ದೇವಾಂಗ ಸಮಾಜ ಉಜಿರೆ ಘಟಕ ಉದ್ಘಾಟನೆ

ಉಜಿರೆ: ದೇವಾಂಗ ಸಮಾಜ ಉಜಿರೆ ವಲಯದ ಮಾರ್ಗದರ್ಶನದಲ್ಲಿ ನೂತನ ಉಜಿರೆ(ಪೂರ್ವ)ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ  ಆಯ್ಕೆ ಕಾರ್ಯಕ್ರಮವು ಉಜಿರೆ ವಲಯಾಧ್ಯಕ್ಷ ಪರಮೇಶ್ವರ ಓಡಲರವರ ಅಧ್ಯಕ್ಷತೆಯಲ್ಲಿ ಉಜಿರೆ ವಿನಾಯಕನಗರದ ಅಕ್ಷರ ಕರಾವಳಿ ಕಟ್ಟಡದಲ್ಲಿ ಇತ್ತೀಚೆಗೆ ನಡೆಯಿತು.

ವಲಯದ ಗೌರವಾಧ್ಯಕ್ಷ ಸಂಜೀವ ಬಿ. ಬಡ್ಡಮೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ದೇವಾಂಗ ಸಮಾಜದಲ್ಲಿ ನಾವೆಲ್ಲ ತೊಡಗಿಸಿಕೊಂಡು, ನಾವೆಲ್ಲರೂ ಒಂದೇ ಭಾವನೆಯಿಂದ ಒಗ್ಗೂಡಬೇಕೆಂದು ಸಂಘಕ್ಕೆ ಶುಭ ಹಾರೈಸಿದರು. ವಲಯ ಸಂಘಟನಾ ಕಾರ್ಯದರ್ಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಜಿರೆ ಘಟಕ(ಪೂರ್ವ)ದ ನೂತನ ಅಧ್ಯಕ್ಷರಾಗಿ ಎಂ.ಲೋಕಯ್ಯ ನೇಕಾರ, ಉಪಾಧ್ಯಕ್ಷರಾಗಿ ಕೇಶವ.ಕೆ, ಕಾರ್ಯದರ್ಶಿಯಾಗಿ ಗುರುಪ್ರಸಾದ್, ಜೊತೆಕಾರ್ಯದರ್ಶಿಯಾಗಿ,  ವಿಶಾಲಾಕ್ಷಿ ಗಣೇಶ್, ಕೋಶಾಧಿಕಾರಿಯಾಗಿ ಭಗೀರಥ. ಓಡಲ, ಸಂಘಟನಾ ಕಾರ್ಯದರ್ಶಿಯಾಗಿ  ಸದಾಶಿವ ನೇಕಾರ, ಗೌರವ ಸಲಹೆಗಾರರಾಗಿ  ಚಂದ್ರಶೇಖರ,  ಆನಂದ ಅತ್ತಾಜೆ,  ರಾಮಚಂದ್ರ ನೇಕಾರ.ಕೆ ರವರನ್ನು ಸರ್ವಾನುಮತದಿಂದ ಅಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ವಲಯದ ಗೌರವ ಸಲಹೆಗಾರರಾದ ಎಂ.ಡಿ. ಭಾಸ್ಕರ, ವಲಯ ಉಪಾಧ್ಯಕ್ಷ  ರಾಜಗೋಪಾಲ ಮುಂಡಾಜೆ, ಕೃಷ್ಣಪ್ಪ.ಬಿ.ಬಡ್ಡಮೆ,  ರಾಜಪ್ಪ ನೇಕಾರ ಉಜಿರೆ, ವಲಯ ಕಾರ್ಯದರ್ಶಿ ರವಿಚಂದ್ರ ಮುಂಡಾಜೆ, ವಲಯ ಜೊತೆಕಾರ್ಯದರ್ಶಿ ಪ್ರಮೋದ, ವಲಯಕೋಶಾಧಿಕಾರಿ ವಸಂತ ಕಾಶಿಬೆಟ್ಟು ಉಪಸ್ಥಿತರಿದ್ದರು. ಕು| ಅಂಬಿಕಾ ಪ್ರಾರ್ಥಿಸಿ, ಪ್ರಮೋದ್ ಸ್ವಾಗತಿಸಿ,  ರವಿಚಂದ್ರ ನೆಯ್ಯಾಲು ಕಾರ್ಯಕ್ರಮ ನಿರೂಪಿಸಿ,   ಭಗೀರಥ ಕಿರಿಯಾಡಿ ವಂದಿಸಿದರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.