ಡಿ. 15,16: ಮಂಗಳೂರಿನಲ್ಲಿ ಜಿಲ್ಲಾ ಯುವಜನ ಮೇಳ

ಬೆಳ್ತಂಗಡಿ: ಈ ವರ್ಷದ ದ. ಕ. ಜಿಲ್ಲಾ ಮಟ್ಟದ ಯುವಜನ ಮೇಳವು ತಣ್ಣೀರುಬಾವಿ ಯುವಕ ಮಂಡಲದ ಸಾರಥ್ಯದಲ್ಲಿ ಡಿ.15,16 ರಂದು ಚಿತ್ರಪುರ ದೇವಸ್ಥಾನದ ಬಳಿ ಮತ್ತು ತಣ್ಣೀರುಬಾವಿ ರಂಗಮಂದಿರದಲ್ಲಿ ಹೀಗೆ ಎರಡು ವೇದಿಕೆಗಳಲ್ಲಿ ನಡೆಯಲಿದೆ ಎಂದು ತಾ| ಯುವ ಸಬಲೀಕರಣ ಕ್ರೀಡಾಧಿಕಾರಿ ಪ್ರಭಾಕರ್ ನಾರಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದ್ರಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮಂಗಳೂರಿನಿಂದ 59 ನಂಬರಿನ, ಅಥವಾ 45 ನಂಬರಿನ ರೂಟ್ ಬಸ್ಸಿನಲ್ಲಿ ಕಲಾವಿದರು ಆಗಮಿಸಬಹುದು. ಈ ಸ್ಪರ್ಧೆಯಲ್ಲಿ ತಾಲೂಕಿನ ಯುವಕ ಯುವತಿ ಮಂಡಲ, ಹವ್ಯಾಸಿ ಮಂಡಲಗಳ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗುವ ಸ್ಪರ್ಧಿಗಳು ನೇರವಾಗಿ ವಿಭಾಗೀಯ ಮಟ್ಟಕ್ಕೆ ಪ್ರವೇಶ ಪಡೆಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು ಹೆಚ್ಚಿನ ಮಾಹಿತಿ ಬೇಕಾದವರು  9449914186, 9740017807,  9731110762, 9513401637 ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.