ಲಾಯಿಲ: ವಿದ್ಯುತ್ ಅವಘಡ; ಕಾರ್ಮಿಕ ಬಲಿ

ಲಾಯಿಲ: ಇಲ್ಲಿಯ ಕನ್ನಾಜೆ ನಿವಾಸಿ ಯೋಗೀಶ್ ಸಫಲ್ಯ ರವರು ವಿದ್ಯುತ್ ಅವಘಡ ಸಂಭವಿಸಿ ಮೃತಪಟ್ಟ ಘಟನೆ ಇಂದು( ಡಿ.1) ನಡೆದಿದೆ. ಯೋಗೀಶ್ ರವರು ಕೂಲಿ ಕಾರ್ಮಿಕರಾಗಿದ್ದು, ಇಂದು ಲಾಯಿಲ ಸಮೀಪದ ಓಡದಕರಿಯ ದೇವಸ್ಥಾನದ ಬಳಿಯ ತೋಟದಲ್ಲಿ ಮರದಿಂದ ಅಡಿಕೆ ಕೀಳುತ್ತಿದ್ದ ಸಂದರ್ಭದಲ್ಲಿ, ತೋಟದ ಒಳಗಿನಿಂದ ಹಾದುಹೋದ ಎಕ್ಸ್ ಪ್ರೆಸ್ ವಿದ್ಯುತ್ ಲೈನ್ ಗೆ ಅಡಿಕೆ ಕೀಳುವ ಕತ್ತಿ ತಾಗಿದ ಕಾರಣ ವಿದ್ಯುತ್ ಸ್ಪರ್ಶಗೊಂಡು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಯೋಗೀಶ್ ರವರು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಇವರಿಗೆ ಫೆ.22 ರಂದು ಮದುವೆ ನಿಶ್ಚಯವಾಗಿತ್ತು. ಮೃತರು ತಾಯಿ ಸುಶೀಲಾ, 3 ಮಂದಿ ಸಹೋದರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.