ ಎಂಬ ವಿಷಯದಲ್ಲಿ ಮತ್ತು ಖ್ಯಾತ ನೃತ್ಯ ಹಾಗೂ ಚಲನಚಿತ್ರ ಕಲಾವಿದ ಬೆಂಗಳೂರಿನ ಶ್ರೀಧರ್ ಅವರು ಜೈನ ಧರ್ಮದಲ್ಲಿ ಸಮನ್ವಯ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಶ್ರೀ ಧ. ಮಂ. ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷ ಪ್ರೊ. ಎಸ್ ಪ್ರಭಾಕರ್, ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಸರ್ವಧರ್ಮ ವಿಶ್ವಶಾಂತಿ ಪ್ರಾರ್ಥನಾ ಧ್ವನಿ ಸುರುಳಿಯನ್ನು ಡಾ| ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಧಾರ್ಮಿಕ ಉಪನ್ಯಾಸಕರಾಗಿದ್ದ ವಿದ್ವಾಂಸರಿಗೆ ಡಿ.ಸುರೇಂದ್ರ ಕುಮಾರ್ ಸನ್ಮಾನ ನೆರವೇರಿಸಿದರು.ಸ್ವಾಗತ ಸಮಿತಿ ಕಾರ್ಯದರ್ಶಿ ಡಾ| ಯಶೋವರ್ಮ ಮತ್ತು ಉಪನ್ಯಾಸಕ ಸುನೀಲ್ ಪಂಡಿತ್ ಅಧ್ಯಕ್ಷರು ಮತ್ತು ಉದ್ಘಾಟಕರು ಸನ್ಮಾನಪತ್ರ ವಾಚಿಸಿದರು. ಉಪನ್ಯಾಸಕರಾದ ಡಾ. ಬಿ.ಪಿ ಸಂಪತ್ ಕುಮಾರ್ ಮತ್ತು ಡಾ. ಬಿ.ಎ ಕುಮಾರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ ರಾಮನ್ ಮ್ಯಾಗ್ನೇಸೆ ಪ್ರಶಸ್ತಿ ಪುರಸ್ಕೃತ ಟಿ.ಎಂ. ಕೃಷ್ಣ ಚೆನೈ ಇವರಿಂದ ಕರ್ನಾಟಕ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.