ಗುಂಪಲಾಜೆ ಅಕ್ರಮ ಕಪ್ಪುಕಲ್ಲು ಗಣಿಗಾರಿಕೆಗೆ ದಾಳಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಬೆಳ್ತಂಗಡಿ ಪ.ಪಂ ವ್ಯಾಪ್ತಿಯ 11 ನೇ ವಾರ್ಡ್‌ನ ಗುಂಪಲಾಜೆಯ ಬಳಿ ಅಕ್ರಮ ಕಪ್ಪು ಕಲ್ಲು ಗಣಿಗಾರಿಕೆಗೆ ಬೆಳ್ತಂಗಡಿ ಕಂದಾಯ ಇಲಾಖೆ ಹಾಗೂ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು  ದಾಳಿ ನಡೆಸಿ, 2 ಲಾರಿ ಹಾಗೂ ಕಲ್ಲುಗಳನ್ನು ವಶಪಡಿಸಿಕೊಂಡ ಘಟನೆ ನ.28 ರಂದು ವರದಿಯಾಗಿದೆ.
ಘಟನೆಯ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಕಟ್ಟಡ ನಿರ್ಮಾಣಕ್ಕೂ ತಡೆ ನೀಡಲಾಗಿದೆ ಎಂದು ಬೆಳ್ತಂಗಡಿ ತಹಶೀಲ್ದಾರ್ ಮದನ್‌ಮೋಹನ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಓಡಿಲ್ನಾಳ ಗ್ರಾಮ ಕರಣಿಕರಾದ ರವಿ, ಬೆಳ್ತಂಗಡಿ ಗ್ರಾಮ ಕರಣಿಕರಾದ ಮಹೇಶ್, ಕಂದಾಯ ನಿರೀಕ್ಷಕ ರವಿ ಕುಮಾರ್, ಪ.ಪಂ 11ನೇ ವಾರ್ಡ್ ಸದಸ್ಯ ಜಯಾನಂದ ಗೌಡ, ಗ್ರಾಮ ಸಹಾಯಕ ಸತೀಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.