ಧರ್ಮಸ್ಥಳ: ವಿದ್ಯಾರ್ಥಿಗಳ ವ್ಯವಹಾರ ಮೇಳ

ಧರ್ಮಸ್ಥಳ:- ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಧರ್ಮಸ್ಥಳದಲ್ಲಿ ವಿದ್ಯಾರ್ಥಿಗಳ  ವ್ಯವಹಾರ ಮೇಳ  ಎಂಬ ವಿಶೇಷ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಮುಖ್ಯ ಅತಿಥಿಗಳಾಗಿ ಉಜಿರೆಯ ಗೇರುಕಟ್ಟೆ ಅಂಗಡಿ ಎಂದೇ ಪ್ರಸಿದ್ಧವಾದ ‘ಸಂಧ್ಯಾ ಟ್ರೇಡರ್ಸ್’ ನ ಮಾಲಕ ರಾಜೇಶ್ ಪೈಯವರು   ವ್ಯವಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಜೀವನದ ದೈನಂದಿನ ಚಟುವಟಿಕೆಗಳಿಗೆ ಪೂರಕವಾದ ಈ ವ್ಯವಹಾರ ಮೇಳವು ಮಕ್ಕಳಲ್ಲಿ ಕೊಡು ಕೊಳ್ಳುವಿಕೆಯ ವಸ್ತುವಿನ ಗುಣಮಟ್ಟದ ತಿಳುವಳಿಕೆಗೆ ಸಹಕಾರಿ ಎಂದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಹಸಿ ಸೊಪ್ಪು -ತರಕಾರಿಗಳು, ತಿಂಡಿ ತಿನಿಸುಗಳು, ಎಳನೀರು, ವೀಳ್ಯದೆಲೆ, ತೆಂಗಿನಕಾಯಿ, ಜ್ಯೂಸ್,ಐಸ್ ಕ್ರೀಂ , ಅಮಟೆಕಾಯಿ ವಿವಿಧ ಮಾದರಿಯ ವಸ್ತುಗಳ ಕ್ರಯ ವಿಕ್ರಯವು ಸುಮಾರು ಮದ್ಯಾಹ್ನ 12 ಗಂಟೆಯವರೆಗೆ ಭರದಿಂದ ಸಾಗಿತ್ತು. ವಿದ್ಯಾರ್ಥಿಗಳೊಂದಿಗೆ ಹೆತ್ತವರು, ,ಊರ ಜನರು  ಹಾಗೂ ಶಾಲಾ ಶಿಕ್ಷಕ ವೃಂದದವರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ, ಮಕ್ಕಳಿಗೆ ಲಾಭ-ನಷ್ಟ ಚೌಕಾಸಿ ಇತ್ಯಾದಿ ವ್ಯಾಪಾರದ ವಿವಿಧ ಮುಖಗಳನ್ನು ಪರಿಚಯಿಸಿಕೊಟ್ಟು ಪ್ರಾಯೋಗಿಕ ಜ್ಞಾನಾರ್ಜನೆಗೆ ನೆರವಾದರು.

ಶಾಲಾ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯರಾವ್ ಪಡ್ವೆಟ್ನಾಯರವರು ಮಾತನಾಡಿ, ಪ್ರತಿ ಮಗುವಿಗೂ ದಿನನಿತ್ಯದ ಬದುಕಿಗೆ ಪೂರಕವಾದ ಶಿಕ್ಷಣ ದೊರೆಯಬೇಕು ಎಂಬುದು ಪೂಜ್ಯರ ಆಶಯ .ಆ ನಿಟ್ಟಿನಲ್ಲಿ ಈ ವ್ಯವಹಾರ ಮೇಳವು ಅಗತ್ಯ ಎಂದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಮನೋರಮಾ ಸ್ವಾಗತಿಸಿ, ವಿದ್ಯಾ ಸರಸ್ವತಿ ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮಣ ಗೌಡ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.