ಎಸ್.ಡಿ.ಎಂ ಬಿ.ಎಡ್ ಕಾಲೇಜಿನಲ್ಲಿ ನೂತನ ಪ್ರಥಮ ಬಿ.ಎಡ್ ತರಗತಿ ಪ್ರಾರಂಭೋತ್ಸವ

ಉಜಿರೆ: ಇಲ್ಲಿಯ ಎಸ್.ಡಿ.ಎಂ ಬಿ.ಎಡ್ ಕಾಲೇಜಿನಲ್ಲಿ 2018-19ನೇ ಶೈಕ್ಷಣಿಕ ಸಾಲಿನ ಬಿ.ಎಡ್. ಕೋರ್ಸ್‌ನ ತರಗತಿ ನ.27 ರಂದು ಆರಂಭಗೊಂಡಿತು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ  ಶಶಿಧರಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಉಜಿರೆ ಒಂದು ಸಣ್ಣ ಗ್ರಾಮವಾದರೂ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಇಲ್ಲಿ ವಿಶ್ವವಿದ್ಯಾಲಯದಲ್ಲಿ ಕಲಿಯುವಂತಹ ವಾತವರಣ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುವ ಕಾರ್ಯವಾಗುತ್ತಿದೆ. ದೇಶವನ್ನು ಕಟ್ಟುವಂತಹ ಬದ್ಧತೆಯ ಶಿಕ್ಷಕರನ್ನು ರೂಪಿಸುವುದೇ ನಮ್ಮ ಸಂಸ್ಥೆಯ ಧ್ಯೇಯ ಎಂದು ತಿಳಿಸಿ ಬಿ.ಎಡ್. ನ ನೂತನ ತರಗತಿಯ ವಿದ್ಯಾರ್ಥಿ ಶಿಕ್ಷಕರಿಗೆ ಶುಭ ಹಾರೈಸಿದರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ  ಸೋಮಶೇಖರ ಶೆಟ್ಟಿ ಮಾತನಾಡಿ ಬಿ.ಎಡ್. ವಿದ್ಯಾರ್ಥಿಗಳೆಂದರೆ ಕೇವಲ ವಿದ್ಯಾರ್ಥಿಗಳಲ್ಲ. ಕಲಿಯುವ ಶಿಕ್ಷಕರು. ತಾನೊಬ್ಬ ಶ್ರೇಷ್ಠ ಶಿಕ್ಷಕನಾಗಬೇಕೆಂಬ ಹಂಬಲ ಸದಾ ಇರಬೇಕು. ಅದಕ್ಕೆ ಸಂಪೂರ್ಣವಾದ ಬೆಂಬಲ ಇಲ್ಲಿದೆ ಎಂದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶ್ರೀ ಗಣೇಶ್ ಭಟ್ ಮಾತನಾಡಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅಂತಹ ಶಿಕ್ಷಕರಾಗಲು ಬಿ.ಎಡ್. ಮಾಡಲು ಹೊರಟ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ನಿತ್ಯಾನಂದ. ಕೆ ಅವರು ಬಿ.ಎಡ್. ಕೋರ್ಸ್‌ನಲ್ಲಿ ಕೇವಲ ಶಿಕ್ಷಣ ಪಡೆಯುವುದಲ್ಲ. ಶಿಕ್ಷಕರಾಗುವವರ ವ್ಯಕ್ತಿತ್ವವನ್ನು ರೂಪಿಸುವ ನಿರಂತರ ತರಬೇತಿಯೊಂದಿಗೆ ಅರಿವಿನ ಕಡೆಗೆ ಕೊಂಡೊಯ್ಯವ ಕಾರ್ಯ ನಮ್ಮದು ಎಂದು ಸಂಸ್ಥೆಯ ಭೌತಿಕ ಹಾಗೂ ಶೈಕ್ಷಣಿಕ ಸೌಲಭ್ಯಗಳ ಪರಿಚಯದೊಂದಿಗೆ ಎರಡು ವರ್ಷದ ಬಿ.ಎಡ್ ಪಠ್ಯಕ್ರಮ ಹಾಗೂ ಉದ್ಯೋಗಾವಕಾಶಗಳ ಬಗೆಗೆ ವಿವರಿಸಿದರು. ವಿದ್ಯಾರ್ಥಿ ಶಿಕ್ಷಕಿ ರೇಷ್ಮಾ ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು. ಮರ್ಲಿನ್ ಪಿರೇರಾ ಸ್ವಾಗತಿಸಿ, ಲಿಂಶಾ ಜೋಸ್ ವಂದಿಸಿದರು. ಶ್ರೀಜಾ ಮತ್ತು ಮಹೇಶ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.