HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿ ಲಯನ್ಸ್ ಕ್ಲಬ್‌ನಲ್ಲಿ “ಈದ್ ಮೀಲಾದ್ ಸಂಭ್ರಮ”

ಬೆಳ್ತಂಗಡಿ: ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ಇದೇ ಮೊದಲ ಬಾರಿಗೆ ಎಲ್ಲಾ ಧರ್ಮೀಯರ ಹಬ್ಬಗಳನ್ನು ಆಚರಿಸುವ ತೀರ್ಮಾನದಂತೆ ಇತ್ತೀಚೆಗೆ ದೀಪಾವಳಿ ಆಚರಣೆ ನಡೆದಿದ್ದು ಇದೀಗ ನ. 30 ರಂದು ಈದ್ ಮೀಲಾದ್ ಸಂಭ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷೆ ಲ. ಮೇದಿನಿ ಡಿ ಗೌಡ ವಹಿಸಿದ್ದರು.
ಮೀಲಾದ್ ಬಗ್ಗೆ ಸಂದೇಶವನ್ನು ಲ. ಅಶ್ರಫ್ ಆಲಿಕುಂಞಿ ನೀಡಿದರು. ಕಾರ್ಯಕ್ರಮ ಸಂಯೋಜಕ ಲ. ದೇವಿಪ್ರಸಾದ್, ವಲಯಾಧ್ಯಕ್ಷ ಲ. ಧರಣೇಂದ್ರ ಕೆ ಜೈನ್, ಕೋಶಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.
ಮೀಲಾದ್ ಕಾರ್ಯಕ್ರಮದ ಮನೋರಂಜನಾ ಚಟುವಟಿಕೆಯಾಗಿ ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.  ಲಯನ್ಸ್‌ಗಳಾದ ಧರಣೇಂದ್ರ ಕೆ ಜೈನ್, ಮೇದಿನಿ ಡಿ ಗೌಡ, ಸುಶೀಲಾ ಎಸ್ ಹೆಗ್ಡೆ, ನಿತ್ಯಾನಂದ ನಾವರ, ಸುರೇಶ್ ಶೆಟ್ಟಿ ಲಾಯಿಲ, ಅಶೋಕ್ ಕುಮಾರ್ ಬಿ.ಪಿ, ವಸಂತ ಶೆಟ್ಟಿ, ಪಂಚಾಕ್ಷರಪ್ಪ, ರಾಜೀವ ಗೌಡ, ಶ್ರೀನಾಥ್ ಮತ್ತು ಮಂಜುನಾಥ್ ಇವರು ಭಾಗವಹಿಸಿ ಮನೋರಂಜನೆಯ ಜೊತೆಗೆ ಸಂದೇಶ ನೀಡಿದರು. ಬಳಿಕ ಮೀಲಾದ್ ಸಹಭೊಜನ ಏರ್ಪಡಿಲಾಗಿತ್ತು. ಬಹುಮಾನ ಪ್ರಾಯೋಜಕರಾಗಿದ್ದ ಸುರೇಶ್ ಶೆಟ್ಟಿ, ಆತಿಥ್ಯದ ಪ್ರಾಯೋಜಕರಾಗಿದ್ದ ದೇವಿಪ್ರಸಾದ್ ಮತ್ತು ಅಶ್ರಫ್ ಆಲಿಕುಂಞಿ ಇವರುಗಳನ್ನು ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಮುಂದಿನ ತಿಂಗಳಲ್ಲಿ ಕ್ರಿಸ್ಮಸ್ ಮತ್ತು ಹೊಸವರ್ಷವನ್ನು ಆಚರಿಸುವ ಬಗ್ಗೆಯೂ ತೀರ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.