ಭಾರತ್ ಅಟೋ ಕಾರ್‍ಸ್‌ನಲ್ಲಿ ನ್ಯೂ ನೆಕ್ಸ್ಟ್ ಜೆನ್ ಎರ್‌ಟಿಗಾ-2018 ಮಾರುಕಟ್ಟೆಗೆ

ಉಜಿರೆ: ಉಜಿರೆ ಭಾರತ್ ಅಟೋ ಕಾರ್‍ಸ್ ಪ್ರೈ.ಲಿಮಿಟೆಡ್ ಬಹುನಿರೀಕ್ಷೆಯ 2018 ನ್ಯೂ ನೆಕ್ಸ್ಟ್ ಜೆನ್ ಎರ್‌ಟಿಗಾ ನೂತನ ಕಾರನ್ನು ತುಳುನಾಡ ಕಲಾವೈಭವದ ಸಹ ನಿರ್ದೇಶಕ ಪ್ರವೀಣ್ ಕುಮಾರ್ ಇಂದ್ರ ಹಾಗೂ ರೋಟರಿ ಕ್ಲಬ್‌ನ ಅಧ್ಯಕ್ಷ ಸಿವಿಲ್ ಇಂಜಿನಿಯರ್ ರೊ| ಜಗದೀಶ ರವರು ನ.27 ರಂದು ಉಜಿರೆಯಲ್ಲಿ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ತುಳುನಾಡ ಕಲಾವೈಭವದ ಸಹ ನಿದೇಶಕ ಪ್ರವೀಣ್ ಕುಮಾರ್ ಇಂದ್ರ ಮಾತನಾಡಿ, ನಾನೊಬ್ಬ ಮಾರುತಿ ಸುಜುಕಿಯ ಗ್ರಾಹಕ. ಉಜಿರೆ ಬೆಳೆಯುತ್ತಿರುವ ನಗರ. ಇಲ್ಲಿ ಇಂತಹ ಶೋರೂಂ ಇರುವುದು ನಮ್ಮಂತಹ ಗ್ರಾಹಕರಿಗೆ ಬಹಳ ಪ್ರಯೋಜನವಾಗಿದೆ ಎಂದರು. ರೋಟರಿಕ್ಲಬ್ ಅಧ್ಯಕ್ಷ ಜಗದೀಶ ಇಂಜಿನಿಯರ್ ಮಾತನಾಡಿ, ಭಾರತ್ ಬೀಡಿ ಕಂಪನಿ ಉದ್ಯಮದಿಂದ ಅತ್ಯುನ್ನತ ಯಶಸ್ಸನ್ನು ಕಂಡವರು, ಒಂದು ಒಳ್ಳೆಯ ಉದ್ಯಮವನ್ನು ಪ್ರಾರಂಭ ಮಾಡಿ ಭಾರಿ ಎತ್ತರಕ್ಕೇರಿದವರು, ಗ್ರಾಹಕರ ಬಳಿ ಬರುವ ಯೋಜನೆ ಮಾಡಿದ್ದು ಭಾರೀ ವಿಶೇಷ. ಒಬ್ಬ ಉದ್ಯಮಿ ಯಶಸ್ವಿಯಾದ ಮೇಲೆ ನನ್ನ ಬಳಿ ಬರಲಿ ಎನ್ನುವವರು. ಆದರೆ ಭಾರತ್ ಬೀಡಿ ಕಂಪನಿ ಮಾಲಕರು, ಅವರಲ್ಲಿ ಗ್ರಾಹಕರ ಬಳಿ ಬರುವ ಒಂದು ಚಿಂತನೆಯೊಂದಿಗೆ ಭಾರತ್ ಶೋರೂಂ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಇಲ್ಲಿಯ ಸಿಬ್ಬಂದಿ ವರ್ಗದವರು ಒಳ್ಳೆಯ ಸರ್ವಿಸ್ ನೀಡುತ್ತಾರೆ. ಹೀಗೆ ಉಜಿರೆಗೆ ಹೊಸ ಹೊಸ
ಉದ್ಯಮಗಳು ಬಂದರೆ ಇನ್ನೂ ಅಭಿವೃಧ್ಧಿಯಾಗುತ್ತದೆ. ಉದ್ಯೋಗ ಸಿಗುತ್ತದೆ ಮತ್ತು ಉದ್ಯಮ ಶೀಲದಿಂದ ಎಕ್ಸ್‌ಪರ್ಟ್ ಆಗುತ್ತದೆ ಎಂದರು.
ಸೀನಿಯರ್ ಸೇಲ್ಸ್ ಮ್ಯಾನೇಜರ್ ಡೆನ್ನಿಸ್ ಪ್ರಸ್ತಾವಣೆ ಮಾಡಿ, ಪಟ್ಟಣ ಹೊರತುಪಡಿಸಿ, 12 ವರ್ಷಗಳಲ್ಲಿ ನಾವು ನಂ.1 ಡೀಲರ್‍ಸ್ ಆಗಿದ್ದೇವೆ. ಈಗಾಗಲೇ 40 ಸಾವಿರ ವೆಹಿಕಲ್ಸ್ ಗ್ರಾಹಕರಿಗೆ ನೀಡಿದ್ದೇವೆ. ಈ ಕಾರು ಮೊದಲಿನ ಎರ್‌ಟಿಗಾಗಿಂತ 100% ಸಂಪೂರ್ಣ ಬದಲಾಗಿ ಬಂದಿದೆ ಎಂದರು.
ಕಾರಿನ ವಿಶೇಷತೆಗಳು: 3ಡಿ ಟೈಲ್ ಲಾಂಪ್ಸ್ ವಿದ್ ಎಲ್‌ಇಡಿ, ಸ್ಟೈಲಿಶ್ ನಿವ್ ಕ್ರೋಮ್ ಫ್ರಂಟ್ ಗ್ರಿಲ್, ಪ್ರೊಜೆಕ್ಟೆಡ್ ಹೆಡ್ ಲ್ಯಾಂಪ್ಸ್, ಫ್ಲೆಕ್ಸಿ5+2 ಸೀಟಿಂಗ್, ಲಾರ್ಜ್ ಲಗೇಜ್ ಕಮ್‌ಪೋರ್ಟ್ ಮೆಂಟ್, ಥರ್ಡ್ ರೋ ರೋ ರಿಕ್ಲಿನ್ ಸೀಟ್ಸ್, 5 ಕಲರ್‍ಸ್ ಕಾರ್‍ಸ್, ಪೆಟ್ರೋಲ್ ಹಾಗೂ ಡೀಸೆಲ್ ಸ್ಮಾರ್ಟ್ ಹೈಬ್ರೇಡ್ ಟೆಕ್ನಾಲಜಿ ಇಂಜಿನ್ ಪೆಟ್ರೋಲ್19.24 ಹಾಗೂ ಡೀಸೆಲ್ ಕಾರು 25.47 ಮೈಲೇಜ್ ಹೊಂದಿದೆ. ಸೇಫ್ಟಿ ಹಾಗೂ ಆಲ್‌ರೌಂಡ್ ಪರ್ಫಾಮೆನ್ಸ್ ಮತ್ತು ಕಂಪ್ಲೀಟ್ ಪೀಸ್ ಆಫ್ ಮೈಂಡ್ ಹೊಂದಿದೆ. ಟಚ್‌ಸ್ಕ್ರೀನ್ ಜೊತೆ ಆಡಿಯೋ ವೀಡಿಯೋ ಮತ್ತಿತರ ಹಲವು ಆಧುನಿಕ ಸೌಲಭ್ಯಗಳನ್ನು ಹೊಂದಿದೆ.
ಈ ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಮ್ಯಾನೇಜರ್ ಶಿನಪ್ಪ ನಾಯ್ಕ, ಉಜಿರೆ ಭಾರತ್ ಅಯರ್‍ನ್ ವರ್ಕ್ಸ್ ಮಾಲಕ ಪಾಂಡುರಂಗ ಬಾಳಿಗಾ, ಸುದ್ದಿಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ, ಪಟ್ಟಣ ಪಂಚಾಯತ್ ಸದಸ್ಯ ಜಯಾನಂದ ಗೌಡ, ಏರ್‌ಟೆಲ್ ಏರಿಯಾ ಮ್ಯಾನೇಜರ್ ಕಿರಣ್ ಕುಮಾರ್, ಮೋಹನ ಶೆಟ್ಟಿ ತಿಮರೋಡಿ, ನಾರಾಯಣ ಶೆಟ್ಟಿ ಜೈಭವಾನಿ, ಉಮೇಶ್ ಬೆಳ್ತಂಗಡಿ, ಬೆಳ್ತಂಗಡಿ ಸೇಲ್ಸ್ ಮ್ಯಾನೇಜರ್ ಪ್ರದೀಪ್ ಕುಮಾರ್ ಶೆಟ್ಟಿ, ವರ್ಕ್‌ಶಾಪ್ ಉಜಿರೆ ಮ್ಯಾನೇಜರ್ ಜನಾರ್ದನ, ಬೆಳ್ತಂಗಡಿ ವರ್ಕ್ಸ್‌ಶಾಪ್ ಮ್ಯಾನೇಜರ್ ಗಣೇಶ್, ಟ್ರುವ್ಯಾಲ್ಯು ಮ್ಯಾನೇಜರ್ ಪ್ರವೀಣ್, ಬಾಡಿ ವರ್ಕ್ಸ್‌ಶಾಪ್ ಮ್ಯಾನೇಜರ್ ಜಗದೀಶ್, ಸ್ಪೇರ್‌ಪಾರ್ಟ್ಸ್ ಮ್ಯಾನೇಜರ್ ಯಶವಂತ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಟೀಮ್ ಲೀಡರ್ ಮಹಮ್ಮದ್ ಆಸೀಫ್ ಉಜಿರೆ ಕಾರಿನ ವಿಶೇಷತೆಗಳ ಮಾಹಿತಿ ನೀಡಿದರು. ದೀಕ್ಷಿತ್ ಗಾಣಿಗ ಕಾರ್ಯಕ್ರಮ ನಿರೂಪಿಸಿ, ಶ್ರೀಮಂದಾರ ಜೈನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.