ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಸಭೆ

ನೂತನ ಅಧ್ಯಕ್ಷ ಪಿ. ಬಾಲಕೃಷ್ಣ ಪಂಜ ಸುಳ್ಯ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಸಭೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೇಂದ್ರ ಕಛೇರಿಯ ಜ್ಞಾನವಿಕಾಸ ಸಭಾಂಗಣದಲ್ಲಿ ನ.28 ರಂದು ನಡೆಯಿತು. ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು ಭಜನಾ ಪರಿಷತ್‌ನ 12 ತಾಲೂಕಿನ ನೂತನ ಪದಾಧಿಕಾರಿಗಳ  ವಿವರವನ್ನು ಘೋಷಿಸಿ,  ಭಜನಾ ಪರಿಷತ್‌ನ ಧ್ಯೇಯೋದ್ದೇಶಗಳ ಬಗ್ಗೆ ಮಾತನಾಡಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಗೌರವಾಧ್ಯಕ್ಷರಾಗಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರು, ಗೌರವ ಸಲಹೆಗಾರರಾಗಿ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ, ಮಾರ್ಗದರ್ಶಕರಾಗಿ  ಡಿ. ಹರ್ಷೇಂದ್ರಕುಮಾರ್, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರು ಗುರುದೇವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಹಾಗೂ  ಪ್ರಸ್ತುತ ನೂತನ ಅಧ್ಯಕ್ಷರಾಗಿ ಪಿ. ಬಾಲಕೃಷ್ಣ ಪಂಜ ಸುಳ್ಯ ತಾಲೂಕು, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಜಯರಾಮ ನೆಲ್ಲಿತ್ತಾಯ, ಉಪಾಧ್ಯಕ್ಷರಾಗಿ 12 ತಾಲೂಕಿನ ಭಜನಾ ಪರಿಷತ್ ಅಧ್ಯಕ್ಷರುಗಳು, ಸಹಕಾರ್ಯದರ್ಶಿಗಳಾಗಿಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್, ಶ್ರೀಮತಿ ಮಮತಾರಾವ್ ಹಾಗೂ 16 ಮಂದಿ ಭಜನಾ ಪರಿಷತ್‌ನ ಸದಸ್ಯರನ್ನು  ಮುಂದಿನ 2 ವರ್ಷಗಳ ಅವಧಿಗೆ ಘೋಷಣೆ ಮಾಡಲಾಯಿತು.
ದ.ಕ, ಉಡುಪಿ, ಕಾಸರಗೋಡು, ಶಿವಮೊಗ್ಗ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಪುತ್ತೂರು, ಸುಳ್ಯ, ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು, ಕುಂಬಳೆ, ಕಾಸರಗೋಡು, ತೀರ್ಥಹಳ್ಳಿ ಮುಂತಾದ 12 ತಾಲೂಕಿನಿಂದ ಭಜನಾ ಪರಿಷತ್ತಿನ ಅಧ್ಯಕ್ಷ, ಕಾರ್ಯದರ್ಶಿಗಳು  ಸಭೆಯಲ್ಲಿ ಉಪಸ್ಥಿತರಿದ್ದರು. ಧನ್ಯ ಕುಮಾರ್ ಜೈನ್ ಉಪ್ಪಿನಂಗಡಿ, ಮಂಜುನಾಥ ಬೆಳ್ತಂಗಡಿ, ಪುತ್ತೂರು ಸುಬ್ಬಯ್ಯ ರೈ, ಕೃಷ್ಣ ಗಾಣಿಗ ಕುಂದಾಪುರ, ಕಾಸರಗೋಡು ಜಯಾನಂದ ಕುಮಾರ್, ತೀರ್ಥಹಳ್ಳಿಯ ಮಂಜುನಾಥ ಮೃಗವಧೆ, ಭಜನಾಮಂಡಳಿಗಳ ಸ್ಥಿತಿಗತಿ ಹಾಗೂ ಭಜನಾ ಪರಿಷತ್ ನ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಭಜನಾ ಮಂಡಳಿಗಳ ಜವಾಬ್ಧಾರಿ ಹಾಗೂ ಮಾಡಬಹುದಾದ ಕಾರ್ಯಕ್ರಮಗಳ ಬಗ್ಗೆ ಸಹಕಾರ್ಯದರ್ಶಿ  ಸುಬ್ರಮಣ್ಯ ಪ್ರಸಾದ್ ಮಾಹಿತಿ ನೀಡಿದರು.  ಧರ್ಮಾಧಿಕಾರಿಗಳ ಆಪ್ತ ಕಾರ್ಯದರ್ಶಿ  ವೀರು ಶೆಟ್ಟಿ, ಮುತ್ಸದ್ಧಿ  ಭುಜಬಲಿ ಧರ್ಮಸ್ಥಳ,  ರತ್ನವರ್ಮ ಜೈನ್,  ದಿವಾಕರ್ ಭಟ್, ನಾಗೇಂದ್ರ ಅಡಿಗ, ಶ್ರೀಮತಿ ಭವಾನಿ ಉಪಸ್ಥಿತರಿದ್ದರು.
ತಾಲೂಕು ಭಜನಾ ಪರಿಷತ್‌ನ ರಚನೆ ಹಾಗೂ ಮುಂದಿನ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಕಾರ್ಯದರ್ಶಿ ಬಿ.ಜಯರಾಮ ನೆಲ್ಲಿತ್ತಾಯ ವಿವರಿಸಿದರು.  ಶ್ರೀಮತಿ ಸುಮಂಗಲಾ, ಶ್ರೀಮತಿ ಕವಿತಾರವರ ಪ್ರಾರ್ಥಿಸಿ,  ಬಿ.ಸೋಮಪ್ಪ ಪೂಜಾರಿಯವರು ಧನ್ಯವಾವಿತ್ತು,   ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.