ಬಾಲಿಕೆಯರ ವಾಲಿಬಾಲ್ ಪಂದ್ಯಾಟ ತಾಲೂಕಿನ ಎರಡು ತಂಡ ರಾಷ್ಟ್ರಮಟ್ಟಕ್ಕೆ

ಬೆಳ್ತಂಗಡಿ: ಶಿವಮೊಗ್ಗದ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಬಾಲಿಕೆಯರ ವಾಲಿಬಾಲ್ ಪಂದ್ಯಾಟದಲ್ಲಿ 14 ಮತ್ತು 17 ರ ವಯೋಮಾನದ ಎರಡೂ ತಂಡಗಳು ಜಯಗಳಿಸಿದ್ದು, ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ. 14 ವಯೋಮಾನದ ಪಂದ್ಯಾಟದಲ್ಲಿ ಬಂದಾರು ಸರಕಾರಿ ಉನ್ನತೀಕರಿಸಿದ ಹಿ. ಪ್ರಾ ಶಾಲೆಯ ತಂಡ ಪ್ರಥಮ
ಸ್ಥಾನಗಳಿಸಿದರೆ, 17 ರ ವಯೋಮಾನದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತಕ್ಕೊಳಪಟ್ಟ ಮುಂಡಾಜೆ ಪ್ರೌಢ ಶಾಲೆ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಬಂದಾರು ತಂಡದಲ್ಲಿ: 14ರ ವಯೋಮಾನದ ಬಂದಾರು ತಂಡದಲ್ಲಿ ಅನ್ವಿತಾ, ಶ್ರೀಲತಾ, ಮೋಹಿನಿ, ಅಶ್ವಿನಿ ಕೆ, ಸಹನಾ, ರಕ್ಷಿತಾ ಮತ್ತು ಭೂಷಿತಾ ಇವರು ಉತ್ಕೃಷ್ಟವಾದ ಆಟದ ಪ್ರದರ್ಶನ ನೀಡಿದ್ದಾರೆ. ತಂಡದ ತರಬೇತುದಾರರಾಗಿ ಪ್ರಶಾಂತ್, ವ್ಯವಸ್ಥಾಪಕರಾಗಿ ರೇಖಾ ಮತ್ತು ಮಂಜುಶ್ರೀ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.
ಮುಂಡಾಜೆ ತಂಡದಲ್ಲಿ: 17 ವಯೋಮಾನದ ಮುಂಡಾಜೆ ತಂಡದಲ್ಲಿ ಕಪ್ತಾನೆಯಾಗಿ ತುಳಸಿ ತಂಡಕ್ಕೆ ಉತ್ತಮ ನಾಯಕತ್ವ ನೀಡುತ್ತಿದ್ದು, ಆಟಗಾರರಾದ ಸಂಗೀತ, ಚೈತನ್ಯಾ, ಮೋಕ್ಷಿತಾ, ಹರಿಣಾಕ್ಷಿ, ಪ್ರಗತಿ ಮತ್ತು ನಿಖಿತಾ(ಮುಂಡಾಜೆ ಶಾಲೆ) ನಿವೇದಿತಾ, ಭವ್ಯಾ, ಪ್ರಕೃತಿ, ಪ್ರೀತಿ ಮತ್ತು ಹೀನಾಖನಂ (ಡಿವೈಇಎಸ್ ಸ್ಪೋರ್ಟ್ಸ್ ಸ್ಕೂಲ್ ಹಾಸನ), ಉತ್ಕೃಷ್ಟ ಆಟದ ಪ್ರದರ್ಶನ ನೀಡಿದ್ದಾರೆ. ತಂಡದ ತರಬೇತುದಾರರಾಗಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗುಣಪಾಲ್ ಎಂ.ಎಸ್, ವ್ಯವಸ್ಥಾಪಕಿಯಾಗಿ ಚೇತನಾ ಡಿ.ಬಿ. ಕಾರ್ಯನಿರ್ವಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.