ಗುರಿಪಳ್ಳ: ಮೃತದೇಹದ ಗುರುತು ಪತ್ತೆ: ಮೃತ ಎಲ್‌ಎಲ್‌ಬಿ ವಿದ್ಯಾರ್ಥಿ ಮಂಜೇಶ್ ಎಸ್.

ಉಜಿರೆ: ಇತ್ತೀಚೆಗೆ ಗುರಿಪಳ್ಳ ಕ್ರಾಸ್ ಅಳಕೆ ರಸ್ತೆಯಲ್ಲಿ ನ.11 ರಂದು ಮುಖಕ್ಕೆ ಪ್ಲಾಸ್ಟಿಕ್ ಟೇಪ್ ಸುತ್ತಿದ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಯುವಕನ ಮೃತದೇಹ ಗುರುತು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಅತ್ತಿಹಳ್ಳಿ ನಿವಾಸಿ ಮಂಜೇಶ್.ಎಸ್(25.ವ) ಎಂದು ಗುರುತಿಸಲಾಗಿದೆ.
ಮಂಜೇಶ್ ಎಸ್. ರವರು ವಿಪುರಂ ಕಾಲೇಜಿನಲ್ಲಿ ಕಾನೂನು(ಎಲ್‌ಎಲ್‌ಬಿ)ಪದವಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು. ಇವರು ಎ.ಪಿ ಸ್ವಾಮಿ ಮತ್ತು ಲಲಿತಮ್ಮ ದಂಪತಿಯ ಪ್ರಥಮ ಪುತ್ರ. ಇವರ ತಂಗಿಯನ್ನು ವಿವಾಹ ಮಾಡಿಕೊಡಲಾಗಿದೆ.
ಕೆಲದಿನಗಳಿಂದ ಮಂಜೇಶ್ ಎಸ್ ರವರು ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಕನಕಪುರ ತಾಲೂಕಿನ ಅವರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇದೀಗ ಬೆಳ್ತಂಗಡಿ ಪೊಲೀಸ್ ಠಾಣೆಯ ಮೂಲಕ ಮತ್ತು ವಾಟ್ಸ್ ಆಪ್ ಮೂಲಕ ಬಂದಂತಹ ಫೋಟೋ ಆಧಾರದಲ್ಲಿ ಮೃತರ ತಂದೆ ತಾಯಿ ಸಹೋದರ ಹಾಗೂ ಸಂಬಂಧಿಕರು ಬೆಳ್ತಂಗಡಿಗೆ ಆಗಮಿಸಿದ್ದು, ಮೃತದೇಹದ ಗುರುತನ್ನು ಧೃಢಪಡಿಸಿದ್ದಾರೆ.
ಇದೀಗ ಅವರು ಮಂಗಳೂರಿನ ಶವಾಗಾರದಲ್ಲಿ ಸಂರಕ್ಷಿಸಿ ಇಡಲಾಗಿದ್ದ ಮೃತದೇಹವನ್ನು ವೀಕ್ಷಿಸಿದ್ದು, ಮೃತ ವ್ಯಕ್ತಿ ಮಂಜೇಶ್‌ಎಸ್. ಎಂದು ಅವರು ಖಚಿತಪಡಿಸಿದ್ದಾರೆ. ಆ ಹಿನ್ನಲೆಯಲ್ಲಿ ನ.30 ರಂದು ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಯವರ ನೇತೃತ್ವದಲ್ಲಿ ಮೃತರ ಕುಟುಂಬದವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಮಂಗಳೂರಿನಲ್ಲಿ ನಡೆದಿದೆ. ಈ ಘಟನೆ ಯಾವ ಹಿನ್ನಲೆಯಲ್ಲಿ ನಡೆದಿದೆ ಹಾಗೂ ಯಾರು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ತನಿಖೆಯ ಮೂಲಕ ಗೊತ್ತಾಗಬೇಕಿದೆ. ಕೆಲವೊಂದು ವ್ಯಕ್ತಿಗಳ ಬಗ್ಗೆ ಮೃತರ ಮನೆಯವರು ಸಂದೇಹಗಳನ್ನು ವ್ಯಕ್ತಪಡಿಸಿದ್ದು, ತನಿಖೆಗೆ ಹೊಸ ತಿರುವು ಪಡೆದುಕೊಂಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.