ವೇಣೂರು : ರೂ.14 ಲಕ್ಷ ವೆಚ್ಚದ ರುದ್ರಭೂಮಿ; ಡಿ.2ರಂದು ಲೋಕಾರ್ಪಣೆ

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಮನುಷ್ಯನ ಹುಟ್ಟು ಎಷ್ಟು ಸತ್ಯವೋ ಸಾವು ಕೂಡಾ ಅಷ್ಟೇ ಖಚಿತ. ಹಿಂದೂ ರುದ್ರಭೂಮಿ ಎನ್ನುವುದು ಎಲ್ಲಾ ಮಾನವರ ಕೊನೆಯ ಪ್ರಯಾಣವನ್ನು ಘನತೆಯ ರೀತಿಯಲ್ಲಿ ಪೂರ್ಣಗೊಳಿಸಲು ನೆರವಾಗುವ ಪುಣ್ಯಸ್ಥಳ. ಅಂತಹ ಯೋಜನೆ ಯೊಂದನ್ನು ವೇಣೂರು ಗ್ರಾ.ಪಂ. ಹಾಗೂ ಅನುಷ್ಠಾನ ಸಮಿತಿ ಹಿಂದೂ ರುದ್ರಭೂಮಿ ನಿರ್ಮಿಸುವ ಮೂಲಕ ಗ್ರಾಮಸ್ಥರ ಬೇಡಿಕೆಯನ್ನು ಸಕಾರಗೊಳಿಸಿದೆ.
ಮಿಯಲಾಜೆಯಲ್ಲಿ ನಿರ್ಮಾಣ: ಗ್ರಾಮಸ್ಥರ ಬಹುಕಾಲದ ಬೇಡಿಕೆಯಂತೆ ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಗ್ರಾಮದ ಮಿಯಲಾಜೆಯ 1 ಎಕ್ರೆ ಜಾಗದಲ್ಲಿ ಸುಸಜ್ಜಿತ ಹಿಂದೂ ರುದ್ರಭೂಮಿಯ ನಿರ್ಮಾಣ ಆಗಿದ್ದು, ಡಿ.2ರಂದು ಲೋಕಾರ್ಪಣೆಗೊಳ್ಳಲಿದೆ. 2014ರಲ್ಲಿ ವೇಣೂರು ಗ್ರಾ.ಪಂ.ನ ಅಧ್ಯಕ್ಷರಾಗಿದ್ದ ಸತೀಶ್ ಹೆಗ್ಡೆಯವರ ಅವಧಿಯಲ್ಲಿ ಅಂದಿನ ಶಾಸಕರಾಗಿದ್ದ ಕೆ. ವಸಂತ ಬಂಗೇರವರ ಅವಿರತ ಶ್ರಮದಲ್ಲಿ ಹಿಂದೂ ರುದ್ರಭೂಮಿಯ ನಿರ್ಮಾಣ ಕ್ಕಾಗಿ ಜಾಗವನ್ನು ಮಿಯಲಾಜೆಯಲ್ಲಿ ಕಾಯ್ದಿರಿಸಲಾಗಿತ್ತು. 2017 ರ ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿಯವರ ಹೊಸ ಆಡಳಿತದಲ್ಲಿ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಯಿತು. ಇದಕ್ಕಾಗಿಯೇ ಹಿಂದೂ ರುದ್ರಭೂಮಿ ಅನುಷ್ಠಾನ ಸಮಿತಿಯನ್ನು ರಚಿಸಲಾಗಿತ್ತು. ದಿ| ಪ್ರಕಾಶ್ ಹೆಗ್ಡೆಯವರ ತಂಡ ಬಹಳ ಮುತುವರ್ಜಿಯಿಂದ ಕಾರ್ಯ ನಿರ್ವಹಿತ್ತು. ಬಳಿಕದ ದಿನಗಳಲ್ಲಿ ವೇಣೂರಿನ ಉದ್ಯಮಿ ಕೆ. ಭಾಸ್ಕರ ಪೈಯವರ ಅಧ್ಯಕ್ಷತೆಯಲ್ಲಿ ಹೊಸ ಸಮಿತಿಯನ್ನು ರಚಿಸಲಾಯಿತು.
ಅನುದಾನ: ವೇಣೂರು ಗ್ರಾ.ಪಂ.ನಿಂದ ಉದ್ಯೋಗ ಖಾತರಿ ಸೇರಿದಂತೆ ರೂ. 9 ಲಕ್ಷದಷ್ಟು ಅನುದಾನ ವಿನಿಯೋಗಿಸಲಾಗಿದೆ. ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 2 ಲಕ್ಷ ಅನುದಾನ ದೊರೆತಿದೆ. ಉಳಿದಂತೆ ಊರ ಹಾಗೂ ಪರವೂರ ದಾನಿಗಳಿಂದ ಆರ್ಥಿಕ ಸಹಕಾರ ಲಭಿಸಿದೆ.
ವ್ಯವಸ್ಥೆ ಏನೇನಿದೆ?: ಶವ ದಹನ ಮತ್ತು ಸಿಲಿಕಾನ್ ಚೇಂಬರ್, ವೀಕ್ಷಕರ ಕೊಠಡಿ-ಆಸನ, ಶೌಚಾಲಯ, ಸ್ನಾನದ ಗೃಹ, ಗೋಡೌನ್, ನೀರಿನ ಟ್ಯಾಂಕ್, ನೆಲಕ್ಕೆ ಇಂಟರ್‌ಲಾಕ್, ಬೋರ್‌ವೆಲ್ ಮತ್ತು ಪಂಪ್ ದಾನಿಗಳ ಸಹಕಾರದಲ್ಲಿ ನಿರ್ಮಿಸಲಾಗಿದೆ. ರೂ.25 ಸಾವಿರ ವೆಚ್ಚದಲ್ಲಿ ವೇಣೂರು ಗ್ರಾ.ಪಂ.ನಿಂದ ಸೋಲಾರ್ ದೀಪಗಳನ್ನು ಅಳವಡಿಸ ಲಾಗಿದೆ. ಹಿಂದೂರುದ್ರ ಭೂಮಿಯಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಹಾಗೂ ವ್ಯವಸ್ಥಿತವಾಗಿ ನಿರ್ಮಿಸುವ ನಿಟ್ಟಿನಲ್ಲಿ ಧಾರ್ಮಿಕದತ್ತಿ ಇಲಾಖೆ, ಜಿ.ಪಂ., ತಾ.ಪಂ.ಗೂ ಮನವಿ ಮಾಡಲಾಗಿದ್ದು, ಅನುದಾನದ ನಿರೀಕ್ಷೆಯಲ್ಲಿದೆ.
ವಿಗ್ರಹದ ಕೊಡುಗೆ: ರುದ್ರಭೂಮಿಯಲ್ಲಿ ಬೃಹದಾಕಾರದ ಶಿವನ ವಿಗ್ರಹ ಹಾಗೂ ವೀರಬಾಹು (ಸತ್ಯಹರಿಶ್ಚಂದ್ರ) ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ವೇಣೂರಿನ ದಾನಿ ಹಾಗೂ ಖ್ಯಾತ ಉದ್ಯಮಿಗಳಾಗಿದ್ದ ದಿ| ಎಂ.ಎನ್. ಭಟ್ ಸ್ಮರಣಾರ್ಥ ಅವರ ಪುತ್ರ ಯಜ್ಞನಾರಾಯಣ ಭಟ್ ಅವರು ಒದಗಿಸಿದರೆ, ವೀರಬಾಹು (ಸತ್ಯಹರಿಶ್ಚಂದ್ರ) ವಿಗ್ರಹವನ್ನು ದಿ| ಕೆ.ಎನ್. ಪೈ ಅವರ ಸ್ಮರಣಾರ್ಥ ಅವರ ಪತ್ನಿ ಮತ್ತು ಮಕ್ಕಳು ಕೊಡುಗೆಯಾಗಿ ನೀಡಿದ್ದಾರೆ.

 ರುದ್ರಭೂಮಿ ಅಭಿವೃದ್ಧಿಗೆ ಡಾ| ಹೆಗ್ಗಡೆಯವರು ಪ್ರೇರಣೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ| ವೀರೇಂದ್ರ ಹೆಗ್ಗಡೆಯವರು ೧೯೯೮ರಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಿಂದೂರುದ್ರಭೂಮಿಗಳ ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರು. ಈ ಯೋಜನೆ ಮೂಲಕ ಹಲವು ರಾಜ್ಯದಲ್ಲಿ ನೂರಾರು ಹಿಂದೂರುದ್ರ ಭೂಮಿಗಳು ಅಭಿವೃದ್ಧಿ ಕಂಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.