ಪುಂಜಾಲಕಟ್ಟೆ ಪ್ರೌಢ ಹಾಗೂ ಪದವಿಪೂರ್ವ ಕಾಲೇಜು: ವಾರ್ಷಿಕ ಪ್ರತಿಭಾ ಪುರಸ್ಕಾರ

ಪುಂಜಾಲಕಟ್ಟೆ: ಸರಕಾರಿ ಪದವಿ ಪೂರ್ವ ಕಾಲೇಜು ಪುಂಜಾಲಕಟ್ಟೆಯ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿಭಾಗದ 2018-19ರ ಸಾಲಿನ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನ.29 ರಂದು ಜರುಗಿತು.

ಶಾಸಕ ಹರೀಶ್ ಪೂಂಜ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೋರ್ವ ವಿದ್ಯಾರ್ಥಿಯಲ್ಲಿಯೂ ಕೂಡಾ ಸುಪ್ತ ಪ್ರತಿಭೆಗಳು ಅಡಕವಾಗಿರುತ್ತವೆ.  ಆದರೆ ಆ ಪ್ರತಿಭೆ ಅಥವಾ ನಾಯಕತ್ವದ ಗುಣ ಪ್ರಜ್ವಲಿಸಬೇಕಾದರೆ ಶಿಕ್ಷಕರ ಜವಾಬ್ದಾರಿ ಅತೀ ಹೆಚ್ಚಿನದ್ದಾಗಿದೆ.  ವಿದ್ಯಾರ್ಥಿಗಳು ಅಂತಹ ಮಟ್ಟಕ್ಕೆ ಏರಬೇಕಾದರೆ ಮೊತ್ತ ಮೊದಲು ಕನಸಿನ ಮೌಲ್ಯಾಧಾರಿತ ಶಾಲೆಯು ನನ್ನದು ಎನ್ನುವ ಭಾವನೆ ಹುಟ್ಟಿ ಬರಬೇಕು. ತಾವು ಎಲ್ಲೇ ಹೋದರೂ ಯಾವ ಮಟ್ಟಕ್ಕೆ ಏರಿದರೂ ಸಂಸ್ಥೆಯನ್ನು ಮರೆಯಬೇಡಿ.  ಮುಂದಿನ ಐದು ರ್ಷಗಳಲ್ಲಿ ಶಿಕ್ಷಣ ಇಲಾಖೆಯಲ್ಲಿ ಆಗಬೇಕಾದ ಪ್ರಗತಿ ಚಿಂತನೆಗಾಗಿ ಈಗಾಗಲೇ ನೀಲಿ ನಕಾಶೆಯನ್ನು ಸಿದ್ಧಪಡಿಸಲು ಇಲಾಖಾ ಮುಖ್ಯಸ್ಥರಿಗೆ ಸೂಚನೆಯನ್ನು ನೀಡಿದ್ದು, ಆ ವರದಿಯಂತೆ ಮುಂದಿನ ಕಾರ್ಯ ಸೂಚಿಯನ್ನು ಸಿದ್ಧಪಡಿಸಲಿದ್ದೇನೆ ಎಂದು ನುಡಿದರು.   ಸಮಾರಂಭದ ಅಧ್ಯಕ್ಷತೆಯನ್ನು ಮಡಂತ್ಯಾರು ಗ್ರಾ.ಪಂ ಅಧ್ಯಕ್ಷರಾದ ಗೋಪಾಲಕೃಷ್ಣ ಕೆ ವಹಿಸಿದ್ದರು.

ವೇದಿಕೆಯಲ್ಲಿ ಕುವೆಟ್ಟು ಜಿ.ಪಂ ಕ್ಷೇತ್ರದ ಸದಸ್ಯೆ ಮಮತಾ ಎಂ. ಶೆಟ್ಟಿ, ಮಡಂತ್ಯಾರು ಕ್ಷೇತ್ರದ ತಾ.ಪಂ ಸದಸ್ಯೆ  ವಸಂತಿ ಲಕ್ಷ್ಮಣ್, ಮಾಲಾಡಿ ತಾ.ಪಂ ಸದಸ್ಯ  ಜೋಯೆಲ್ ಮೆಂಡೋನ್ಸಾ, ಮಡಂತ್ಯಾರು ಗ್ರಾ.ಪಂ ಸದಸ್ಯರಾದ ನಳಿನಿ ಹೆಗ್ಡೆ, ಮೈಮುನಾ ಹಾಗೂ ಮಡಂತ್ಯಾರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ, ಶಿಕ್ಷಣ ಇಲಾಖಾ ಪ್ರತಿನಿಧಿಯಾಗಿ ಪುಂಜಾಲಕಟ್ಟೆ ಸಮೂಹ ಸಂಪನ್ಮೂಲ ವ್ಯಕ್ತಿ ರಘುಪತಿ ಕೆ. ರಾವ್ ಮತ್ತು ಸಂಸ್ಥೆಯ ಪ್ರಾಂಶುಪಾಲ ಮಮತಾ ಎ ಹಾಗೂ ಉಪಪ್ರಾಂಶುಪಾಲ ಅರ್ಚನಾ ಸಿ.ಪಿ ಮತ್ತು ಕಾಲೇಜು ವಿದ್ಯಾರ್ಥಿ ನಾಯಕ ಉಮರುಲ್ ಕತಾದ್, ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಪವನ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ,  ಕಾಲೇಜು ಉಪನ್ಯಾಸಕ  ಆನಂದ ಡಿ ಸ್ವಾಗತಿಸಿ, ಸಹಶಿಕ್ಷಕ ಹರಿಪ್ರಸಾದ್ ಆರ್ ನಿರೂಪಿಸಿ, ಸಹಶಿಕ್ಷಕ ಧರಣೇಂದ್ರ ಕೆ.  ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.